
ಚಂಡೀಗಢ(ಜ.08): ಹರಾರಯಣದ ಅಟೇಲಿ ಮತ್ತು ರಾಜಸ್ಥಾನದ ಕಿಶಾನ್‌ಗಢಕ್ಕೆ ಸಂಪರ್ಕಿಸುವ ವಿದ್ಯುತ್ ಚಾಲಿತ 1.5 ಕಿ.ಮೀ ಉದ್ದದ ವಿಶ್ವದ ಮೊದಲ ಡಬಲ್ ಡೆಕ್ಕರ್ ಕಂಟೇನರ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಚಾಲನೆ ನೀಡಿದರು.
ಅಲ್ಲದೆ ಹರಾರಯಣದ ರೇವಾರಿ ಮತ್ತು ರಾಜಸ್ಥಾನದ ಮಾದರ್‌ಗೆ ಸಂಪರ್ಕ ಒದಗಿಸುವ ಸರಕು ಸಾಗಣೆ ರೈಲು(ಡಬ್ಲುಡಿಎಫ್‌ಸಿ) ಮಾರ್ಗಕ್ಕೂ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟನೆ ನೆರವೇರಿಸಿದ್ದಾರೆ.
ವಾಷಿಂಗ್ಟನ್ ಹಿಂಸಾಚಾರದಿಂದ ದುಃಖವಾಯ್ತು, ಶಾಂತಿಯುತವಾಗಿ ಅಧಿಕಾರ ಹಸ್ತಾಂತರವಾಗಲಿ: ಮೋದಿ!
ಬಳಿಕ ಮಾತನಾಡಿದ ಪ್ರಧಾನಿ ಮೋದಿ ಅವರು, ‘ದೇಶದ ಮೂಲಭೂತ ಸೌಕರ್ಯಗಳನ್ನು ಆಧುನೀಕರಿಸುವ ಮಹಾಯಜ್ಞವು ಇಂದು ಅತೀ ವೇಗ ಪಡೆದಿದೆ. ಕಳೆದ 5-6 ವರ್ಷಗಳ ಕಠಿಣ ಪರಿಶ್ರಮದಿಂದಾಗಿ ಈ ಮಹತ್ವದ ಯೋಜನೆಯು ಸಾಕಾರಗೊಂಡಿದೆ. ಫ್ರೈಟ್ ಕಾರಿಡಾರ್ ಯೋಜನೆಯು 21ನೇ ಶತಮಾನದಲ್ಲಿ ಭಾರತದ ಗೇಮ್‌ಚೇಂಜರ್ ಆಗಲಿದೆ’ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ