ದೇಶವಿರೋಧಿ ಕೃತ್ಯಗಳ ಕಾರಣ ನಿಷೇಧಕ್ಕೆ ಒಳಗಾಗಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ), ಜಿಹಾದಿ ಕೃತ್ಯಗಳ ಮೂಲಕ ಭಾರತದಲ್ಲಿ ಇಸ್ಲಾಮಿಕ್ ಅಭಿಯಾನದ ಸಂಚು ಹೊಂದಿದೆ.
ನವದೆಹಲಿ (ಅ.19): ದೇಶವಿರೋಧಿ ಕೃತ್ಯಗಳ ಕಾರಣ ನಿಷೇಧಕ್ಕೆ ಒಳಗಾಗಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ), ಜಿಹಾದಿ ಕೃತ್ಯಗಳ ಮೂಲಕ ಭಾರತದಲ್ಲಿ ಇಸ್ಲಾಮಿಕ್ ಅಭಿಯಾನದ ಸಂಚು ಹೊಂದಿದೆ. ಇದಕ್ಕಾಗಿ ಹಿಂಸೆ, ಉಗ್ರವಾದದ ಹೊರತಾಗಿ ಬೀದಿ ನಾಟಕ, ರಾಜಕೀಯ ವಿಷಯಗಳನ್ನೂ ಬಳಸಿಕೊಳ್ಳು ತಿದೆ ಎಂಬ ಗಂಭೀರ ವಿಷಯವನ್ನು ಜಾರಿ ನಿರ್ದೇಶನಾಲಯ ಬಹಿರಂಗಪಡಿಸಿದೆ.
ಅಲ್ಲದೆ, ವಿದೇಶಗಳಲ್ಲಿ ಪಿಎಫ್‌ಐಗೆ 13000 ಸಕ್ರಿಯ ಕಾರಕರ್ತರು ಇದ್ದಾರೆ. ಇದುವರೆಗೂ 26 ಪಿಎಫ್‌ಐ ಸದಸ್ಯರನ್ನು ಬಂಧಿಸಿದ್ದು, ಸಂಘಟನೆಗೆ ಸೇರಿದ 62 ಕೋಟಿ ರು.ಮೌಲ್ಯದ ಆಸ್ತಿ ಜಪ್ತಿ ಮಾಡಲಾಗಿದೆ ಎಂದು ಇ.ಡಿ. ಹೇಳಿದೆ. ಅ.16ರಂದು ಪಿಎಫ್‌ಐ ನಂಟಿನ ವ್ಯಕ್ತಿಗಳಿಗೆ ಸೇರಿದ 35 ಕೋಟಿ ರು. ಮೌಲ್ಯದ ಆಸ್ತಿ ಜಪ್ತಿ ಮಾಡಿರುವುದಾಗಿ ಹೇಳಿಕೆ ಬಿಡುಗಡೆ ಮಾಡಿರುವ ಇ.ಡಿ., ಈ ವೇಳೆ ಪಿಎಫ್‌ಐನ ಕಾರ್ಯವಿಧಾನಗಳ ಕುರಿತು ಬೆಳಕು ಚೆಲ್ಲಿದೆ.
undefined
ವಿದೇಶಗಳಲ್ಲೂ ಘಟಕ: ಪಿಎಫ್‌ಐ, ಸಿಂಗಾಪುರ ಮತ್ತು ಹಲವು ಕೊಲ್ಲಿ ದೇಶಗಳಲ್ಲಿ 13000 ಸಕ್ರಿಯ ಕಾರಕರ್ತರನ್ನು ಹೊಂದಿದೆ. ಈ ದೇಶಗಳಲ್ಲಿ ಜಿಲ್ಲಾ ಮಟ್ಟದ ಘಟಕ ಸ್ಥಾಪಿಸಲಾಗಿದೆ. ಪ್ರತಿ ಘಟಕಕ್ಕೂ ಹಣ ಸಂಗ್ರಹದ ಗುರಿ ನೀಡಲಾಗಿದೆ. ಹೀಗೆ ಸಂಗ್ರಹಿಸಿದ ಹಣವನ್ನು ಹವಾಲಾ ಮತ್ತು ರಹಸ್ಯ ಬ್ಯಾಂಕಿಂಗ್ ಮೂಲಕ ಭಾರತಕ್ಕೆ ರವಾನಿಸಲಾಗುತ್ತಿದೆ ಎಂದು ಇ.ಡಿ. ಹೇಳಿದೆ.
ಎಚ್.ಡಿ.ಕುಮಾರಸ್ವಾಮಿಗೆ ಸಿಎಂ ಸಿದ್ದರಾಮಯ್ಯ ಮೇಕೆದಾಟು ಸವಾಲ್
ದುಷ್ಕತ್ಯಕ್ಕೆ ಬಳಕೆ: ವಿದೇಶಗಳಿಂದ ಸಂಗ್ರಹಿಸಿದ ಹಣವನ್ನು ಭಾರತದಲ್ಲಿ ಭಯೋತ್ಪಾದನಾ ಕೃತ್ಯ ಮತ್ತು ಕಾನೂನು ಬಾಹಿರ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ ಎಂದು ಹೇಳಿದೆ.
ತರಬೇತಿ: ಪಿಎಫ್‌ಐ ಸಂಘಟನೆ ದೈಹಿಕ ತರಬೇತಿ ಹೆಸರಲ್ಲಿ ತನ್ನ ಕಾರ್ಯಕರ್ತರಿಗೆ ಶಸ್ತ್ರಾಸ್ತ್ರ ತರಬೇತಿ, ದೊಣ್ಣೆ ದಾಳಿ, ಚೂರಿ ಇರಿತ, ಗುದ್ದುವುದು, ಒದೆಯುವುದು ಮೊದಲಾದ ತರಬೇತಿ ನೀಡುತ್ತಿದೆ. ವಿದೇಶಿ ಉಗ್ರ ಸಂಘಟನೆಯೊಂದರಿಂದ ಮಾರಕ ಶಸ್ತ್ರಾಸ್ತ್ರ ಖರೀದಿಗೂ ಸಂಘಟನೆಯೋಜಿಸಿತ್ತು. ಇದನ್ನು ಬಳಸಿ ಪ್ರಮುಖ ವ್ಯಕ್ತಿಗಳು ಮತ್ತು ಆಯಕಟ್ಟಿನ ಸಿದ್ಧತೆ ಸ್ಥಳಗಳ ಮೇಲೆ ದಾಳಿಯ ಉದ್ದೇಶ ರೂಪಿಸಿತ್ತು. ಈ ಮೂಲಕ ದೇಶದ ಸಮಗ್ರತೆ, ಸಾರ್ವಭೌಮತೆಗೆ ಧಕ್ಕೆ ತರುವ ಮತ್ತು ಕೋಮುಸೌಹಾರ್ದಕ್ಕೆ ಧಕ್ಕೆ ತರುವ ಸಂಚು ರೂಪಿಸಿತ್ತು ಎಂದು ಇ.ಡಿ. ಹೇಳಿದೆ.
ತಂತ್ರ: ಭಾರತದಲ್ಲಿ ಆಂತರಿಕ ಯುದ್ದಕ್ಕೆ ನಡೆಸುವ ಭಾಗವಾಗಿ ಹಿಂಸಾತ್ಮಕ ದಾಳಿಯ ಜೊತೆಗೆ ರಾಜಕೀಯ ಮತ್ತು ಸಾಮಾಜಿಕ ವಿಷಯಗಳ ಕುರಿತಾದ ಬೀದಿ ನಾಟಕ ಹಾಗೂ ಮುಖ್ಯವಾಹಿನಿ ಹೊರತಾದ ಸಂವಹನ ಮಾಧ್ಯಮಗಳನ್ನು ಬಳಸಿಕೊಳ್ಳುತ್ತಿದೆ. ಜೊತೆಗೆ ಅಧಿಕಾರಿಗಳನ್ನು ಬೆದರಿಸುವ, ಅಪಹಾಸ್ಯ ಮಾಡುವ, ಅಕ್ರಮ ಮಾರ್ಗದಲ್ಲಿ ಅವರನ್ನು ಸಂಪರ್ಕಿಸುವ, ಹನಿಟ್ರ್ಯಾಪ್ ಮಾಡುವ, ಕಾನೂನು ಭಂಗ ಮಾಡುವ, ಪರ್ಯಾಯ ಸರ್ಕಾರ ರಚನೆ, ರಾಜಕೀಯವಾಗಿಸುಳ್ಳುಸುದ್ದಿಪ್ರಸಾರ, ಎದುರಾಳಿಯ ಕೈವಶ ತಪ್ಪಿಸಲು ಅಗತ್ಯ ವಸ್ತುಗಳ ಅನಗತ್ಯ ಖರೀದಿ, ಹಿಂಸಾತ್ಮಕವಾಗಿ ಭೂಮಿ ವಶ ಮಾಡುವ ತಂತ್ರಗಳನ್ನು ಪಿಎಫ್‌ಐ ಬಳಸಿಕೊಳ್ಳುತ್ತಿದೆ ಎಂದು ಇ.ಡಿ. ಹೇಳಿದೆ.
ಕೇಸ್ ವಾಪಸ್ ಪಡೆಯಲು ಸಿದ್ದರಾಮಯ್ಯ ಹಣ ನೀಡಿದ್ದಾರೆ: ಸಿ.ಟಿ.ರವಿ ಆರೋಪ
ಇ.ಡಿ. ಹೇಳಿಕೆ
• ವಿದೇಶಗಳಲ್ಲಿ ಪಿಎಫ್‌ಐನ 13,000 ಕಾರಕರ್ತರು ಸಕ್ರಿಯ
• ಸಿಂಗಾಪುರ, ಕೊಲ್ಲಿದೇಶಗಳಲ್ಲಿ ಉಗ್ರವಾದಕ್ಕಾಗಿ ಹಣ ಸಂಗ್ರಹ
• ಕೊಲ್ಲಿ ದೇಶಗಳಲ್ಲಿ ಪಿಎಫ್‌ಐನ ಜಿಲ್ಲಾವಾರು ಸಂಘಟನೆ ಸಕ್ರಿಯ
• ಭಾರತದಲ್ಲಿ ಇಸ್ಲಾಮಿಕ್ ಅಭಿ ಯಾನ ತೀವ್ರಕ್ಕೆ ಪಿಎಫ್‌ಐ ಯತ್ನ
• ಹಿಂಸೆ, ಉಗ್ರವಾದದ ಜತೆ ಬೀದಿ ನಾಟಕ, ರಾಜಕೀಯ ಚಟುವಟಿಕೆ
• ಪಿಎಫ್‌ಐ ನಂಟಿನ ವ್ಯಕ್ತಿಗಳಿಂದ ಇತ್ತೀಚೆಗೆ 35 ಕೋಟಿ ರು. ಜಪ್ತಿ
• ಪಿಎಫ್‌ಐನಿಂದ ಕಾರ್ಯಕರ್ತರಿಗೆ ಶಸ್ತ್ರಾಸ್ತ್ರತರಬೇತಿ, ದೊಣ್ಣೆದಾಳಿ, ಚೂರಿ ಇರಿತ, ಗುದ್ದುವುದು, ಒದೆವುದು ಮೊದಲಾದ ತರಬೇತಿ
• ಅಧಿಕಾರಿಗಳಿಗೆ ಹನಿಟ್ರಾಪ್ ಮಾಡುವ, ಸುಳ್ಳುಸುದ್ದಿ ಹರಡುವ, ಭೂಕಬಳಿಕೆ ಮಾಡುವ ಬಗ್ಗೆ ಸಂಚು