ವಲಸಿಗ ಕಾರ್ಮಿಕರಿಗೆ ಎಂಪಿ ಕೋಟಾ ವಿಮಾನ ಟಿಕೆಟ್‌ ಕೊಟ್ಟ ಸಂಸದ!

Published : Jun 04, 2020, 11:48 AM IST
ವಲಸಿಗ ಕಾರ್ಮಿಕರಿಗೆ ಎಂಪಿ ಕೋಟಾ ವಿಮಾನ  ಟಿಕೆಟ್‌ ಕೊಟ್ಟ ಸಂಸದ!

ಸಾರಾಂಶ

ಕೊರೋನಾ ಲಾಕ್‌ಡೌನ್‌ನಿಂದಾಗಿ ದೆಹಲಿಯಲ್ಲಿ ಸಿಲುಕಿ, ಸಂಕಷ್ಟದಲ್ಲಿರುವ ವಲಸೆ ಕಾರ್ಮಿಕರು| ಕಾರ್ಮಿಕರನ್ನು ಸಂಸದರ ಕೋಟಾದಡಿ ತಮಗೆ ಲಭ್ಯವಿರುವ ವಿಮಾನ ಟಿಕೆಟ್‌ಗಳನ್ನು ಬಳಸಿ ತವರಿಗೆ ಕಳುಹಿಸಲು ಸಂಸದನ ನಿರ್ಧಾರ| 

ನವದೆಹಲಿ(ಜೂ.04): ಕೊರೋನಾ ಲಾಕ್‌ಡೌನ್‌ನಿಂದಾಗಿ ದೆಹಲಿಯಲ್ಲಿ ಸಿಲುಕಿ, ಸಂಕಷ್ಟದಲ್ಲಿರುವ ಪಟನಾ ಮೂಲದ 33 ವಲಸೆ ಕಾರ್ಮಿಕರನ್ನು ಸಂಸದರ ಕೋಟಾದಡಿ ತಮಗೆ ಲಭ್ಯವಿರುವ ವಿಮಾನ ಟಿಕೆಟ್‌ಗಳನ್ನು ಬಳಸಿ ತವರಿಗೆ ಕಳುಹಿಸಲು ಆಮ್‌ ಆದ್ಮಿ ಪಕ್ಷದ ಸಂಸದ ಸಂಜಯ್‌ ಸಿಂಗ್‌ ನಿರ್ಧರಿಸಿದ್ದಾರೆ.

ಸಂಸದರ ಕೋಟಾದಡಿ ವಾರ್ಷಿಕ 34 ವಿಮಾನ ಟಿಕೆಟ್‌ಗಳನ್ನು ಪ್ರತಿ ಸಂಸದನಿಗೆ ಸರ್ಕಾರ ನೀಡುತ್ತದೆ. ಈ ಸೌಲಭ್ಯವನ್ನು ಮಾನವೀಯ ಕಾರ‍್ಯಕ್ಕೆ ಬಳಸಿಕೊಳ್ಳುತ್ತಿರುವ ಸಂಜಯ್‌ ಸಿಂಗ್‌ 33 ವಲಸೆ ಕಾರ್ಮಿರನ್ನು ತವರಿಗೆ ಕಳುಹಿಸಲು ನಿರ್ಧರಿಸಿದ್ದಾರೆ. ಗುರುವಾರ ಸಂಜೆ ವಿಮಾನದ ಮೂಲಕ ಕಾರ್ಮಿಕರು ತಮ್ಮ ತವರು ಸೇರಲಿದ್ದಾರೆ.

ಸಂಜಯ್‌ ಸಿಂಗ್‌ ಅವರ ಈ ಕಾರ‍್ಯವನ್ನು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌, ‘ನಿಮ್ಮ ಈ ಕೆಲಸ ಎಲ್ಲರಿಗೂ ಮಾದರಿ’ ಪ್ರಶಂಸಿದ್ದಾರೆ. ಇದಕ್ಕೆ ಪ್ರತಿಯಾಗಿ ಸಂಜಯ್‌ ಸಿಂಗ್‌, ‘ನಿಮ್ಮ ರಾಜಕೀಯ ಸಂಗಡದಿಂದ ಕಲಿತ ಪಾಠ ಇದು’ ಎಂದು ಹೇಳಿ ಧನ್ಯವಾದ ಅರ್ಪಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕಟಿಹಾರ್ ಜಂಕ್ಷನ್‌ನಲ್ಲಿ ಮಹಿಳೆಯ ಭಯಾನಕ ಅನುಭವ: 30-40 ಪುರುಷರು ನುಗ್ಗಲು ಯತ್ನ, ಶೌಚಾಲಯದಲ್ಲಿ ಸಿಲುಕಿದ ಮಹಿಳೆ!
ದೇಶದ ಅಗ್ರ ಟಿ20 ಟೂರ್ನಿಯಲ್ಲೇ ಮ್ಯಾಚ್‌ ಫಿಕ್ಸಿಂಗ್‌, ನಾಲ್ವರು ಕ್ರಿಕೆಟಿಗರ ಸಸ್ಪೆಂಡ್‌ ಮಾಡಿ ತನಿಖೆಗೆ ಆದೇಶಿಸಿದ ಬಿಸಿಸಿಐ!