UP Elections: 2007ರಿಂದ ಮಹಿಳೆಯರು ಇಷ್ಟಪಟ್ಟ ಪಕ್ಷಕ್ಕೇ ಅಧಿಕಾರದ ಗದ್ದುಗೆ, ಕಾಂಗ್ರೆಸ್‌ ನಡೆ ಹಿಂದೆ ಈ ರಹಸ್ಯ!

By Suvarna NewsFirst Published Dec 26, 2021, 12:11 AM IST
Highlights

* ಉತ್ತರ ಪ್ರದೇಶದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಪಕ್ಷಗಳ ಸರ್ಕಸ್

* ಮಹಿಳೆಯರ ಓಲೈಕೆಗೆ ಮುಂದಾದ ರಾಜಕೀಯ ಪಕ್ಷಗಳು

* ಉತ್ತರ ಪ್ರದೇಶದಲ್ಲಿ ಮಹಿಳೆಯರ ಮನ ಗೆದ್ದವರೇ ಬಾಸ್

ಲಕ್ನೋ(ಡಿ.26):ಉತ್ತರಪ್ರದೇಶದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೂ ಮುನ್ನ ಅಲ್ಲಿನ ಮಹಿಳಾ ಮತದಾರರ ಮನಃಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಈ ನಿಟ್ಟಿನಲ್ಲಿ "ಆಜ್ ತಕ್" ಉತ್ತರ ಪ್ರದೇಶದಲ್ಲಿ ಮಹಿಳಾ ಮತದಾರರ ಮತ ಎಷ್ಟು ಮಹತ್ವದ ಪಾತ್ರ ವಹಿಸುತ್ತದೆ? ಚುನಾವಣೆಯಲ್ಲಿ ಅವರ ಪಾತ್ರವೇನು? ಇತ್ಯಾದಿಗಳ ಬಗ್ಗೆ ವಿವರಿಸಿದೆ. ಅಲ್ಲದೇ ಇದರಲ್ಲಿ 2007ರ ವಿಧಾನಸಭಾ ಚುನಾವಣೆಯಿಂದ ಇಲ್ಲಿಯವರೆಗೆ ಮಹಿಳಾ ಮತದಾರರ ಮತ ಹೆಚ್ಚು  ಪಡೆದ ಪಕ್ಷವೇ ಸರ್ಕಾರ ಅಧಿಕಾರಕ್ಕೆ ಬಂದಿರುವ ವಿಚಾರವೂ ಬಹಿರಂಗಗೊಂಡಿದೆ.

CSDS ಅಂಕಿಅಂಶಗಳ ಪ್ರಕಾರ, 2007 ರ ವಿಧಾನಸಭಾ ಚುನಾವಣೆಯಲ್ಲಿ, 8% ಮಹಿಳೆಯರು ಕಾಂಗ್ರೆಸ್ ಪಕ್ಷಕ್ಕೆ, 16% ಬಿಜೆಪಿಗೆ, 32% ಬಹುಜನ ಸಮಾಜ ಪಕ್ಷಕ್ಕೆ (BSP) ಮತ್ತು 26% ಸಮಾಜವಾದಿ ಪಕ್ಷಕ್ಕೆ ಮತ ಹಾಕಿದ್ದಾರೆ. 2007ರಲ್ಲಿ ಮಾಯಾವತಿ ಅವರ ಕೈಯಲ್ಲಿ ಅಧಿಕಾರದ ಚುಕ್ಕಾಣಿ ಇತ್ತು ಎಂಬುವುದು ಉಲ್ಲೇಖನೀಯ. 

Latest Videos

ಇನ್ನು, 2012 ರ ವಿಧಾನಸಭಾ ಚುನಾವಣೆಯಲ್ಲಿ, ಅಖಿಲೇಶ್ ಯಾದವ್ ರಾಜ್ಯದ ಮುಖ್ಯಮಂತ್ರಿಯಾದಾಗ, 12% ಮಹಿಳೆಯರು ಕಾಂಗ್ರೆಸ್‌ಗೆ, 14% ಬಿಜೆಪಿಗೆ, 25% BSP ಮತ್ತು 31% ಸಮಾಜವಾದಿ ಪಕ್ಷಕ್ಕೆ ಮತ ಹಾಕಿದ್ದರೆಂಬುವುದು ಗಮನಾರ್ಹ. 

2017ರ ವಿಧಾನಸಭಾ ಚುನಾವಣೆಯ ಬಗ್ಗೆ ಮಾತನಾಡುವುದಾದರೆ, ಯುಪಿಯಲ್ಲಿ ಬಿಜೆಪಿ ಪ್ರಧಾನಿ ನರೇಂದ್ರ ಮೋದಿ ಮುಂದಿಟ್ಟುಕೊಂಡು ಸ್ಪರ್ಧಿಸಿತ್ತು, ಆಗ ಯೋಗಿ ಆದಿತ್ಯನಾಥ್ ಸಿಎಂ ಮುಖವಾಗಿರಲಿಲ್ಲ. ಈ ಚುನಾವಣೆಯಲ್ಲಿ ಬಿಜೆಪಿ ಮೈತ್ರಿಕೂಟ ದಾಖಲೆಯ 325 ಸ್ಥಾನಗಳನ್ನು ಗೆದ್ದಿತ್ತು. ಈ ಚುನಾವಣೆಯಲ್ಲಿ ಬಿಜೆಪಿಗೆ ಶೇ.41, ಕಾಂಗ್ರೆಸ್‌ಗೆ ಶೇ.5, ಬಿಎಸ್‌ಪಿಗೆ ಶೇ.23 ಮತ್ತು ಸಮಾಜವಾದಿ ಪಕ್ಷಕ್ಕೆ ಶೇ.20ರಷ್ಟು ಮಹಿಳೆಯರು ಮತ ಹಾಕಿದ್ದಾರೆ.

ಯುಪಿಯಲ್ಲಿ ಮತದಾನ ಮಾಡಲು ಮತದಾರರ ಆಗಮನ

2007 ರ ವಿಧಾನಸಭಾ ಚುನಾವಣೆಯಲ್ಲಿ, 49.35 ಪ್ರತಿಶತ ಪುರುಷರು ಮತ್ತು 41.92 ಪ್ರತಿಶತ ಮಹಿಳೆಯರು ಮತ ಚಲಾಯಿಸಿದ್ದರೆ, ಒಟ್ಟು ಮತದಾನವು 45.95 ಪ್ರತಿಶತವಾಗಿತ್ತು. ಅದೇ ಸಮಯದಲ್ಲಿ, 2012 ರ ಚುನಾವಣೆಯಲ್ಲಿ 58.68 ಶೇಕಡಾ ಪುರುಷರು ಮತ್ತು 60.28 ಶೇಕಡಾ ಮಹಿಳೆಯರು ತಮ್ಮ ಮತವನ್ನು ಚಲಾಯಿಸಿದ್ದರೆ, ಒಟ್ಟು ಮತದಾನವು 59.52% ಆಗಿತ್ತು.

2017 ರ ವಿಧಾನಸಭಾ ಚುನಾವಣೆಯ ಬಗ್ಗೆ ಮಾತನಾಡುತ್ತಾ, ಮಹಿಳೆಯರು ಈ ಬಗ್ಗೆಯೂ ಹೆಚ್ಚಿನ ಆಸಕ್ತಿ ತೋರಿಸಿದ್ದರು. ಈ ಚುನಾವಣೆಯಲ್ಲಿ ಶೇ.59.15ರಷ್ಟು ಪುರುಷರು ಮತ್ತು ಶೇ.63.31ರಷ್ಟು ಮಹಿಳೆಯರು ಮತದಾನ ಮಾಡಿದ್ದರೆ, ಒಟ್ಟು ಶೇ.60.94ರಷ್ಟು ಮತದಾನವಾಗಿದೆ.

ಮಹಿಳೆಯರ ಓಲೈಕೆಗೆ ಕಾಂಗ್ರೆಸ್‌ ಯತ್ನ

ಇನ್ನು 2022ರಲ್ಲಿ ನಡೆಯಲಿರುವ ಉಯತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಎಲ್ಲಾ ಪಕ್ಷಗಳು ಸಿದ್ಧತೆ ಆರಂಭಿಸಿವೆ. ಅದರಲ್ಲೂ ವಿಶೇಷವಾಗಿ ಕಾಂಗ್ರೆಸ್‌ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹಿಂದೆಂದಿಗಿಂತ ಉತ್ಸಾಹದಿಂದ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ. ಅದರಲ್ಲೂ ಮಹಿಳೆಯರ ಓಲೇಕೆಗೆ ವಿವಿಧ ಕ್ರಮಗಳನನ್ಉ ಜಾರಿಗೊಳಿಸಿದೆ. ಹೀಗಿರುವಘಾ ಕಾಂಗ್ರೆಸ್‌ ಪಕ್ಷ ಉತ್ತರ ಪ್ರದೇಶದ ಮಹಿಳೆಯರನ್ನು ಓಲೈಸುವಲ್ಲಿ ಯಶಸ್ವಿಯಾಗುತ್ತಾ? ಯಾಕವ ಪಕ್ಷ ಈ ಬಾರಿ ಅಧಿಕಾರದ ಗದ್ದುಗೆ ಏರಲಿದೆ ಎಂಬುವುದನ್ನು ಕಾಲವೇ ಉತ್ತರಿಸಲಿದೆ. 

click me!