ಪ್ರತೀ ಮನೆಯಿಂದಲೂ ರಾಮಂದಿರ ನಿರ್ಮಾಣಕ್ಕೆ ಇಷ್ಟು ದೇಣಿಗೆ : ಯಾವ ಕಂಪನಿಗೆ ಹೊಣೆ?

By Suvarna NewsFirst Published Nov 11, 2020, 3:11 PM IST
Highlights

ಶ್ರೀ ರಾಮಮಂದಿರ ನಿರ್ಮಾಣ ವಿಚಾರದ ಬಗ್ಗೆ  ವಿಎಚ್‌ಪಿ ನೇತೃತ್ವದಲ್ಲಿ ಕಳೆದ ಎರಡು ದಿನಗಳಿಂದ ಸಭೆ ನಡೆದಿದ್ದು, ಎಲ್‌ &ಟಿ ಕಂಪನಿ ನಿರ್ಮಾಣದ ಹೊಣೆ ಹೊತ್ತಿದೆ

ನವದೆಹಲಿ (ನ.11): ಅಯೊಧ್ಯೆಯಲ್ಲಿ ಶ್ರೀ ರಾಮಮಂದಿರ ನಿರ್ಮಾಣ ವಿಚಾರದ ಬಗ್ಗೆ  ವಿಎಚ್‌ಪಿ ನೇತೃತ್ವದಲ್ಲಿ ಕಳೆದ ಎರಡು ದಿನಗಳಿಂದ ಸಭೆ ನಡೆದಿದ್ದು, ಎಲ್‌ &ಟಿ ಕಂಪನಿ ನಿರ್ಮಾಣದ ಹೊಣೆ ಹೊತ್ತಿದೆ ಎಂದು  ಪೇಜಾವರ ವಿಶ್ವ ಪ್ರಸನ್ನ ಸ್ವಾಮೀಜಿ ಹೇಳಿದ್ದಾರೆ. 

ನವದೆಹಲಿಯಲ್ಲಿ ಮಾತನಾಡಿದ ಸ್ವಾಮೀಜಿ  ಅಯೋಧ್ಯೆ ರಾಮಮಂದಿರ ವಿಚಾರದ ಬಗ್ಗೆ ಮಾತನಾಡಿ ಇದರ ಉಸ್ತುವಾರಿ ಟಾಟಾ ಕನ್ಸಲ್ಟನ್ಸಿ ಗೆ ವಹಿಸಲಾಗಿದೆ.  ಮಂದಿರ ನಿರ್ಮಾಣಕ್ಕೆ ದೊಡ್ಡಮಟ್ಟದಲ್ಲಿ ಹಣ ಸಂಗ್ರಹ ಆಗಬೇಕಿದೆ. ರಾಮಭಕ್ತರು ಈಗ ಹಣ ನೀಡಬೇಕಾಗಿದೆ, ಸಂಕ್ರಾಂತಿ ಯಿಂದ ದೇಣಿಗೆ ಸಂಗ್ರಹ ಅಭಿಯಾನ ಆರಂಭವಾಗಲಿದೆ ಎಂದರು. 

ರಾಮಮಂದಿರ ಬ್ಯಾಂಕ್‌ ಖಾತೆಗೆ 6 ಲಕ್ಷ ರು. ವಂಚನೆ

ಇದಕ್ಕೆ ಪ್ರತಿ ಮನೆಯಿಂದಲೂ, ಪ್ರತಿ ರಾಮಭಕ್ತ ಕೂಡ ದೇಣಿಗೆ ನೀಡಬೇಕು. ಪ್ರತಿರಾಮಭಕ್ತ ಕನಿಷ್ಠ 10 ರೂಪಾಯಿಯಾದರೂ ದೇಣಿಗೆ ನೀಡಬೇಕು.  ಪ್ರತೀ ಕುಟುಂಬ 100 ರು. ದೇಣಿಗೆ ನೀಡಬೇಕು. 45 ದಿನಗಳ ಕಾಲ ದೇಣಿಗೆ ಸಂಗ್ರಹ ಕಾರ್ಯ ನಡೆಯಲಿದೆ ಎಂದು ವಿಶ್ವ ಪ್ರಸನ್ನ ಸ್ವಾಮೀಜಿ ಹೇಳಿದರು. 
  
 ಒಟ್ಟು ಮಂದಿರ ನಿರ್ಮಾಣ ವೆಚ್ಚದ ಬಗ್ಗೆ ಇನ್ನು ನಿರ್ಣಯ ಆಗಿಲ್ಲ. ಈ ಬಗ್ಗೆ ಶ್ರೀರಾಮ ಜನ್ಮಭೂಮಿ ಟ್ರಸ್ಟ್ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ನಿರ್ಧಾರವಾಗಲಿದೆ ಎಂದು ಸ್ವಾಮೀಜಿ ಹೇಳಿದರು.

click me!