Latest Videos

ಮುಂಬೈನಲ್ಲಿ ಅಗ್ಗವಾಯ್ತು ಪೆಟ್ರೋಲ್, ಡೀಸೆಲ್ ದರ; ಎಷ್ಟು ಇಳಿಕೆ? ಇಲ್ಲಿದೆ ಮಾಹಿತಿ

By Mahmad RafikFirst Published Jun 29, 2024, 8:37 PM IST
Highlights

ಮುಂಬೈ ಮಹಾನಗರದಲ್ಲಿ ತೈಲದ ಮೇಲಿನ ವ್ಯಾಟ್ (value-added tax) ಕಡಿತಗೊಳಿಸಲಾಗುವುದು ಎಂದು ಮಹಾರಾಷ್ಟ್ರ ಸರ್ಕಾರ (Maharashtra Government) ಹೇಳಿಕೊಂಡಿದೆ. 

ಮುಂಬೈ: ಮಾಹಾರಾಷ್ಟ್ರ ರಾಜಧಾನಿ ಮುಂಬೈ ಮಹಾನಗರದಲ್ಲಿ (Mumbai metropolitan region) ಪೆಟ್ರೋಲ್ ಮತ್ತು ಡೀಸೆಲ್ ಬೆಲೆ (Petrol and Diesel Price) ಇಳಿಕೆಯಾಗಲಿದೆ ಎಂದು ಉಪಮುಖ್ಯಮಂತ್ರಿ ಅಜಿತ್ ಪವಾರ್  (Ajit Pawar, the Deputy Chief Minister and Finance Minister) ಘೋಷಣೆ ಮಾಡಿದ್ದಾರೆ. ಹಾಗಾಗಿ ಮುಂಬೈನಲ್ಲಿ ಲೀಟರ್‌ ಪೆಟ್ರೋಲ್‌ಗೆ 65 ಪೈಸೆ ಮತ್ತು ಡೀಸೆಲ್‌ ಮೇಲೆ 2.60 ರೂಪಾಯಿ ಅಗ್ಗವಾಗಲಿದೆ. ಮುಂಬೈ ಮಹಾನಗರದಲ್ಲಿ ತೈಲದ ಮೇಲಿನ ವ್ಯಾಟ್ (value-added tax) ಕಡಿತಗೊಳಿಸಲಾಗುವುದು ಎಂದು ಮಹಾರಾಷ್ಟ್ರ ಸರ್ಕಾರ (Maharashtra Government) ಹೇಳಿಕೊಂಡಿದೆ. 
 
ವಾರ್ಷಿಕ್ ಬಜೆಟ್ ಮಂಡನೆ ವೇಳೆ ಅಜಿತ್ ಪವಾರ್, ತೈಲದ ಮೇಲಿನ ವ್ಯಾಟ್ ಕಡಿತಗೊಳಿಸಲಾಗುವುದು. ಈ ಹಿನ್ನೆಲೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆಯಾಗಲಿದೆ. ಇಂದು ಮುಂಬೈ ನಗರ ಪ್ರದೇಶದಲ್ಲಿ ಮಾತ್ರ ಅನ್ವಯವಾಗಲಿದೆ ಎಂದು ಹೇಳಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ (Maharashtra Eknath Shindhe), ಬಜೆಟ್‌ನಲ್ಲಿ ವ್ಯಾಟ್‌ ಕಡಿತಗೊಳಿಸಲಾಗುತ್ತಿದೆ. ವಿಧಾನಸಭೆ ಮತ್ತು ವಿಧಾನಪರಿಷತ್‌ನಲ್ಲಿ ಅಂಗೀಕಾರ ಸಿಕ್ಕ ಕೂಡಲೇ ಅಂದ್ರೆ ಜುಲೈ1ರಿಂದ ಬೆಲೆ ಇಳಿಕೆಯ ಲಾಭ ಮುಂಬೈ ಜನತೆಗೆ ಸಿಗಲಿದೆ ಎಂದು ಮಾಹಿತಿ ನೀಡಿದ್ದಾರೆ. 

ಇದೇ ವರ್ಷ ಅಕ್ಟೋಬರ್‌ನಲ್ಲಿ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಎದುರಾಗಲಿದೆ. ಈ ಹಿನ್ನೆಲೆ ಶಿಂಧೆ ಸರ್ಕಾರ ಜನಪ್ರಿಯ ಘೋಷಣೆಗಳನ್ನು ಒಂದೊಂದಾಗಿ ಘೋಷಣೆ ಮಾಡಲು ಆರಂಭಿಸಿದೆ ಎಂಬ ವಿಶ್ಲೇಷಣೆಗಳು ಕೇಳಿ ಬಂದಿವೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನಿರೀಕ್ಷೆ ಸ್ಥಾನಗಳನ್ನು ಗೆಲ್ಲುವಲ್ಲಿ ವಿಫಲವಾಗಿತ್ತು. 

ನಂದಿನಿ ಹಾಲಿನ ದರ 2 ರೂ ಹೆಚ್ಚಳ ಮಾಡಿ ಕೆಎಂಎಫ್ ಆದೇಶ, ಹೊಸ ದರ ಪಟ್ಟಿ ಇಲ್ಲಿದೆ

ಶಿಂಧೆ ಸರ್ಕಾರದ ಜನಪ್ರಿಯ ಘೋಷಣೆಗಳು 

1.ಮುಖ್ಯಮಂತ್ರಿ ಮಾಝಿ ಲಡಕೀ ಬಹಿನ್ ಯೋಜನೆಯಡಿಯಲ್ಲಿ 21 ರಿಂದ 60 ವರ್ಷದೊಳಗಿನ ಮಹಿಳೆಯರಿಗೆ ಮಾಸಿಕ 1,500 ರೂಪಾಯಿ ಧನ ಸಹಾಯ ನೀಡುವುದು ಎಂದು ಮಹಾರಾಷ್ಟ್ರ ಸರ್ಕಾರ ಘೋಷಣೆ ಮಾಡಿದೆ. ಈ ಯೋಜನೆಗಾಗಿ ಸರ್ಕಾರ 46 ಸಾವಿರ ಕೋಟಿ ರೂ. ಮೀಸಲಿಡಲು ನಿರ್ಧರಿಸಲಾಗಿದೆ. 

2.ಮುಖ್ಯಮಂತ್ರಿ ಅನ್ನಪೂರ್ಣ ಯೋಜನೆ ಅಡಿಯಲ್ಲಿ ಅರ್ಹ ಕುಟುಂಬಳಿಗೆ ಮಾತ್ರ ಪ್ರತಿ ವರ್ಷ ಮೂರು ಉಚಿತ ಎಲ್‌ಪಿಜಿ ಸಿಲಿಂಡರ್ ನೀಡುವುದು. 

3.ಜುಲೈ 1ರಿಂದ ಹಾಲು ಉತ್ಪಾದಕ ರೈತರಿಗೆ 5 ರೂ. ಸಬ್ಸಿಡಿ ಘೋಷಿಸಲಾಗಿದೆ. ಇದರಿಂದ ಸುಮಾರು 2.93 ಲಕ್ಷ ರೈತರಿಗೆ ಲಾಭ ಸಿಗಲಿದೆ. 

4. 7.5 ಹೆಚ್‌ಪಿ ಪಂಪ್‌ಸೆಟ್ ಹೊಂದಿರುವ 44 ರೈತರಿಗೆ ಉಚಿತ ವಿದ್ಯುತ್ ನೀಡಲಾಗುವುದು. ಬಾಕಿ ಉಳಿದಿರುವ ರೈತರ ವಿದ್ಯುತ್ ಬಿಲ್ ಮನ್ನಾ ಮಾಡಲಾಗಿದೆ. ಇದೇ ರೀತಿಯಾಗಿ ಮಾಹಾರಾಷ್ಟ್ರ ಸರ್ಕಾರ ಹಲವು ಘೋಷಣೆ ಮಾಡಿದೆ.

ಬಡವರ ಬದುಕಿಗೆ ಮತ್ತೊಂದು ಹೊರೆ; ಹಾಲು, ಪೆಟ್ರೋಲ್‌ ಆಯ್ತು.. ಮೊಬೈಲ್‌ ರಿಚಾರ್ಜ್‌ ಕೂಡ ಈಗ ದುಬಾರಿ!

click me!