ದಾಭೋಲ್ಕರ್‌ ಕೊಲೆಗೆ ಬಳಸಿದ್ದ ಪಿಸ್ತೂಲ್‌ ಸಮುದ್ರದಾಳದಲ್ಲಿ ಪತ್ತೆ?

By Suvarna News  |  First Published Mar 6, 2020, 5:14 PM IST

ದಾಭೋಲ್ಕರ್‌ ಕೊಲೆಗೆ ಬಳಸಿದ್ದ ಪಿಸ್ತೂಲ್‌ ಸಮುದ್ರದಾಳದಲ್ಲಿ ಪತ್ತೆ?| ನಾರ್ವೆಯ ಮುಳುಗು ತಜ್ಞರ ನೆರವಿನಿಂದ ಪತ್ತೆ


ನವದೆಹಲಿ[ಮಾ.06]: ಮಹಾರಾಷ್ಟ್ರದ ವಿಚಾರವಾದಿ ನರೇಂದ್ರ ದಾಭೋಲ್ಕರ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಪ್ರಗತಿ ಸಾಧಿಸಿರುವ ಸಿಬಿಐ, ಕೊಲೆಗೆ ಬಳಕೆ ಆಗಿದ್ದು ಎನ್ನಲಾದ ಪಿಸ್ತೂಲ್‌ವೊಂದನ್ನು ಅರಬ್ಬೀ ಸಮುದ್ರದಿಂದ ವಶಪಡಿಸಿಕೊಂಡಿದೆ.

ನಾರ್ವೆಯ ಆಳ ಸಮುದ್ರ ಮುಳುಗು ತಜ್ಞರು ಮತ್ತು ತಂತ್ರಜ್ಞಾನದ ನೆರವಿನೊಂದಿಗೆ ಪಿಸ್ತೂಲ್‌ ಪತ್ತೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಪತ್ತೆ ಹಚ್ಚಲಾದ ಪಿಸ್ತೂಲ್‌ ಅನ್ನು ದಾಭೋಲ್ಕರ್‌ ಹತ್ಯೆಗೆ ಬಳಸಲಾಗಿತ್ತೇ ಎನ್ನುವುದನ್ನು ತಿಳಿವ ಸಲುವಾಗಿ ಅದನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ.

Tap to resize

Latest Videos

ಬಾಲಿವುಡ್’ನಲ್ಲೂ ಗೌರಿ ಹತ್ಯೆಗೆ ಖಂಡನೆ

ಹಂತಕರು ಕೊಲೆಗೆ ಬಳಸಿದ ಪಿಸ್ತೂಲ್‌ ಅನ್ನು ಥಾಣೆ ಸಮೀಪದ ಕೊರೆಗಾಂವ್‌ ಕಣಿವೆಯಲ್ಲಿ ಎಸೆದಿರುವ ಸಾಧ್ಯತೆ ಇದೆ ಎಂದು ಸಿಬಿಐ 2019ರಲ್ಲಿ ಕೋರ್ಟ್‌ಗೆ ಮಾಹಿತಿ ನೀಡಿತ್ತು. ಹಲವಾರು ದಿನಗಳ ಹುಡುಕಾಟದ ಬಳಿಕ ಪಿಸ್ತೂಲ್‌ ಅನ್ನು ಪತ್ತೆ ಮಾಡುವಲ್ಲಿ ಸಿಬಿಐ ಯಶಸ್ವಿಯಾಗಿದೆ.

click me!