
ಕಾನ್ಪುರ(ಜು.04): ತನ್ನನ್ನು ಕಾಪಾಡಿದ ವ್ಯಕ್ತಿಯೊಬ್ಬರ ಸಾವಿನಿಂದ ನಾಯಿಯೊಂದು ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಅಚ್ಚರಿ ಮತ್ತು ಅಷ್ಟೇ ಕರುಣಾಜನಕ ಘಟನೆಯೊಂದು ಉತ್ತರಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಈ ಕುರಿತ ಸುದ್ದಿಯೊಂದು ಇದೀಗ ಭಾರೀ ವೈರಲ್ ಆಗಿದೆ.
12 ವರ್ಷಗಳ ಹಿಂದೆ ಕಾನ್ಪುರದ ಡಾ. ಅನಿತಾ ರಾಜ್ ಸಿಂಗ್ ಅವರು ಕರುಣಾಜನಕ ಸ್ಥಿತಿಯಲ್ಲಿದ್ದ ನಾಯಿಮರಿಯೊಂದನ್ನು ರಕ್ಷಿಸಿದ್ದರು. ಅದನ್ನು ಮನೆಗೆ ತಂದು ಸಾಕಿ, ಅದಕ್ಕೆ ಜಯಾ ಎಂದು ಹೆಸರಿಟ್ಟು ಮನೆಯ ಸದಸ್ಯೆಯಂತೆಯೇ ನೋಡಿಕೊಳ್ಳುತ್ತಿದ್ದರು. ಈ ನಡುವೆ ಇತ್ತೀಚೆಗೆ ಅನಿತಾ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು.
ಕಾಡುಬೆಕ್ಕುಗಳ ಸರಣಿ ಸಾವು: ಶುರುವಾಯ್ತು ಹೊಸ ಆತಂಕ
ಅವರ ದೇಹವನ್ನು ಮನೆಗೆ ಕರೆತರುತ್ತಲೇ, ನಾಯಿಯು ಜೋರಾಗಿ ಬೊಗಳಲು ಆರಂಭಿಸಿತಂತೆ. ಬಳಿಕ ಮನೆಯ ಮೆಟ್ಟಿಲುಗಳನ್ನು ಹತ್ತಿ ಕಟ್ಟಡದ ಮೇಲೆ ಹೋಗಿ ಅಲ್ಲಿಂದ ಬಿದ್ದು ಸಾವನ್ನಪ್ಪಿತು. ಶ್ವಾನವನ್ನು ತಕ್ಷಣವೇ ಕರೆದೊಯ್ಯಲಾಯಿತಾದರೂ, ಅದು ಸಾವನ್ನಪ್ಪಿತು ಎಂದು ಅನಿತಾರ ಪುತ್ರ ತಿಳಿಸಿದ್ದಾರೆ. ಅಲ್ಲದೆ, ಅಮ್ಮನ ಅಂತ್ಯಸಂಸ್ಕಾರದ ಬಳಿಕ ಶ್ವಾನವನ್ನೂ ಮನೆಯ ಬಳಿ ಅಂತ್ಯಕ್ರಿಯೆ ನೆರವೇರಿಸಿದ್ದೇವೆ ಎಂದು ಅನಿತಾ ಅವರ ಮಗ ತೇಜಸ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ