* ಕೊರೋನಾ ಲಸಿಕೆ ಪೂರೈಸಬೇಕಾದರೆ ಕಠಿಣ ಷರತ್ತು
* ಅಮೆರಿಕ ಮೂಲದ ಫೈಝರ್ ಕಂಪನಿ, ಕೊನೆಗೂ ತನ್ನ ಪಟ್ಟು ಸಡಿಲಿಸಿದೆ
* ಶೀಘ್ರ ಭಾರತಕ್ಕೆ 5 ಕೋಟಿ ಡೋಸ್ ಲಸಿಕೆ?
ವಾಷಿಂಗ್ಟನ್(ಮೇ.16): ಕೊರೋನಾ ಲಸಿಕೆ ಪೂರೈಸಬೇಕಾದರೆ ತನ್ನ ಕಠಿಣ ಷರತ್ತುಗಳನ್ನು ಈಡೇರಿಸುವಂತೆ ಷರತ್ತು ಹಾಕಿದ್ದ ಅಮೆರಿಕ ಮೂಲದ ಫೈಝರ್ ಕಂಪನಿ, ಕೊನೆಗೂ ತನ್ನ ಪಟ್ಟು ಸಡಿಲಿಸಿದೆ ಎಂದು ಮೂಲಗಳು ತಿಳಿಸಿವೆ. ಹೀಗಾಗಿ ಮುಂದಿನ ಕೆಲ ತಿಂಗಳಲ್ಲೇ ವಿದೇಶದಿಂದ ಭಾರತಕ್ಕೆ 5 ಕೋಟಿ ಡೋಸ್‌ನಷ್ಟುಲಸಿಕೆ ಆಗಮಿಸಲಿದೆ ಎನ್ನಲಾಗಿದೆ.
ಒಂದು ವೇಳೆ ತನ್ನ ಲಸಿಕೆ ಪಡೆದ ಯಾವುದೇ ವ್ಯಕ್ತಿಯಲ್ಲಿ ಏನೇ ಅಡ್ಡ ಪರಿಣಾಮಗಳಾಗಿ ಅವರು ಭಾರತ ಅಥವಾ ಅಮೆರಿಕದಲ್ಲಿ ಕೇಸು ದಾಖಲಿಸಿದರೆ ಕೋರ್ಟ್ ವೆಚ್ಚ ಮತ್ತು ಪರಿಹಾರದ ಹಣವನ್ನು ಭಾರತವೇ ಭರಿಸಬೇಕು ಎಂಬ ಷರತನ್ನು ಫೈಝರ್ ಕಂಪನಿ ಒಡ್ಡಿತ್ತು ಎನ್ನಲಾಗಿದೆ. ಆದರೆ ಇದಕ್ಕೆ ಭಾರತ ಸರ್ಕಾರ ಸ್ಪಷ್ಟವಾಗಿ ನಿರಾಕರಿಸಿತ್ತು.
undefined
ಅದರ ಬೆನ್ನಲ್ಲೇ ಫೈಝರ್ ಕಂಪನಿ ಜೊತೆ ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳು ಮಾತುಕತೆ ನಡೆಸಿದ್ದು, ಈ ವೇಳೆ ತನ್ನ ಕಠಿಣ ಷರತ್ತು ಸಡಿಲಿಸಲು ಕಂಪನಿ ಒಪ್ಪಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona