Lok Sabha Election 2024: ಬಿಜೆಪಿಗೆ ರಿಲಯನ್ಸ್‌ ನಂಟಿನ ಕಂಪನಿ 385 ಕೋಟಿ ಚುನಾವಣಾ ದೇಣಿಗೆ!

By Kannadaprabha NewsFirst Published Mar 22, 2024, 7:45 AM IST
Highlights

ಚುನಾವಣಾ ದೇಣಿಗೆ ನೀಡಿದ ಕಂಪನಿಗಳ ಪೈಕಿ 3ನೇ ಅತಿದೊಡ್ಡ ಕಂಪನಿಯಾದ ಕ್ವಿಕ್‌ ಸಪ್ಲೈ ಬಿಜೆಪಿಗೆ 385 ಕೋಟಿ ರು., ಶಿವಸೇನೆಗೆ 25 ಕೋಟಿ ರು., ದೇಣಿಗೆ ನೀಡಿದೆ. ವಿಶೇಷವೆಂದರೆ ಇದು ರಿಲಯನ್ಸ್‌ ಇಂಡಸ್ಟ್ರೀಸ್‌ ನಂಟು ಹೊಂದಿರುವ ಕಂಪನಿಯಾಗಿದೆ. 

ನವದೆಹಲಿ (ಮಾ.22): ಚುನಾವಣಾ ದೇಣಿಗೆ ನೀಡಿದ ಕಂಪನಿಗಳ ಪೈಕಿ 3ನೇ ಅತಿದೊಡ್ಡ ಕಂಪನಿಯಾದ ಕ್ವಿಕ್‌ ಸಪ್ಲೈ ಬಿಜೆಪಿಗೆ 385 ಕೋಟಿ ರು., ಶಿವಸೇನೆಗೆ 25 ಕೋಟಿ ರು., ದೇಣಿಗೆ ನೀಡಿದೆ. ವಿಶೇಷವೆಂದರೆ ಇದು ರಿಲಯನ್ಸ್‌ ಇಂಡಸ್ಟ್ರೀಸ್‌ ನಂಟು ಹೊಂದಿರುವ ಕಂಪನಿಯಾಗಿದೆ. ಮುಂಬೈನಲ್ಲಿ ನೊಂದಾಯಿತ ಕಂಪನಿ ಒಟ್ಟಾರೆ 410 ಕೋಟಿ ರು. ದೇಣಿಗೆ ನೀಡಿದೆ. ಕಂಪನಿ ಒಟ್ಟು ಮೂರು ಎಸ್‌ಬಿಐನಿಂದ ಬಾಂಡ್‌ ಖರೀದಿ ಮಾಡಿದ್ದು, ಈ ಮೂರು ಸಂದರ್ಭಗಳು ವಿವಿಧ ವಿಧಾನಸಭಾ ಚುನಾವಣೆಗೂ ಮುನ್ನ ಎಂಬುದು ಗಮನಾರ್ಹ.

ಲಾಟರಿ ಕಿಂಗ್‌ನ ಅತಿದೊಡ್ಡ ದೇಣಿಗೆ ಬಂಗಾಳದ ಸಿಎಂ ಮಮತಾ ಪಕ್ಷಕ್ಕೆ: ತಮಿಳುನಾಡು ಮೂಲದ ಲಾಟರಿ ಕಿಂಗ್ ಸ್ಯಾಂಟಿಯಾಗೋ ಮಾರ್ಟಿನ್ ತನ್ನ ಅತಿ ಹೆಚ್ಚು ದೇಣಿಗೆಯನ್ನು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಟಿಎಂಸಿಗೆ ನೀಡಿದ್ದಾನೆ. ಒಟ್ಟಾರೆ 1368 ಕೋಟಿ ದೇಣಿಗೆಯಲ್ಲಿ ಟಿಎಂಸಿಗೆ 540 ಕೋಟಿ, ಡಿಎಂಕೆಗೆ 509 ಕೋಟಿ ರು. ನೀಡಿದ್ದಾನೆ. ಇನ್ನು 3ನೇ ಅತಿದೊಡ್ಡದೇಣಿಗೆ ನೀಡಿದ ಕಂಪನಿಯಾದ ಕ್ವಿಕ್ ಸಪ್ಲೆ ಬಿಜೆಪಿಗೆ 385 ಕೋಟಿ ರು., ಶಿವಸೇನೆಗೆ 25 ಕೋಟಿ ರು., ದೇಣಿಗೆ ನೀಡಿದೆ. ಇದು ರಿಲಯನ್ಸ್ ಇಂಡಸ್ಟ್ರೀಸ್ ನಂಟು ಹೊಂದಿರುವ ಕಂಪನಿ.

ಒಂದು ದೇಶ, ಒಂದು ಚುನಾವಣೆ, ಏಕರೂಪ ನಾಗರಿಕ ಸಂಹಿತೆ ಬಿಜೆಪಿ ಪ್ರಣಾಳಿಕೆ ಭಾಗ?

ಫ್ಯೂಚರ್‌ ಗೇಮಿಂಗ್‌
ಡಿಎಂಕೆ 509 ಕೋಟಿ ರು.
ಟಿಎಂಸಿ 540 ಕೋಟಿ ರು.
ವೈಎಸ್‌ಆರ್‌ 150 ಕೋಟಿ ರು.
ಬಿಜೆಪಿ 100 ಕೋಟಿ ರು.

ಕ್ವಿಕ್‌ ಸಪ್ಲೈ
ಬಿಜೆಪಿ 385 ಕೋಟಿ ರು.
ಶಿವಸೇನೆ 25 ಕೋಟಿ ರು.

ಹಲ್ದಿಯಾ ಎನರ್ಜಿ
ಟಿಎಂಸಿ 281 ಕೋಟಿ ರು.
ಬಿಜೆಪಿ 81 ಕೋಟಿ ರು.
ಕಾಂಗ್ರೆಸ್‌ 15 ಕೋಟಿ ರು.

ವೇದಾಂತ
ಬಿಜೆಪಿ 230 ಕೋಟಿ ರು.
ಕಾಂಗ್ರೆಸ್‌ 125 ಕೋಟಿ ರು.
ವೈಎಸ್‌ಆರ್‌ 1.75 ಕೋಟಿ ರು.
ಟಿಎಂಸಿ 20 ಲಕ್ಷ ರು.

ವೆಸ್ಟರ್ನ್‌ ಯುಪಿ ಪವರ್‌ ಟ್ರಾನ್ಸ್‌ಮಿಷನ್‌
ಕಾಂಗ್ರೆಸ್‌ 110 ಕೋಟಿ ರು.
ಬಿಜೆಪಿ 80 ಕೋಟಿ ರು.
ಟಿಡಿಪಿ 20 ಕೋಟಿ ರು.

ಮದನ್‌ಲಾಲ್‌ &ಕೆವೆಂಟರ್‌ ಫುಡ್‌ಪಾರ್ಕ್‌
ಬಿಜೆಪಿ 320 ಕೋಟಿ ರು.
ಕಾಂಗ್ರೆಸ್‌ 30 ಕೋಟಿ ರು.
ಟಿಎಂಸಿ 20 ಕೋಟಿ ರು.

ಭಾರ್ತಿ ಏರ್‌ಟೆಲ್‌
ಬಿಜೆಪಿ 236.4 ಕೋಟಿ ರು.
ಕಾಂಗ್ರೆಸ್‌ 8 ಕೋಟಿ ರು.

ಡಿಎಲ್‌ಎಫ್‌
ಬಿಜೆಪಿ 170 ಕೋಟಿ ರು.

ಬಿಜೆ ಶಿರ್ಕೆ
ಶಿವಸೇನಾ 85 ಕೋಟಿ ರು.
ಬಿಜೆಪಿ 30.5 ಕೋಟಿ ರು.
ಕಾಂಗ್ರೆಸ್‌ 2 ಕೋಟಿ ರು.

ತಮಿಳ್ನಾಡು ಗೌರ್ನರ್‌ ರವಿಗೆ ಸುಪ್ರೀಂಕೋರ್ಟ್‌ ಪ್ರಹಾರ: ಪೊನ್ಮುಡಿಗೆ ಸಚಿವ ಸ್ಥಾನ ನೀಡದ್ದಕ್ಕೆ ಆಕ್ರೋಶ!

ಧಾರಿವಾಲ್ ಇನ್ಫ್ರಾಸ್ಟ್ರಕ್ಚರ್‌
ಟಿಎಂಸಿ 90 ಕೋಟಿ ರು.
ಬಿಜೆಪಿ 25 ಕೋಟಿ ರು.

click me!