
ಜೆರುಸಲೇಂ: ಇಸ್ರೇಲ್ ಮೇಲೆ ದಾಳಿ ಮಾಡಿ ಹಸುಗೂಸುಗಳು ಸೇರಿದಂತೆ ಅನೇಕ ಮಕ್ಕಳನ್ನು ಅಪಹರಿಸಿದ್ದ ಹಮಾಸ್ ಉಗ್ರರು ಮಕ್ಕಳನ್ನು ಒತ್ತೆಯಾಳಾಗಿರಿಸಿಕೊಂಡಿರುವ ವಿಡಿಯೋವೊಂದನ್ನು ಇಸ್ರೇಲ್ ಸೇನೆ ಬಿಡುಗಡೆ ಮಾಡಿದೆ. ಇದರಲ್ಲಿ 1 ಕೈಯಲ್ಲಿ ಹಸುಗೂಸು, ಮತ್ತೊಂದರಲ್ಲಿ ಎಕೆ 47 ಹಿಡಿದಿರುವ ಉಗ್ರರು ಪೈಶಾಚಿಕವಾಗಿ ವರ್ತಿಸುವುದು ಕಂಡುಬಂದಿದೆ.
ಈ ವಿಡಿಯೋದ ಕೊನೆಯಲ್ಲಿ ಹಮಾಸ್ ಉಗ್ರನೊಬ್ಬ ಬಾಯಾರಿದ ಒಂದು ಮಗುವಿಗೆ ಕುಡಿಯಲು ನೀರು ಕೊಡುವ ಮುನ್ನ ‘ಬಿಸ್ಮಿಲ್ಲಾ’ ಎನ್ನುವಂತೆ ಹೇಳುತ್ತಾನೆ. ಏನೂ ಅರಿಯದ ಮಗು ಬಿಸ್ಮಿಲ್ಲಾ ಎನ್ನುತ್ತದೆ. ಬಳಿಕ ಆತ ನೀರು ಕೊಡುತ್ತಾನೆ. ಇನ್ನೊಂದೆಡೆ ಎರಡು ಶಿಶುಗಳನ್ನು ಹಮಾಸ್ ಉಗ್ರನೊಬ್ಬ ಕೈಯಲ್ಲಿ ಎತ್ತಿಕೊಂಡಿದ್ದಾನೆ. ತಮ್ಮ ಪೋಷಕರಿಗಾಗಿ ಅಳುತ್ತಿರುವ ಮಕ್ಕಳ ಸುತ್ತ ಎಕೆ-47 ಗನ್ ಹಿಡಿದು ನಿಂತಿರುವ ಉಗ್ರರ ಈ ವಿಡಿಯೋ ವೈರಲ್ ಆಗಿದ್ದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
30 ಸೆಕೆಂಡಿನ ಈ ವಿಡಿಯೋದಲ್ಲಿ ಅಳುತ್ತಿರುವ ಮಕ್ಕಳನ್ನು ಸಮಾಧಾನಪಡಿಸಲು ಉಗ್ರರು ಯತ್ನಿಸುತ್ತಿರುವುದು, ತೊಟ್ಟಿಲಲ್ಲಿ ಮಗುವೊಂದನ್ನು ಮಲಗಿಸುತ್ತಿರುವುದು, ಗಾಯಗೊಂಡಿರುವ ಬಾಲಕನೋರ್ವನ ಕಾಲಿಗೆ ಉಗ್ರರು ಬ್ಯಾಂಡೇಜ್ ಸುತ್ತುತ್ತಿರುವುದು ಕಂಡು ಬಂದಿದೆ. ಈ ವಿಡಿಯೋವನ್ನು ಹಮಾಸ್ ಮೂಲಗಳೇ ಮೊದಲು ಬಿಡುಗಡೆ ಮಾಡಿಕೊಂಡಿದ್ದು, ಬಳಿಕ ಇಸ್ರೇಲ್ ಪಡೆಯು ಹಮಾಸ್ ಉಗ್ರರ ಕ್ರೌರ್ಯ ತೋರಿಸಲು ಇದನ್ನು ಹಂಚಿಕೊಂಡಿದೆ.
ಇಸ್ರೇಲ್ ಮೇಲಿ ದಾಳಿ ಮಾಡಿ ಕೆಟ್ಟ ಹಮಾಸ್, ಓಡಿ ಹೋಗಲು ಗಡಿ ತೆರೆಯುವಂತೆ ಮನವಿ!
ಈ ಬಗ್ಗೆ ಟ್ವೀಟ್ ಮಾಡಿವ ಇಸ್ರೇಲ್ ಪಡೆ ‘ನೀವು ಅವರ ಗಾಯಗಳನ್ನು ನೋಡಬಹುದು. ಅವರ ಅಳುವನ್ನು ಕೇಳಬಹುದು. ಹಮಾಸ್‌ನಿಂದ ತಮ್ಮದೇ ಸ್ವಂತ ಮನೆಗಳಲ್ಲಿ ಒತ್ತೆಯಾಳಾಗಿರುವ ಮಕ್ಕಳು ಭಯದಿಂದ ನಡುಗುತ್ತಿದ್ದಾರೆ. ಅಲ್ಲದೇ ಮಕ್ಕಳು ಪೋಷಕರು ಪಕ್ಕದ ಕೋಣೆಗಳಲ್ಲಿ ಹೆಣವಾಗಿ ಬಿದ್ದಿರುತ್ತಾರೆ. ಇವರೇ ನಾವು ಸೋಲಿಸಲಿರುವ ಉಗ್ರರು’ ಎಂದಿದೆ.
ಈ ನಡುವೆ ಗಾಜಾದಲ್ಲಿ ಹಮಾಸ್ ಅಲ್ಲಿನ ನಾಗರಿಕರನ್ನು ಮಾನವ ತಡೆಗೋಡೆಯಾಗಿ ಬಳಸಿಕೊಳ್ಳುತ್ತಿದೆ ಎಂದು ಇಸ್ರೇಲ್ ಆರೋಪಿಸಿದೆ. ತಾನು ಹಮಾಸ್ ಉಗ್ರರ ಮೇಲೆ ದಾಳಿ ಮಾಡುವ ಸಂದರ್ಭದಲ್ಲಿ ಆ ಉಗ್ರರು ತಮಗೆ ಅಡ್ಡಲಾಗಿ ಜನರನ್ನು ಎದುರು ನಿಲ್ಲಿಸಿಕೊಂಡು ಬಚಾವಾಗಲು ಪ್ರಯತ್ನಿಸುತ್ತಿದ್ದಾರೆ ಎಂದಿದೆ.
IND vs PAK ಪಂದ್ಯದ ನಡುವೆ ಕಾಣಿಸಿಕೊಂಡ ಸ್ಟಾಂಡ್ ವಿಥ್ ಇಸ್ರೇಲ್ ಪ್ಲಕಾರ್ಡ್, ಪ್ರತಿಕ್ರಿಯಿಸಿದ ಸರ್ಕಾರ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ