ಆರ್ಮಿ ಹಾಸ್ಪಿಟಲ್‌ಗೆ ಮೋದಿ ಭೇಟಿ: ಡಾಕ್ಟರ್ ಬದಲು ಫೋಟೋಗ್ರಾಫರ್ ಇದ್ದಾರೆ ಎಂದು ಕಾಂಗ್ರೆಸ್ ಟೀಕೆ

Suvarna News   | Asianet News
Published : Jul 04, 2020, 01:27 PM IST
ಆರ್ಮಿ ಹಾಸ್ಪಿಟಲ್‌ಗೆ ಮೋದಿ ಭೇಟಿ: ಡಾಕ್ಟರ್ ಬದಲು ಫೋಟೋಗ್ರಾಫರ್ ಇದ್ದಾರೆ ಎಂದು ಕಾಂಗ್ರೆಸ್ ಟೀಕೆ

ಸಾರಾಂಶ

ಗಲ್ವಾನ್ ಕಣಿವೆಯಲ್ಲಿ ನಡೆದ ದಾಳಿಯಲ್ಲಿ ಗಾಯಗೊಂಡ ಯೋಧರನ್ನು ಪ್ರಧಾನಿ ಮೋದಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿರುವ ಬಗ್ಗೆ ಕಾಂಗ್ರೆಸ್ ಟೀಕೆ ಮಾಡಿದೆ. ಕಾಂಗ್ರೆಸ್ ಮುಖಂಡರ ಟೀಕೆಗಳೇನು..? ಇಲ್ಲಿ ಓದಿ

ನವದೆಹಲಿ(ಜು.04): ಗಲ್ವಾನ್ ಕಣಿವೆಯಲ್ಲಿ ನಡೆದ ದಾಳಿಯಲ್ಲಿ ಗಾಯಗೊಂಡ ಯೋಧರನ್ನು ಪ್ರಧಾನಿ ಮೋದಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿರುವ ಬಗ್ಗೆ ಕಾಂಗ್ರೆಸ್ ಟೀಕೆ ಮಾಡಿದೆ.

ಗಾಯಗೊಂಡ ಯೋಧರ ಬಳಿ ಯಾವುದೇ ವೈದ್ಯರು, ನೀರಿನ ಬಾಟಲಿ, ಡ್ರಿಪ್ ಬಾಟಲಿಯಾಗಲಿ ಇಲ್ಲ. ಪ್ರಧಾನಿ ಮೋದಿ ಪ್ರಚಾರಕ್ಕಾಗಿ ಫೋಟೋ ತೆಗೆದುಕೊಂಡಿದ್ದಾರೆ ಎಂದಿದ್ದಾರೆ.

ಚೀನಾ ಗಡಿ ಖ್ಯಾತೆ: ಬೆಳ್ಳಂಬೆಳಗ್ಗೆ ಲಡಾಖ್‌ಗೆ ಬಂದಿಳಿದ ಪ್ರಧಾನಿ ಮೋದಿ..!

ಆರ್ಮಿ ಹಾಸ್ಪಿಟಲ್‌ಗ ಪ್ರಧಾನಿ ಮೋದಿ ಭೇಟಿ ಬಗ್ಗೆ ಟ್ವೀಟ್ ಮಾಡಿದ ಕಾಂಗ್ರೆಸ್ ಮುಖಂಡ ಅಭಿಷೇಕ್ ದತ್ತ, ಪ್ರಧಾನಿ ಗಾಯಗೊಂಡ ಯೋಧರನ್ನು ಭೇಟಿ ಮಾಡಿದಾಗ ವೈದ್ಯರ ಬದಲಾಗಿ, ಫೋಟೋಗ್ರಾಫರ್ಸ್‌ ಆಸ್ಪತ್ರೆಯಲ್ಲಿದ್ದರು ಎಂದು ವ್ಯಂಗ್ಯ ಮಾಡಿದ್ದಾರೆ.

ಯಾವ ಆfಯಂಗಲ್‌ನಲ್ಲಿ ಇದೊಂದು ಆಸ್ಪತ್ರೆ ರೀತಿ ಕಾಣುತ್ತಿದೆ..? ಅಲ್ಲಿ ಡ್ರಿಪ್ ಬಾಟಲ್ ಇಲ್ಲ, ಔಷಧವಿಲ್ಲ, ಬೆಡ್‌ಗಳ ಸಮೀಪ ನೀರಿನ ಬಾಟಲಿ ಇಲ್ಲ. ವೈದ್ಯರ ಸ್ಥಾನದಲ್ಲಿ ಫೋಟೋಗ್ರಾಫರ್ ಇದ್ದಾರೆ. ದೇವರ ಆಶಿರ್ವಾದದಿಂದ ನಮ್ಮೆಲ್ಲ ಯೋಧರು ಆರೋಗ್ಯವಾಗಿದ್ದಾರೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಮೋದಿ ಲಡಾಖ್ ಭೇಟಿ: ರಾಜ್ಯ ಬಿಜೆಪಿ ನಾಯಕರ ಮೆಚ್ಚುಗೆಯ ಸುರಿಮಳೆ

ಕಾಂಗ್ರೆಸ್ ನಾಯಕ ಸಲ್ಮಾನ್ ನಿಝಾಮಿಯೂ ಮೋದಿ ಆರ್ಮಿ ಆಸ್ಪತ್ರೆ ಭೇಟಿ ಬಗ್ಗೆ ಟೀಕಿಸಿದ್ದಾರೆ. ಮೋದಿ ಸುಳ್ಳು ಹೇಳೋಕೆ ಹುಟ್ಟಿದ್ದಾರೆ. ಮೊದಲು ನಮ್ಮ ಗಡಿಯೊಳಗೆ ಯಾರೂ ಬಂದಿಲ್ಲ ಎಂದರು.

ಆಮೇಲೆ ಚೀನಾ ದಾಳಿಯಲ್ಲಿ ಗಾಯಗೊಂಡ ಸೈನಿಕರ ಜೊತೆ ಫೋಟೋ ಹಾಕಿದರು. ಕೆಲವು ಮೀಡಿಯಾಗಳು ಅವರಿಗಾದ ಡ್ಯಾಮೇಜ್ ಮರೆಮಾಚಬಹುದೇನೋ, ಆದರೆ ನಮ್ಮ ದೇಶಕ್ಕಾದ ತೊಂದರೆ ಮಾತ್ರ ಅಗಾಧ ಎಂದು ಬರೆದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ತಮಿಳು ಚಿತ್ರದಲ್ಲಿ ಕನ್ನಡ ಹಾಡು ಬಳಸಿದ್ದಕ್ಕೆ ದಂಡ, ಒಟಿಟಿ ರಿಲೀಸ್‌ಗೂ ಮುನ್ನ 30 ಲಕ್ಷ ಠೇವಣಿ ಇಡಿ ಎಂದ ಕೋರ್ಟ್‌!
ರಕ್ಷಿಸಲು ಹೋದವನನ್ನೇ ಕೆಳಗೆ ತಳ್ಳಿದ ಮಾನಸಿಕ ಅಸ್ವಸ್ಥ: ಜೀವ ಉಳಿಸಲು ಹೋಗಿ ಕೈಕಾಲು ಮುರಿದುಕೊಂಡ ಯುವಕ