ದಾರಿ ತಪ್ಪಿಸುವ ಜಾಹೀರಾತು: ಸುಪ್ರೀಂ ಮುಂದೆ ಬೇಷರತ್‌ ಕ್ಷಮೆ ಯಾಚಿಸಿದ ಬಾಬಾ ರಾಮ್‌ದೇವ್‌ರ ಪತಂಜಲಿ!

By Kannadaprabha News  |  First Published Mar 22, 2024, 8:22 AM IST

ತಮ್ಮ ಉತ್ಪನ್ನಗಳು ಮತ್ತು ಅವುಗಳ ಸಾಮರ್ಥ್ಯದ ಕುರಿತಾಗಿ ಪತಂಜಲಿ ಸಂಸ್ಥೆಯ ಸಿಇಒ ಆಚಾರ್ಯ ಬಾಲಕೃಷ್ಣ ಗುರುವಾರ ಸುಪ್ರೀಂಕೋರ್ಟ್‌ನಲ್ಲಿ ಬೇಷರತ್‌ ಕ್ಷಮೆ ಯಾಚಿಸಿದ್ದಾರೆ.


ನವದೆಹಲಿ (ಮಾ.22): ತಮ್ಮ ಉತ್ಪನ್ನಗಳು ಮತ್ತು ಅವುಗಳ ಸಾಮರ್ಥ್ಯದ ಕುರಿತಾಗಿ ಪತಂಜಲಿ ಸಂಸ್ಥೆಯ ಸಿಇಒ ಆಚಾರ್ಯ ಬಾಲಕೃಷ್ಣ ಗುರುವಾರ ಸುಪ್ರೀಂಕೋರ್ಟ್‌ನಲ್ಲಿ ಬೇಷರತ್‌ ಕ್ಷಮೆ ಯಾಚಿಸಿದ್ದಾರೆ. ಅಲ್ಲದೆ ವಿವಾದಕ್ಕೆ ಕಾರಣವಾಗಿದ್ದ ಪತಂಜಲಿ ಸಂಸ್ಥೆಯ ಜಾಹೀರಾತುಗಳನ್ನು ಇನ್ನು ಯಾವುದೇ ಮಾಧ್ಯಮದಲ್ಲೂ ಪ್ರಕಟಿಸುವುದಿಲ್ಲ ಎಂದು ಭರವಸೆ ನೀಡಿದ್ದಾರೆ. 

ಪತಂಜಲಿ ಸಂಸ್ಥೆಯ ಉತ್ಪನ್ನಗಳ ಜಾಹೀರಾತು ಕುರಿತು ಭಾರತೀಯ ವೈದ್ಯಕೀಯ ಮಂಡಳಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್‌, ತಪ್ಪು ಮಾಹಿತಿ ಒಳಗೊಂಡ ಜಾಹೀರಾತು ಪ್ರದರ್ಶಿಸಿದಂತೆ ಸೂಚಿಸಿತ್ತು. ಇದಕ್ಕೆ ಸಂಸ್ಥೆ ಸಮ್ಮತಿಸಿದ್ದರೂ ಅದನ್ನು ಪಾಲನೆ ಮಾಡಿರಲಿಲ್ಲ. ಈ ಹಿನ್ನೆಲೆಯಲ್ಲಿ ನಿಮ್ಮ ಮೇಲೆ ಏಕೆ ನ್ಯಾಯಾಂಗ ನಿಂದನಾ ಪ್ರಕರಣ ದಾಖಲಿಸಬಾರದು ಎಂದು ಮಾಹಿತಿ ನೀಡಿ ಎಂದು ರಾಮ್‌ದೇವ್‌ ಮತ್ತು ಬಾಲಕೃಷ್ಣಗೆ ನೋಟಿಸ್‌ ನೀಡಿತ್ತು. ಅದಕ್ಕೂ ಇಬ್ಬರೂ ಉತ್ತರ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಇಬ್ಬರ ಖುದ್ದು ಹಾಜರಾತಿಗೆ ಬುಧವಾರವಷ್ಟೇ ಕೋರ್ಟ್‌ ನೋಟಿಸ್‌ ಜಾರಿ ಮಾಡಿತ್ತು.

Tap to resize

Latest Videos

ಡೀಪ್‌ಫೇಕ್‌ ತಂತ್ರಜ್ಞಾನ ಬಳಸಿ ಇಟಲಿ ಪ್ರಧಾನಿ ಮೆಲೋನಿ ಸೆಕ್ಸ್‌ ವಿಡಿಯೋ: ಪ್ರಕರಣ ದಾಖಲು

ರಾಮದೇವ್‌ಗೆ ಸುಪ್ರೀಂ ಎಚ್ಚರಿಕೆ: ‘ನಮ್ಮ ಉತ್ಪನ್ನಗಳು ಹಲವು ರೀತಿಯ ಕಾಯಿಲೆಗಳನ್ನು ಕಾಯಂ ಆಗಿ ಗುಣಪಡಿಸುತ್ತವೆ ಎಂಬ ಸುಳ್ಳು ಮತ್ತು ಜನರ ದಾರಿತಪ್ಪಿಸುವ ಜಾಹೀರಾತು ನೀಡುವುದಿಲ್ಲ’ ಎಂದು ಮುಚ್ಚಳಿಕೆ ಬರೆದುಕೊಟ್ಟ ಹೊರತಾಗಿಯೂ ಮತ್ತೆ ಜಾಹೀರಾತು ನೀಡುತ್ತಿರುವ ಯೋಗ ಗುರು ಬಾಬಾ ರಾಮದೇವ್‌ ಒಡೆತನದ ಪತಂಜಲಿ ಆಯುರ್ವೇದ ಸಂಸ್ಥೆ ವಿರುದ್ಧ ಸುಪ್ರೀಂ ಕೋರ್ಟ್‌ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಅಲ್ಲದೆ, ನ್ಯಾಯಾಂಗ ನಿಂದನೆ ಮೊಕದ್ದಮೆ ಏಕೆ ದಾಖಲಿಸಬಾರದು ಎಂದು ಪ್ರಶ್ನಿಸಿದೆ.

‘ಸುಳ್ಳು ಮತ್ತು ದಿಕ್ಕು ತಪ್ಪಿಸುವ ಜಾಹೀರಾತು ನೀಡಬಾರದು, ಯಾವುದೇ ವೈದ್ಯಕೀಯ ಪದ್ಧತಿ ದೂಷಿಸಬಾರದು ಎಂಬ ನಮ್ಮ ಆದೇಶ ಪಾಲಿಸುವುದಾಗಿ ಭರವಸೆ ನೀಡಿದ ಹೊರತಾಗಿಯೂ ಮತ್ತೆ ಅಂಥ ಘಟನೆ ಮರುಕಳಿಸುತ್ತಿದೆ. ಹೀಗಾಗಿ ನಿಮ್ಮ ನ್ಯಾಯಾಂಗ ನಿಂದನೆ ಪ್ರಕರಣ ಏಕೆ ದಾಖಲಿಸಬಾರದು ಎಂಬುದರ ಬಗ್ಗೆ ಸ್ಪಷ್ಟನೆ ನೀಡಿ’ ಎಂದು ಹೇಳಿ ಪತಂಜಲಿ ಆರ್ಯುವೇದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಆಚಾರ್ಯ ಬಾಲಕೃಷ್ಣಗೆ ನೋಟಿಸ್‌ ಜಾರಿ ಮಾಡಿದೆ.

ತಮಿಳ್ನಾಡು ಗೌರ್ನರ್‌ ರವಿಗೆ ಸುಪ್ರೀಂಕೋರ್ಟ್‌ ಪ್ರಹಾರ: ಪೊನ್ಮುಡಿಗೆ ಸಚಿವ ಸ್ಥಾನ ನೀಡದ್ದಕ್ಕೆ ಆಕ್ರೋಶ!

ಅಲ್ಲದೆ ಇಂಥ ದಾರಿ ತಪ್ಪಿಸುವ ಜಾಹೀರಾತುಗಳ ಮೂಲಕ ಇಡೀ ದೇಶದ ದಿಕ್ಕು ತಪ್ಪಿಸಲಾಗುತ್ತಿದೆ. ಆದರೆ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ. ಸಂಸ್ಥೆ ವಿರುದ್ಧ ಯಾವುದೇ ಕೈಗೊಂಡಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಕೋರ್ಟ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಪತಂಜಲಿ ಆಯುರ್ವೇದ ಉತ್ಪನ್ನಗಳ ಪ್ರಚಾರದ ಭರಾಟೆಯಲ್ಲಿ ಅಲೋಪತಿ ವೈದ್ಯ ಪದ್ಧತಿ ಬಗ್ಗೆ ರಾಮದೇವ್‌ ಅವರ ಸಂಸ್ಥೆ ಅಪಪ್ರಚಾರ ನಡೆಸಿದೆ ಎಂದು ಭಾರತೀಯ ವೈದ್ಯ ಮಂಡಳಿ (ಐಎಂಎ) ಸುಪ್ರೀಂ ಕೋರ್ಟ್‌ ಮೊರೆ ಹೋಗಿತ್ತು. ಅದರ ವಿಚಾರಣೆಯನ್ನು ಪೀಠ ನಡೆಸುತ್ತಿದೆ.

click me!