ಭಾರತ್ ಜೋಡೋ ಯಾತ್ರೆಗೆ ಹೊಸ ತಲೆನೋವು, ಕಳ್ಳರಿದ್ದಾರೆ ಎಚ್ಚರಿಕೆ ಎಂದ ಪೊಲೀಸ್!

By Suvarna NewsFirst Published Dec 11, 2022, 9:40 PM IST
Highlights

ಭಾರತ್ ಜೋಡೋ ಯಾತ್ರೆ ಆರಂಭಗೊಂಡ ದಿನಗಳಿಂದ ಹಲವು ಅಡೆತಡೆಗಳು ಎದುರಿಸುತ್ತಲೇ ಬಂದಿದೆ. ರಾಜಕೀಯವಾಗಿ, ಕಾನೂನಾತ್ಮಕವಾಗಿ ಸೇರಿದಂತೆ ಹಲವು ಸಮಸ್ಯೆಗಳನ್ನು ದಾಟಿ ಬಂದಿದೆ. ಇದೀಗ ಭಾರತ್ ಜೋಡೋ ಯಾತ್ರೆಗೆ ಕಳ್ಳರ ತಲೆನೋವು ಶುರುವಾಗಿದೆ.

ನವದೆಹಲಿ(ಡಿ.11): ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ಅಂತಿಮ ಘಟ್ಟ ತಲುಪುತ್ತಿದೆ. ಕನ್ಯಾಕುಮಾರಿಯಿಂದ ಆರಂಭಗೊಂಡ ಈ ಯಾತ್ರೆ ಕಾಶ್ಮೀರದಲ್ಲಿ ಅಂತ್ಯಗೊಳ್ಳಲಿದೆ. ಆರಂಭಿಕ ಹಂತದಲ್ಲಿ ಈ ಯಾತ್ರೆ ಹಲವು ಅಡೆ ತಡೆ ಎದುರಿಸಿದೆ. ಇದೀಗ ಭಾರತ್ ಜೋಡೋ ಯಾತ್ರೆಯಲ್ಲಿ ಜೇಬುಗಳ್ಳರು ಸೇರಿಕೊಂಡಿದ್ದಾರೆ. ಹೀಗಾಗಿ ಯಾತ್ರೆಯಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರು ತಮ್ಮ ತಮ್ಮ ವಸ್ತುಗಳ, ಹಣ, ಒಡವೆಗಳ ಕುರಿತು ಎಚ್ಚರಿಕೆಯಿಂದ ಇರಿ ಎಂದು ಮಧ್ಯಪ್ರದೇಶ ಪೊಲೀಸರು ಸೂಚಿಸಿದ್ದಾರೆ.

ಮಧ್ಯಪ್ರದೇಶ ಪೊಲೀಸರು ಈಗಾಗಲೇ ರಾಜಸ್ಥಾನ ಪೊಲೀಸರಿಗೆ ಈ ಕುರಿತು ಅಲರ್ಟ್ ನೀಡಿದ್ದಾರೆ. ಮಧ್ಯ ಪ್ರದೇಶದಲ್ಲಿ ಸಂಚರಿಸಿದ ರಾಹುಲ್ ಗಾಂಧಿ ಯಾತ್ರೆಯಲ್ಲಿ ಸುಮಾರು 8 ರಿಂದ 10 ಮಂದಿ ಕಳ್ಳರನ್ನು ಪೊಲೀಸರು ಹಿಡಿದಿದ್ದಾರೆ. ಹೀಗೆ ಪೊಲೀಸರ ಬಂಧಿಸಿದ ಕಳ್ಳರ ಪೈಕಿ ಹೆಚ್ಚಿನವರು ರಾಜಸ್ಥಾನದ ಮೂಲದವರಾಗಿದ್ದಾರೆ. ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಪಾಲ್ಗೊಳ್ಳುತ್ತಿರುವ ಕಾರಣ ಕಳ್ಳತನಕ್ಕೆ ಸುಲಭ ಎಂದು ಕಳ್ಳರು ಈ ಯಾತ್ರೆಯನ್ನು ಟಾರ್ಗೆಟ್ ಮಾಡಿದ್ದಾರೆ.

ಹಿಂದೂ ಎಲ್ಲಿ ಹಿಂದೂ... ರಾಹುಲ್ ಗಾಂಧಿ ಪ್ರಶ್ನಿಸುತ್ತಿರುವ ನೆಟ್ಟಿಗರು

ಯಾತ್ರೆಯಲ್ಲಿ ಪಾಲ್ಗೊಂಡ ಹಲವರು ಮೊಬೈಲ್, ಪರ್ಸ್ ಸೇರಿದಂತೆ ಹಲವು ವಸ್ತುಗಳನ್ನು ಕಳೆದುಕೊಂಡಿದ್ದಾರೆ. ಇದೀಗ ಪೊಲೀಸರು ಬಂಧಿಸಿದ ಕಳ್ಳರಿಗೆ 6 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈಗಾಗಲೇ ಈ ಕುರಿತು ಯಾತ್ರೆಯಲ್ಲಿ ಪಾಲ್ಗೊಂಡ ಕೆಲವರು ದೂರುಗಳನ್ನು ದಾಖಲಿಸಿದ್ದಾರೆ. ಹೀಗಾಗಿ ಭಾರತ್ ಜೋಡೋ ಯಾತ್ರೆ ಸಂಚರಿಸುವ ಮಾರ್ಗಗಳಲ್ಲಿ ಪೊಲೀಸರ ನಿಯೋಜನೆ ಮಾಡಬೇಕು. ಹದ್ದಿನ ಕಣ್ಣಿಡಬೇಕು ಎಂದು ಮಧ್ಯಪ್ರದೇಶ ಪೊಲೀಸರು ಎಚ್ಚರಿಸಿದ್ದಾರೆ.

ರಾಹುಲ್ ಗಾಂಧಿ ಜೊತೆ ಮಧ್ಯಪ್ರದೇಶ ಮಾಲ್ವಾ ಜಿಲ್ಲೆಯಲ್ಲಿ ಹೆಜ್ಜೆ ಹಾಕಿದ ಕಾಂಗ್ರೆಸ್ ನಾಯಕರ ಮೊಬೈಲ್ ಫೋನ್ ಕೂಡ ಕಳುವಾಗಿದೆ. ಇಷ್ಟೇ ಅಲ್ಲ 100ಕ್ಕೂ ಹೆಚ್ಚು ಕಾರ್ಯಕರ್ತರ ಫೋನ್, ಪರ್ಸ್, ಹಣ ಕಳ್ಳತನವಾಗಿದೆ. 

 

ಕೊಟ್ಟ ಮಾತನ್ನು ಈಡೇರಿಸಿದ ರಾಹುಲ್‌ ಗಾಂಧಿ, ಮೂವರು ಯುವತಿಯರಿಗೆ ಹೆಲಿಕಾಪ್ಟರ್‌ ರೈಡ್‌!

ಭಾರತ್‌ ಜೋಡೋದಲ್ಲಿ ಸೋನಿಯಾ ಗಾಂಧಿ ಪಾಲ್ಗೊಳ್ಳುವ ಸಾಧ್ಯತೆ
ಕಾಂಗ್ರೆಸ್‌ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ರಾಜಸ್ಥಾನಕ್ಕೆ 4 ದಿನದ ಪ್ರವಾಸ ಕೈಗೊಂಡಿದ್ದಾರೆ. ಭಾರತ್‌ ಜೋಡೋ ಯಾತ್ರೆ ಸದ್ಯ ರಾಜಸ್ಥಾನದಲ್ಲಿದೆ ಹಾಗೂ ಡಿ.10ರಂದು ಕೇವಲ ಮಹಿಳೆಯರು ಮಾತ್ರ ಭಾರತ್‌ ಜೋಡೋ ಯಾತ್ರೆಯಲ್ಲಿ ಭಾಗವಹಿಸಲಿದ್ದು, ಸೋನಿಯಾ ಸಹ ಯಾತ್ರೆಯಲ್ಲಿ ಪಾಲ್ಗೊಳ್ಳಬಹುದು ಎಂದು ಹೇಳಲಾಗುತ್ತಿದೆ. ಶುಕ್ರವಾರ ಸೋನಿಯಾ ಅವರ ಜನ್ಮದಿನವಿದ್ದು, ತಮ್ಮ ಮಕ್ಕಳಾದ ರಾಹುಲ್‌ ಹಾಗೂ ಪ್ರಿಯಾಂಕಾ ಜೊತೆಗೆ ಆಚರಿಸಿಕೊಳ್ಳಲಿದ್ದಾರೆ. ಸೋನಿಯಾ ಅವರ ಪ್ರವಾಸ ವಯಕ್ತಿಕವಾಗಿದ್ದು, ಈ ವೇಳೆ ಯಾವುದೇ ರಾಜಕೀಯ ನಾಯಕರನ್ನು ಸೋನಿಯಾ ಭೇಟಿ ಮಾಡುವುದಿಲ್ಲ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ಭಾರತ್ ಜೋಡೋ ಯಾತ್ರೆ ಜಮ್ಮು-ಕಾಶ್ಮೀರದಲ್ಲಿ 2023ರ ಜ.26ಕ್ಕೆ ಮುಕ್ತಾಯಗೊಳ್ಳಲಿದೆ. ಕನ್ಯಾಕುಮಾರಿಯಿಂದ ಶ್ರೀನಗರದವರೆಗೆ ಹಮ್ಮಿಕೊಂಡಿರುವ ಈ ಪಾದಯಾತ್ರೆ ದೆಹಲಿಗೆ ಡಿ.24ರಂದು ಪ್ರವೇಶಿಸಲಿದೆ. ಯಾತ್ರೆಯಲ್ಲಿ ಪಾಲ್ಗೊಂಡಿರುವ ಕಂಟೇನರ್‌ಗಳನ್ನು ಕೆಲ ದಿನಗಳ ಕಾಲ ಅಲ್ಲಿ ಸವೀರ್‍ಸ್‌ ಮಾಡಲಾಗುತ್ತದೆ. ನಂತರ ಯಾತ್ರೆ ಜಮ್ಮು ಕಾಶ್ಮೀರದತ್ತ ಸಾಗಲಿದೆ. ಅಲ್ಲಿ ಜ.26ಕ್ಕೆ ನಡಿಗೆ ಮುಕ್ತಾಯಗೊಳ್ಳಲಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್‌ ತಿಳಿಸಿದ್ದಾರೆ.
 

click me!