LoC ಸ್ಥಿತಿ ಬಗ್ಗೆ ಯಾವುದೇ ಆತಂಕ ಬೇಡ, ಕಾಶ್ಮೀರಕ್ಕೆ ಸೇನೆ ಅಭಯ

By Suvarna NewsFirst Published Sep 27, 2021, 9:00 PM IST
Highlights

* ಕಾಶ್ಮೀರದ ಜನರಿಗೆ ಸೇನೆಯ ಅಭಯ
* ಲೈನ್ ಆಫ್ ಕಂಟ್ರೋಲ್ ಬಗ್ಗೆ ಯಾವುದೇ ಗೊಂದಲ ಬೇಡ
* ಕಾಶ್ಮೀರದಲ್ಲಿ ಗುಣಾತ್ಮಕ ಶಿಕ್ಷಣಕ್ಕೆ ವೇದಿಕೆ ಸಿಕ್ಕಿದೆ

ಶ್ರೀನಗರ(ಸೆ. 27)  ಕಾಶ್ಮೀರದ (Kashmir) ಜನರು ಲೈನ್ ಆಫ್ ಕಂಟ್ರೋಲ್ ನ ಪರಿಸ್ಥಿತಿ ಬಗ್ಗೆ ಯಾವುದೇ ಆತಂಕಕ್ಕೆ ಒಳಗಾಗಬೇಕಿಲ್ಲ. ಸೇನೆ ಎಲ್ಲ ಪರಿಸ್ಥಿತಿ ಎದುರಿಸಲು ಸಿದ್ಧವಾಗಿದೆ ಎಂದು ಹಿರಿಯ ಸೇನಾಧಿಕಾರಿ ತಿಳಿಸಿದ್ದಾರೆ.

ಲೈನ್ ಆಫ್ ಕೋಟ್ರೋಲ್ ನಲ್ಲಿ ಸ್ಥಿತಿ ಸ್ವಾಭಾವಿಕವಾಗಿದೆ. ಜನರು ಯಾವುದೇ ಆತಂಕಕ್ಕೆ ಒಳಗಾಗಬೇಕಿಲ್ಲ ಎಂದು(Indian Army)  ಲೆಫ್ಟಿನೆಂಟ್ ಜನರಲ್ ಡಿಪಿ ಪಾಂಡೆ ತಿಳಿಸಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುವ ವೇಳೆ ಈ ವಿಚಾರ ತಿಳಿಸಿದರು.

13  ತಿಂಗಳ ನಂತರ ಅಂತ್ಯಸಂಸ್ಕಾರ, ಶರೀರ ಹುಡುಕಲು ಪ್ರತಿ ದಿನ ಹೋರಾಡುತ್ತಿದ್ದ ತಂದೆ!

ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.  ಅವರಿಗೆ ಇಲ್ಲಿ ವಸತಿಯೂ ಲಭ್ಯವಾಗುತ್ತಿದ್ದು ಸಹಜವಾಗಿ ಕಾಶ್ಮೀರದ ಜನರು ಖುಷಿಯಾಗಿದ್ದಾರೆ.  ಪ್ರತ್ಯೇಕವಾದಿಗಳ ಆಟವನ್ನು ಇಲ್ಲಿಯ ಜನರು ಈಗ ಬಲ್ಲವರಾಗಿದ್ದಾರೆ. ಅವರು ಎಂಥದ್ದೇ ತಂತ್ರ ಮಾಡಿದರೂ  ಜನ ಬೆಲೆ ಕೊಡುವುದಿಲ್ಲ ಎಂಬ ನಂಬಿಕೆ ಇದೆ ಎಂದಿದ್ದಾರೆ.

ಆರ್ಮಿ ಗುಡ್ ವಿಲ್ ಶಾಲೆಯಲ್ಲಿ ಇದೇ ಸಂದರ್ಭ ಡಿಜಿಟಲ್ ಕ್ಲಾಸ್ ರೂಂ ಲೋಕಾರ್ಪಣೆ ಮಾಡಲಾಯಿತು.  ತಂತ್ರಜ್ಞಾನ ಮತ್ತು ಆಧುನಿಕತೆಯ ಲಾಭ ಎಲ್ಲರಿಗೂ ಲಭ್ಯವಾಗಬೇಕು ಎಂದು ಹೇಳಿದರು.

ಸೇನೆಯ  28 ಶಾಲೆಗಳಲ್ಲಿ ಹದಿನಾರು ಶಾಲೆಗಳನ್ನು ಡಿಜಿಟಲೈಸ್ ಮಾಡಿಕೊಳ್ಳಲಾಗಿದೆ. ಈ ಶಾಲೆಗಳಲ್ಲಿ ಅಧ್ಯಯನ ಮಾಡುವ ಮಕ್ಕಳು ಉಳಿದ ಕಡೆಯಂತೆ ಗುಣಾತ್ಮಕ ಶಿಕ್ಷಣ ಪಡೆದುಕೊಳ್ಳಲಬಹುದು ಎಂದು ತಿಳಿಸಿದ್ದಾರೆ.

click me!