ನೋಯ್ಡಾ ಖಾಸಗಿ ಶಾಲೆಯಲ್ಲಿ ಮೂರು ವರ್ಷದ ಬಾಲಕಿ ಮೇಲೆ ಡಿಜಿಟಲ್ ರೇಪ್ ನಡೆದ ಪ್ರಕರಣ ದಾಖಲಾಗಿದೆ. ಈ ಪೈಕಿ ಮೂವರನ್ನು ಬಂಧಿಸಲಾಗಿದೆ. ಏನಿದು ಡಿಜಿಟಲ್ ರೇಪ್?
ನೋಯ್ಡಾ(ಅ.18 ಕೋಲ್ಕತಾ ವೈದ್ಯೆ ಪ್ರಕರಣದ ಬಳಿಕ ದೇಶದಲ್ಲಿ ಇತ್ತೀಚೆಗೆ ಹೆಣ್ಣು ಮಕ್ಕಳ ಮೇಲೆ ನಡೆದಿರುವ ಹಲವು ಕಿರುಕುಳ ಪ್ರಕರಣಗಳು ಬೆಳಕಿಗೆ ಬಂದಿದೆ. ಜನಸಾಮಾನ್ಯರಿಂದ ಹಿಡಿದು ಸಿನಿಮಾ ರಂಗದವರೆಗಿನ ಹಲವು ಪ್ರಕರಣಗಳು ಬಹಿರಂಗವಾಗಿದೆ. ಇದೀಗ ಉತ್ತರ ಪ್ರದೇಶದ ನೋಯ್ಡಾ ನಗರದಲ್ಲಿ ಬೆಚ್ಚಿಬೀಳಿಸುವ ಘಟನೆ ಬೆಳಕಿಗೆ ಬಂದಿದೆ. ಪ್ರೀ ಕೆಜಿ ತೆರಳುತ್ತಿರುವ ಮೂರು ವರ್ಷದ ಬಾಲಕಿಯ ಮೇಲೆ ಡಿಜಿಟಲ್ ರೇಪ್ ನಡೆದಿದೆ. ಈ ಕುರಿತು ಪ್ರಕರಣ ದಾಕಳಾಗಿದ್ದು, ಶಾಲಾ ಸಿಬ್ಬಂದಿಗಳ ಪೈಕಿ ಮೂವರನ್ನು ಬಂಧಿಸಲಾಗಿದೆ. ಇವರಲ್ಲಿ ಇಬ್ಬರು ಬಾಲಕಿಯ ಲೈಂಗಿಕ ಕಿರುಕುಳ ನೀಡಿದ್ದಾರೆ ಎನ್ನಲಾಗಿದ್ದು, ಬಂಧಿತ ಮೂರನೇ ವ್ಯಕ್ತಿ ಮೇಲೆ ಸಹಕರಿಸಿದ ಆರೋಪವಿದೆ . ಏನಿದು ಡಿಜಿಟಲ್ ರೇಪ್?
ಶಾಲಾ ಆವರಣದಿಂದ ಇಬ್ಬರ ಬಂಧನ
ಉತ್ತರ ಪ್ರದೇಶದ ನೋಯ್ಡಾ ಪೊಲೀಸರು ಗುರುವಾರ ಪ್ರಿ-ಪ್ರೈಮರಿಯಲ್ಲಿ ಓದುತ್ತಿದ್ದ ಮೂರು ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಖಾಸಗಿ ಶಾಲೆಯಿಂದ ಇಬ್ಬರನ್ನು ಬಂಧಿಸಿದ್ದಾರೆ. ನೋಯ್ಡಾ ಪೊಲೀಸರು ಈ ಹಿಂದೆ ಪ್ರಮುಖ ಆರೋಪಿ, ಹೌಸ್ ಕೀಪಿಂಗ್ ಸಿಬ್ಬಂದಿಯನ್ನು ಶಾಲಾ ಆವರಣದಲ್ಲಿ ಬಾಲಕಿಯ ಮೇಲೆ ಡಿಜಿಟಲ್ ರೇಪ್ ನಡೆಸಿದ ಆರೋಪದ ಮೇಲೆ ಬಂಧಿಸಿದ್ದರು. ಇದರಿಂದಾಗಿ ಒಟ್ಟು ಬಂಧಿತರ ಸಂಖ್ಯೆ ಮೂರಕ್ಕೆ ಏರಿದೆ.
ಘಟನೆಯನ್ನು ಮುಚ್ಚಿಹಾಕಲು ಯತ್ನ
ಇತ್ತೀಚಿನ ಬೆಳವಣಿಗೆಗಳ ಪ್ರಕಾರ, ಪೊಲೀಸರು ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಿದ ಆರೋಪದ ಮೇಲೆ ಶಿಕ್ಷಕಿ ಮತ್ತು ಶಾಲಾ ಆಡಳಿತಾಧಿಕಾರಿಯನ್ನು ಬಂಧಿಸಿದ್ದಾರೆ. ಘಟನೆಯ ಬಗ್ಗೆ ಯಾರಿಗೂ ಹೇಳಬಾರದು ಎಂದು ಆರೋಪಿ ಶಿಕ್ಷಕಿ ಬಾಲಕಿಗೆ ಹೇಳಿದ್ದಳು ಎಂದು ಬಾಲಕಿ ಆರೋಪಿಸಿದ್ದರಿಂದ ಈ ವಿಷಯ ಬೆಳಕಿಗೆ ಬಂದಿದೆ. ಶಾಲಾ ಆಡಳಿತದ ನಿರ್ಲಕ್ಷ್ಯಕ್ಕಾಗಿ ಆಡಳಿತಾಧಿಕಾರಿಯ ಮೇಲೆ ಆರೋಪ ಹೊರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಯಾವಾಗ ಮತ್ತು ಎಲ್ಲಿ ನಡೆಯಿತು?
ಅಕ್ಟೋಬರ್ 9 ರಂದು ನಡೆದ ಈ ಘಟನೆ, ಪ್ರಿ-ಪ್ರೈಮರಿ ವಿದ್ಯಾರ್ಥಿನಿಯ ಪೋಷಕರು ಹೊಟ್ಟೆ ನೋವಿನ ದೂರಿನ ಮೇರೆಗೆ ಆಸ್ಪತ್ರೆಗೆ ಕರೆದೊಯ್ದಾಗ ಬೆಳಕಿಗೆ ಬಂದಿದೆ. ಘಟನೆಯ ಮರುದಿನ ಅಕ್ಟೋಬರ್ 10 ರಂದು ನೋಯ್ಡಾ ಸೆಕ್ಟರ್ -20 ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇತರ ಶಂಕಿತರ ಮೇಲೆ ಘಟನೆಯನ್ನು ಮುಚ್ಚಿಹಾಕಲು ಯತ್ನಿಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಮುಖ್ಯ ಆರೋಪಿಯ ಮೇಲೆ ಈಗಾಗಲೇ ಐಪಿಸಿ ಸೆಕ್ಷನ್ 376 ಮತ್ತು ಪೋಕ್ಸೊ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಆರೋಪ ಹೊರಿಸಲಾಗಿದೆ.
ಡಿಜಿಟಲ್ ರೇಪ್ ಎಂದರೇನು?
ಡಿಜಿಟಲ್ ರೇಪ್ ಒಂದು ರೀತಿಯ ಲೈಂಗಿಕ ಕಿರುಕುಳವಾಗಿದೆ. ಹೆಣ್ಣು ಮಕ್ಕಳ ಮೇಲೆ ನಡೆಸಿರುವ ಲೈಂಗಿಕ ದೌರ್ಜನ್ಯವಾಗಿದೆ. ಬಲಾತ್ಕಾರವಾಗಿ ಖಾಸಗಿ ಅಂಗದೊಳಗೆ ಬೆರಳು ಅಥವಾ ಇನ್ಯಾವುದೇ ವಸ್ತುಗಳನ್ನು ತುರುಕುವುದು. ಒಪ್ಪಿಗೆ ಇಲ್ಲದೆ ಉದ್ರೇಕಗೊಳಿಸುವುದು, ಕಿರುಕುಳ ನೀಡುವುದು ಡಿಜಿಟಲ್ ರೇಪ್ ಅಡಿಯಲ್ಲಿ ಬರಲಿದೆ. 2012ರಲ್ಲಿ ಡಿಜಿಟಲ್ ರೇಪ್ ಕುರಿತ ಕಾನೂನು ಜಾರಿಗೆ ಬಂದಿದೆ. ಇದಕ್ಕೆ ಪ್ರಮುಖ ಕಾರಣ 2012ರಲ್ಲಿ ನಡೆದ ನಿರ್ಭಯ ಪ್ರಕರಣ. ನಿರ್ಭಯ ಪ್ರಕರಣದ ಬಳಿಕ ಸಂಸತ್ತು ಡಿಜಿಟಲ್ ರೇಪ್ ಕಾನೂನು ಜಾರಿಗೆ ತಂದಿದೆ. ಇದಕ್ಕೂ ಮೊದಲು ಲೈಂಗಿಕ ಕಿರುಕುಳ ಎಂದೇ ಪರಿಗಣಿಸಲಾಗಿತ್ತು. ಡಿಜಿಟಲ್ ರೇಪ್ ಅಡಿಯಲ್ಲಿ ಹೆಣ್ಣು ಮಕ್ಕಳ ಖಾಸಗಿ ಅಂಗದೊಳಗೆ ಬೆರಳು ಅಥವಾ ಇನ್ಯಾವುದೇ ವಸ್ತುಗನ್ನು ಬಲವಂತವಾಗಿ ತುರುಕುವುದಾಗಿದೆ. ಇದನ್ನು ಲೈಂಗಿಕ ಅಪರಾಧ ಎಂದು ಪರಿಗಣಸಲಾಗುತ್ತದೆ. ಇನ್ನು ಪೋಕ್ಸ್ ಕಾಯ್ಡೆಯಡಿ ಕೇಸ್ ದಾಖಲಾಗಿದ್ದರೆ, ಸೆಕ್ಷನ್ 5 ಮತ್ತು 6 ರ ಅಡಿಯಲ್ಲಿ 50,000 ರೂ. ದಂಡ ಹಾಗೂ ಕಠಿಣ ಜೈಲು ಶಿಕ್ಷೆ ವಿಧಿಸಲಾಗುತ್ತದೆ.
ಬಾಲಕಿ ಖಾಸಗಿ ಅಂಗಕ್ಕೆ ಚುಚ್ಚಿದ ಆರೋಪಿ
ನೋಯ್ಡಾ ಬಾಲಕಿ ಪ್ರಕರಣದಲ್ಲಿ ಸ್ಫೋಟಕ ಮಾಹಿತಿ ಬಯಲಾಗಿದೆ. ಘಟನೆ ನಡೆದ ಬಳಿಕ ಬಾಲಕಿ ಶಾಲೆಗೆ ತೆರಳಲು ನಿರಾಕರಿಸಿದ್ದಾಳೆ. ಒಂದೆಡೆ ಭಯ, ಆತಂಕ ಹೆಚ್ಚಾಗಿದ್ದರೆ, ಮತ್ತೊಂದೆಡೆ ಬಾಲಕಿಗೆ ಹೊಟ್ಟೆ ನೋವು ಶುರುವಾಗಿದೆ. ಹೊಟ್ಟೆ ನೋವಿನ ಕಾರಣ ಪೋಷಕರು ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ಮಾಡಿದ್ದಾರೆ. ತಪಾಸಣೆ ವೇಳೆ ಮಗುವಿನ ಖಾಸಗಿ ಅಂಗಗಳಲ್ಲಿ ಗಾಯಗಳಾಗಿರುವುದು ಪತ್ತೆಯಾಗಿದೆ. ವಿಚಾರಣೆಯ ನಂತರ, ಶಾಲೆಯಲ್ಲಿ ಪ್ಲೇಟ್ ಹಂಚುವ ವ್ಯಕ್ತಿಯೊಬ್ಬ ತನ್ನ ಖಾಸಗಿ ಅಂಗಗಳಲ್ಲಿ ಏನನ್ನೋ ಚುಚ್ಚಿದ್ದಾನೆ ಎಂದು ಬಾಲಕಿ ಪೋಷಕರಿಗೆ ತಿಳಿಸಿದ್ದಾಳೆ. ಶಾಲಾ ಆಡಳಿತ ಮಂಡಳಿ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಿದೆ ಅನ್ನೋ ಗಂಬೀರ ಆರೋಪವನ್ನೂ ಬಾಲಕಿ ಪೋಷಕರು ಮಾಡಿದ್ದಾರೆ.