ಪಾಸ್‌ಪೋರ್ಟ್‌ ಹಗರಣ: ಬಂಗಾಳ, ಸಿಕ್ಕಿಂನ 50 ಕಡೆ ಸಿಬಿಐ ದಾಳಿ, ಇಬ್ಬರ ಬಂಧನ

Published : Oct 15, 2023, 11:03 AM IST
ಪಾಸ್‌ಪೋರ್ಟ್‌ ಹಗರಣ: ಬಂಗಾಳ, ಸಿಕ್ಕಿಂನ 50 ಕಡೆ ಸಿಬಿಐ ದಾಳಿ, ಇಬ್ಬರ ಬಂಧನ

ಸಾರಾಂಶ

ಹಣ ಪಡೆದು ನಕಲಿ ದಾಖಲೆ ಆಧಾರದಲ್ಲಿ ಪಾಸ್‌ಪೋರ್ಟ್‌ ನೀಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ದಳ  ಶನಿವಾರ ಪಶ್ಚಿಮ ಬಂಗಾಳ ಹಾಗೂ ಸಿಕ್ಕಿಂನ 50 ಸ್ಥಳಗಳ ಮೇಲೆ ದಾಳಿ ನಡೆಸಿದೆ.

ನವದೆಹಲಿ (ಅ.15): ಹಣ ಪಡೆದು ನಕಲಿ ದಾಖಲೆ ಆಧಾರದಲ್ಲಿ ಪಾಸ್‌ಪೋರ್ಟ್‌ ನೀಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ದಳ (ಸಿಬಿಐ) ಶನಿವಾರ ಪಶ್ಚಿಮ ಬಂಗಾಳ ಹಾಗೂ ಸಿಕ್ಕಿಂನ 50 ಸ್ಥಳಗಳ ಮೇಲೆ ದಾಳಿ ನಡೆಸಿದೆ. ಇದರಲ್ಲಿ 16 ಅಧಿಕಾರಿಗಳು ಸೇರಿ 24 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದೆ ಹಾಗೂ ಇಬ್ಬರನ್ನು ಬಂಧಿಸಿದೆ.

ಪಶ್ಚಿಮ ಬಂಗಾಳ ಹಾಗೂ ಸಿಕ್ಕಿಂಗಳಲ್ಲಿ ಅನರ್ಹರಿಂದಲೂ ಹಣ ಪಡೆದು ನಕಲಿ ದಾಖಲೆಗಳನ್ನು ಸೃಷ್ಟಿಸಿ ಪಾಸ್ಪೋರ್ಟ್‌ ನೀಡಲಾಗುತ್ತಿದೆ ಎಂಬ ಆರೋಪದ ಮೇಲೆ ಸಿಬಿಐ ಕೋಲ್ಕತಾ, ಗ್ಯಾಂಗ್ಟಕ್‌ ಸೇರಿ ಹಲವೆಡೆ ದಾಳಿ ನಡೆಸಿದೆ. ಈ ವೇಳೆ ಮಧ್ಯವರ್ತಿಗಳು, ಸರ್ಕಾರಿ ಅಧಿಕಾರಿಗಳು ಸೇರಿ 24 ಜನರ ವಿರುದ್ಧ ಪ್ರಕರಣ ದಾಖಲಿಸಿ ಗ್ಯಾಂಗ್ಟಕ್‌ನ ಅಧಿಕಾರಿ ಹಾಗೂ ಮಧ್ಯವರ್ತಿಯನ್ನು ಬಂಧಿಸಿದೆ.

ಜೈಲಿನಲ್ಲಿರುವ ಆಂಧ್ರ ಮಾಜಿ ಸಿಎಂ ಚಂದ್ರಬಾಬು ನಾಯ್ಡು ದೇಹಸ್ಥಿತಿ ವಿಷಮ

ಲಂಚಕ್ಕೆ ಪ್ರತಿಯಾಗಿ ಅನಿವಾಸಿಗಳು ಸೇರಿದಂತೆ ಅನರ್ಹ ವ್ಯಕ್ತಿಗಳಿಗೆ ನಕಲಿ ದಾಖಲೆಗಳ ಆಧಾರದ ಮೇಲೆ ಪಾಸ್‌ಪೋರ್ಟ್‌ಗಳನ್ನು ನೀಡುತ್ತಿರುವ 16 ಅಧಿಕಾರಿಗಳು ಸೇರಿದಂತೆ 24 ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ.  ಕೋಲ್ಕತ್ತಾ, ಸಿಲಿಗುರಿ, ಗ್ಯಾಂಗ್ಟಾಕ್ ಮತ್ತು ಇತರ ಸ್ಥಳಗಳಲ್ಲಿ ಹುಡುಕಾಟ ನಡೆದಿದೆ.

ಕೋರ್ಟಲ್ಲಿ ರಾಜಕೀಯ ಭಾಷಣ ಬೇಡ: ಸಂಜಯ ಸಿಂಗ್‌ಗೆ ಇ.ಡಿ. ಕೋರ್ಟ್‌ ತಾಕೀತು
ದೆಹಲಿ ಅಬಕಾರಿ ಹಗರಣಕ್ಕೆ ಸಂಬಂಧಿಸಿದಂತೆ ಬಂದಿಯಾಗಿರುವ ಆಮ್‌ ಆದ್ಮಿ ಪಕ್ಷದ ರಾಜ್ಯಸಭಾ ಸದಸ್ಯ ಸಂಜಯ್‌ ಸಿಂಗ್‌ರಿಗೆ ನ್ಯಾಯಾಂಗ ಬಂಧನವನ್ನು ದಿಲ್ಲಿ ವಿಶೇಷ ಇ.ಡಿ. ಕೋರ್ಟ್‌, ಅ.27ರವರೆಗೆ ವಿಸ್ತರಿಸಿದೆ. ಇದೇ ವೇಳೆ, ಕೋರ್ಟ್‌ನಲ್ಲಿ ರಾಜಕೀಯ ಭಾಷಣ ಮಾಡದಂತೆ ಸಂಸದನಿಗೆ ಎಚ್ಚರಿಸಿದೆ.

ವಿದೇಶದಲ್ಲಿ ಸ್ವಂತ ದ್ವೀಪ ಖರೀದಿಸಿ ಪ್ರವಾಸಿಗರ ಫೇವರೆಟ್‌

ಈ ಹಿಂದೆ ಜಾರಿಯಾಗಿದ್ದ ನ್ಯಾಯಾಂಗ ಬಂಧನದ ಅವಧಿ ಮುಕ್ತಾಯವಾದ ಕಾರಣ ಜಾರಿ ನಿರ್ದೇಶನಾಲಯ ಸಂಜಯ್‌ರನ್ನು ನ್ಯಾಯಾಲಯದೆದುರು ಹಾಜರುಪಡಿಸಿತ್ತು. ಈ ವೇಳೆ ಸಂಜಯ್‌ ಅವರು, ‘ಅದಾನಿ ವಿರುದ್ಧ ಇ.ಡಿ. ಕಾರ್ಯಾಚರಣೆ ನಡೆಸಲಿಲ್ಲ. ನನ್ನ ವಿರುದ್ಧ ನಡೆಸಿತು’ ಎಂದು ಆರೋಪಿಸಿದರು. ಆಗ ಜಡ್ಜ್‌, ’ಕೋರ್ಟಿನಲ್ಲಿ ರಾಜಕೀಯ ಭಾಷಣ ಮಾಡಬೇಡಿ’ ಎಂದು ತಾಕೀತು ಮಾಡಿತು.

ಹಗರಣಕ್ಕೆ ಸಂಬಂಧಿದಂತೆ ಸಂಜಯ್‌ ಅಕ್ರಮ ಹಣ ಪಡೆದು ಮದ್ಯೋದ್ಯಮಿಗಳಿಗೆ ಸಹಾಯ ಮಾಡಿದ್ದರು ಎಂಬ ಆರೋಪದ ಮೇರೆಗೆ ಇ.ಡಿ. ಸಂಜಯ್‌ರನ್ನು ಅ,4ರಂದು ಬಂಧಿಸಿತ್ತು. ಇವರ ಬಂಧನವನ್ನು ಆಪ್‌ ಕಟುವಾಗಿ ಟೀಕಿಸಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live: 5 ವರ್ಷಗಳಲ್ಲಿ 2400 ವಿಮಾನಗಳಲ್ಲಿ ದೋಷ: ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ
ಮಹಿಳೆಯರ ಸಾರಥ್ಯದಲ್ಲಿ ಭಾರತ, ನ್ಯೂಜಿಲೆಂಡ್‌ ವ್ಯಾಪಾರ ಒಪ್ಪಂದ!