
ಪಾಟ್ನಾ(ಜೂ. 04) ಕೊರೋನಾ ಸಂಕಷ್ಟ ಎಲ್ಲರನ್ನು ಕಾಡಿದೆ. ಕೆಲಸ ಅರಸಿ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಬಂದವರು ಪುನಃ ತಮ್ಮ ತಾಯ್ನಾಡಿಗೆ ತೆರಳಲು ಹರಸಾಹಸ ಮಾಡುತ್ತಿದ್ದಾರೆ. ಈ ಕಾರ್ಮಿಕರನ್ನು ವಲಸೆ ಕಾರ್ಮಿಕರು ಎಂದು ಕರೆಯಲಾಗಿದೆ. ಆದರೆ ಈ ವಲಸೆ ಕಾರ್ಮಿಕರು ಎಂಬ ಪದ ಬಿಹಾರದ ಸಿಎಂ ನಿತೀಶ್ ಕುಮಾರ್ ಅವರಿಗೆ ಹಿಡಿಸಿಲ್ಲ.
ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ತೆರಳುತ್ತಿರುವವರನ್ನು ಪ್ರವಾಸಿ ಅಥವಾ ವಲಸೆ ಕಾರ್ಮಿಕರು ಎಂದು ಕರೆಯಲಾಗುತ್ತಿದೆ. ಇದು ಒಂದೇ ದೇಶ, ಒಂದೇ ರಾಷ್ಟ್ರೀಯತೆ, ದೇಶದ ಒಳಗೆ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ತೆರಳುವವ ಹೇಗೆ ವಲಸೆಯಾಗುತ್ತಾನೆ? ದೇಶದ ಹೊರಗೆ ತೆರಳಿದರೆ ವಲಸೆ ಎಂದು ಅಲ್ಲಿಯವರು ಕರೆಯಬಹುದು ಎಂದು ಬಿಹಾರ ಸಿಎಂ ನಿತೀಶ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕ್ವಾರಂಟೈನ್ ಮುಗಿಸಿದ ಕಾರ್ಮಿಕರಿಗೆ ಕಾಂಡೋಮ್!
ಲಾಕ್ ಡೌನ್ ಪರಿಣಾಮ ಅತಿ ಹೆಚ್ಚು ಸಂಕಷ್ಟಕ್ಕೆ ಕಾರ್ಮಿಕರು ಗುರಿಯಾಗಿದ್ದಾರೆ. ತಿನ್ನಲು ಆಹಾರವಿಲ್ಲದೇ, ಊರಿಗೆ ತೆರಳಲು ಸಾರಿಗೆ ಸಂಪರ್ಕ ಇಲ್ಲದೆ ಪರಿಪಾಟಲು ಪಟ್ಟಿದ್ದಾರೆ. ಸೋನು ಸೂದ್ ರಂತಹ ಬಾಲಿವುಡ್ ಹೀರೋಗಳು ಕಾರ್ಮಿಕರ ನೆರವಿಗೆ ನಿಂತಿದ್ದಾರೆ. ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಎರಡು ಲಕ್ಷದ ಗಿ ಮೀರಿ ಮುಂದೆ ಸಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ