ದೆಹಲಿಯಲ್ಲಿ ಹೊಸ ಎಲೆಕ್ಟ್ರಿಕ್ ವಾಹನ ನೀತಿ 2.0 ಜಾರಿಗೆ ಬರಲಿದ್ದು, ಪೆಟ್ರೋಲ್ ಬೈಕ್ ಮತ್ತು ಸಿಎನ್‌ಜಿ ಆಟೋಗಳನ್ನು ನಿಷೇಧಿಸುವ ಸಾಧ್ಯತೆ ಇದೆ. 2025 ರಿಂದ ಸಿಎನ್‌ಜಿ ಆಟೋಗಳ ನೋಂದಣಿ ಸ್ಥಗಿತ.
ಭಾರತದಲ್ಲಿ ಈ ಹಿಂದೆ ಅತಿಹೆಚ್ಚು ಟ್ರಾಫಿಕ್ ಜಾಮ್ ಹೊಂದಿದ್ದ ಮತ್ತು ಮಾಲಿನ್ಯ ನಗರವೆಂಬ ಅಪಖ್ಯಾತಿ ಪಡೆದಿದ್ದ ದೆಹಲಿ ಇದೀಗ ಹೊಸ ಎಲೆಕ್ಟ್ರಿಕ್ ವಾಹನ ನೀತಿ (ಇವಿ ಪಾಲಿಸಿ 2.0) ತರಲು ರೆಡಿಯಾಗಿದೆ. ಇಲ್ಲಿ ಎಲ್ಲ ಪೆಟ್ರೋಲ್ ಬೈಕ್ ಹಾಗೂ ಸಿಎನ್‌ಜಿ ಆಟೋಗಳನ್ನು ನಿಷೇಧಿಸಲು ಮುಂದಾಗಿದೆ. ಇದೀಗ ವಿಶ್ವದ ಅತ್ಯಂತ ಹೆಚ್ಚು ಟ್ರಾಫಿಕ್ ಹೊಂದಿದ ನಗರವೆಂದಬ ಅಪಖ್ಯಾತಿ ಪಡೆದ ಬೆಂಗಳೂರಿನಲ್ಲಿಯೂ ಮುಂದಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನ ನೀತಿ ಜಾರಿಗೆ ಬರಬಹುದು ಎಂಬುದನ್ನು ತಳ್ಳಿಹಾಕುವಂತಿಲ್ಲ.
ದೆಹಲಿ ಸರ್ಕಾರ ಹೊಸ ಎಲೆಕ್ಟ್ರಿಕ್ ವಾಹನ ನೀತಿ (ಇವಿ ಪಾಲಿಸಿ 2.0) ತರಲು ರೆಡಿಯಾಗಿದೆ. ಈ ಹೊಸ ಎಲೆಕ್ಟ್ರಿಕ್ ವಾಹನ ನೀತಿಯ ಕರಡು ರಿಲೀಸ್ ಆಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇದರಲ್ಲಿ ಎಲೆಕ್ಟ್ರಿಕ್ ವಾಹನಗಳನ್ನ ಹೆಚ್ಚಾಗಿ ಬಳಸುವುದಕ್ಕೆ ಪ್ರೋತ್ಸಾಹ ನೀಡುವುದು, ಪೆಟ್ರೋಲ್-ಡೀಸೆಲ್, ಸಿಎನ್‌ಜಿ ಇಂಧನದ ವಾಹನಗಳನ್ನ ನಿಷೇಧಿಸುವ ಬಗ್ಗೆ ಮಾತುಕತೆ ನಡೀತಿದೆ. ಸಿಎನ್‌ಜಿ ಆಟೋರಿಕ್ಷಾಗಳನ್ನ ನಿಧಾನಕ್ಕೆ ಬ್ಯಾನ್ ಮಾಡುವುದಕ್ಕೆ ಹೊಸ ಪಾಲಿಸಿ ಹೇಳುತ್ತದೆ. ಜೊತೆಗೆ ಖಾಸಗಿ ಕಾರು ಹಾಗೂ ಬೈಕ್‌ಗಳಿಗೂ ಹೊಸ ನಿಯಮ ಜಾರಿ ಮಾಡಲು ದೆಹಲಿ ಸರ್ಕಾರ ಮುಂದಾಗಿದೆ.
ದೆಹಲಿ ಸರ್ಕಾರದ ಹೊಸ ಎಲೆಕ್ಟ್ರಿಕ್ ವಾಹನ ನೀತಿ (ಎಲೆಕ್ಟ್ರಿಕ್ ವೆಹಿಕಲ್ಸ್ ಪಾಲಿಸಿ 2.0) ಪ್ರಕಾರ 2025ರ ಆಗಸ್ಟ್ 15ರಿಂದ ದೆಹಲಿಯಲ್ಲಿ ಸಿಎನ್‌ಜಿ ಆಟೋ ರಿಕ್ಷಾಗಳನ್ನ ನೋಂದಣಿ ಮಾಡುವುದಿಲ್ಲ. ಜೊತೆಗೆ 10 ವರ್ಷಕ್ಕಿಂತ ಹಳೆಯ ಸಿಎನ್‌ಜಿ ಆಟೋರಿಕ್ಷಾಗಳನ್ನು ಎಲೆಕ್ಟ್ರಿಕ್‌ಗೆ ವಾಹನವಾಗಿ ಪರಿವರ್ತಿಸಬೇಕು. ಅಂದರೆ ಇನ್ನುಮುಂದೆ ಹಳೆ ಆಟೋಗಳಿಗೆ ಬ್ಯಾಟರಿ ಮತ್ತು ಎಲೆಕ್ಟ್ರಿಕ್ ಮೋಟಾರ್ ಇರೋ ಇವಿ ಕನ್ವರ್ಷನ್ ಕಿಟ್ ಹಾಕಿಸಬೇಕು. ಜೊತೆಗೆ, ಗೂಡ್ಸ್ ಸಾಗಿಸೋಕೆ ಬಳಸುವ ಸಿಎನ್‌ಜಿ ತ್ರಿಚಕ್ರ ವಾಹನಗಳನ್ನ ರಿಜಿಸ್ಟರ್ ಮಾಡುವುದಿಲ್ಲ ಎಂಬುದನ್ನು ಕೂಡ ಈ ಇವಿ ನೀತಿಯ ಕರಡಿನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಲೈಸೆನ್ಸ್ ಬೇಡ, RTO ನೋಂದಣಿ ಇಲ್ಲ! ರೂ.59000ಕ್ಕೆ 3 ಆಕರ್ಷಕ ಬಣ್ಣಗಳಲ್ಲಿ ಇವಿ ಸ್ಕೂಟರ್
ದೆಹಲಿ ಇವಿ ಕರಡುನಲ್ಲಿ 2026 ಆಗಸ್ಟ್‌ನಿಂದ ಎಲೆಕ್ಟ್ರಿಕ್ ಅಲ್ಲದ ದ್ವಿಚಕ್ರ ವಾಹನಗಳನ್ನು (ಸ್ಕೂಟರ್-ಬೈಕ್) ರಿಜಿಸ್ಟ್ರೇಷನ್ ಮಾಡುವುದನ್ನು ನಿಲ್ಲಿಸಲಾಗುತ್ತದೆ. ಅಂದರೆ, ಮುಂದಿನ ವರ್ಷ ಆಗಸ್ಟ್‌ನಿಂದ ಪೆಟ್ರೋಲ್, ಡೀಸೆಲ್, ಸಿಎನ್‌ಜಿ ಯಲ್ಲಿ ಓಡಾಡುವ ದ್ವಿಚಕ್ರ ವಾಹನ ದೆಹಲಿಯಲ್ಲಿ ರಿಜಿಸ್ಟರ್ ಮಾಡಲ್ಲ. ದೆಹಲಿ ಸರ್ಕಾರದ ಸಾರಿಗೆ ಇಲಾಖೆ ಈ ನಿಯಮಕ್ಕೆ ಒಪ್ಪಿಗೆ ಕೊಟ್ಟಿದೆ. ಅಂತಿಮವಾಗಿ ಮಂತ್ರಿಮಂಡಲದ ಮುಂದೆ ಇಟ್ಟು, ಇವಿ ನೀತಿ ಜಾರಿಗೆ ತರಲಾಗುತ್ತದೆ.
ದೆಹಲಿಯ ಇವಿ ನೀತಿಯಲ್ಲಿ ಖಾಸಗಿ ಕಾರು ಮಾಲೀಕರಿಗೂ ಹೊಸ ನಿಯಮ ಮಾಡಲಾಗುತ್ತದೆ. ದೆಹಲಿಯಲ್ಲಿ ಜಾಸ್ತಿ ಜನಕ್ಕೆ ಒಂದಕ್ಕಿಂತ ಹೆಚ್ಚು ಫೋರ್ ವೀಲರ್ ಇವೆ. ಅದಕ್ಕೆ ಮಾಲಿನ್ಯ ಕಡಿಮೆ ಮಾಡೋಕೆ ಮತ್ತು ಎಲೆಕ್ಟ್ರಿಕ್ ವಾಹನಗಳನ್ನ ಹೆಚ್ಚಾಗಿ ಬಳಸುವುದಕ್ಕೆ ಸರ್ಕಾರ ಹೊಸ ನಿಯಮ ಜಾರಿಗೆ ತರಲು ರೆಡಿಯಾಗಿದೆ. ದೆಹಲಿಯಲ್ಲಿ ಪ್ರತಿ ಮನೆಯಲ್ಲೂ 3ನೇ ಕಾರು ತೆಗೆದುಕೊಂಡರೆ ಅದು ಎಲೆಕ್ಟ್ರಿಕ್ ಆಗಿರಬೇಕು ಎಂದು ಕರಡು ನಿಯಮ ಹೇಳುತ್ತದೆ. ಅಂದರೆ, ಎರಡು ಕಾರು ಇರೋರು 3ನೇ ಕಾರು ತೆಗೆದುಕೊಂಡರೆ ಅದು ಎಲೆಕ್ಟ್ರಿಕ್ ಕಾರ್ ಮಾತ್ರ ಆಗಿರಬೇಕು.
2027ಕ್ಕೆ ದೆಹಲಿಯಲ್ಲಿ ರಿಜಿಸ್ಟರ್ ಆಗೋ ಹೊಸ ವಾಹನಗಳಲ್ಲಿ 95% ಎಲೆಕ್ಟ್ರಿಕ್ ಆಗಿರಬೇಕು ಮತ್ತು 2030ಕ್ಕೆ ಇದು 98% ಆಗಬೇಕು ಅಂತ ಮಾಡೋದು ಈ ಹೊಸ ಇವಿ ಪಾಲಿಸಿಯ ಮುಖ್ಯ ಗುರಿ. 2024ಕ್ಕೆ 25% ಎಲೆಕ್ಟ್ರಿಕ್ ವಾಹನಗಳನ್ನ ರಿಜಿಸ್ಟರ್ ಮಾಡಬೇಕು ಅಂತ ಹಳೆ ಪಾಲಿಸಿಯಲ್ಲಿ ಇತ್ತು. ಆದರೆ ಅದು 13ರಿಂದ 14% ಮಾತ್ರ ತಲುಪಲು ಸಾಧ್ಯವಾಗಿದೆ. ಅದಕ್ಕೆ ಎಲೆಕ್ಟ್ರಿಕ್ ವಾಹನಗಳನ್ನ ಹೆಚ್ಚಾಗಿ ಬಳಸುವುದಕ್ಕೆ ಕಠಿಣ ನಿಯಮವನ್ನು ಜಾರಿಗೆ ತರಲು ಸರ್ಕಾರ ರೆಡಿಯಾಗಿದೆ.
ಇದನ್ನೂ ಓದಿ: ಚಿಕ್ಕಬಳ್ಳಾಪುರದ ಜಂಗಮಕೋಟೆಯ 1033 ಎಕರೆಯಲ್ಲಿ ನಿರ್ಮಾಣವಾಗಲಿದೆ ಡೀಪ್ ಟೆಕ್ ಪಾರ್ಕ್!
ದೆಹಲಿ ಮುನಿಸಿಪಲ್ ಕಾರ್ಪೊರೇಷನ್, ನ್ಯೂ ದೆಹಲಿ ಮುನಿಸಿಪಲ್ ಕೌನ್ಸಿಲ್, ದೆಹಲಿ ಜಲ್ ಬೋರ್ಡ್‌ನವರು ಕೂಡ ತಮ್ಮ ವಾಹನಗಳು, ಬಾಡಿಗೆಗೆ ತೆಗೆದುಕೊಂಡಿರುವ ವಾಹನಗಳು ಮತ್ತು ಕಸ ಸಾಗಣೆ ಮಾಡುವ ವಾಹನಗಳನ್ನೆಲ್ಲಾ ನಿಧಾನಕ್ಕೆ ಎಲೆಕ್ಟ್ರಿಕ್ ವಾಹನಗಳಾಗಿ ಚೇಂಜ್ ಮಾಡಬೇಕು. 2027 ಡಿಸೆಂಬರ್ 31ರೊಳಗೆ ಎಲ್ಲ ಬೋರ್ಡ್‌ಗಳಲ್ಲಿ ಶೇ. 100% ಎಲೆಕ್ಟ್ರಿಕ್ ವಾಹನಗಳನ್ನ ಮಾಡಬೇಕು. ಡಿಆರ್‌ಸಿ ಮತ್ತು ಡಿಐಎಂಟಿಎಸ್ ಓಡಿಸೋ ಪಬ್ಲಿಕ್ ಟ್ರಾನ್ಸ್‌ಪೋರ್ಟ್ ಬಸ್‌ಗಳನ್ನ ಎಲೆಕ್ಟ್ರಿಕ್ ಬಸ್‌ಗಳನ್ನಾಗಿ ಮಾಡಬೇಕು. ಡಿಟಿಸಿ ಮತ್ತು ಡಿಐಎಂಟಿಎಸ್ ಸಿಟಿ ಒಳಗಡೆ ಓಡಾಡೋಕೆ ಎಲೆಕ್ಟ್ರಿಕ್ ಬಸ್‌ಗಳನ್ನ ಮತ್ತು ಬೇರೆ ರಾಜ್ಯಗಳಿಗೆ ಓಡಾಡೋಕೆ ಬಿಎಸ್ 6 ಸ್ಟ್ಯಾಂಡರ್ಡ್ ಬಸ್‌ಗಳನ್ನ ಮಾತ್ರ ತೆಗೆದುಕೊಳ್ಳಲಾಗುತ್ತದೆ.