ಉದ್ಘಾಟನೆಯಾದ ಬೆನ್ನಲ್ಲೇ, ಕುಸಿದು ಬಿದ್ದ ಮೇಲ್ಸೇತುವೆ!

Published : Mar 08, 2020, 10:11 AM ISTUpdated : Mar 08, 2020, 10:15 AM IST
ಉದ್ಘಾಟನೆಯಾದ ಬೆನ್ನಲ್ಲೇ, ಕುಸಿದು ಬಿದ್ದ ಮೇಲ್ಸೇತುವೆ!

ಸಾರಾಂಶ

ಉದ್ಘಾಟನೆಯಾಗಿ 6 ತಿಂಗಳಲ್ಲೇ, ಕುಸಿದ ಮೇಲ್ಸೇತುವೆ!| ಸುದೈವವಶಾತ್‌ ಯಾವುದೇ ಪ್ರಾಣ ಹಾನಿ ಅಥವಾ ಗಾಯಗೊಂಡಿರುವ ಬಗ್ಗೆ ವರದಿಯಾಗಿಲ್ಲ

ಗುರುಗ್ರಾಮ[ಮಕಾ.08]: 6 ತಿಂಗಳ ಹಿಂದಷ್ಟೇ ಸಾರ್ವಜನಿಕರ ಸೇವೆಗೆ ಮುಕ್ತವಾಗಿದ್ದ ಮೇಲ್ಸೇತುವೆಯ ಕೆಲ ಭಾಗ ಕುಸಿದುಬಿದ್ದಿರುವ ಘಟನೆ ಹರ್ಯಾಣದ ಪಟೌಡಿ ಎಂಬಲ್ಲಿ ಜರುಗಿದೆ. ಆದರೆ, ಈ ದುರ್ಘಟನೆಯಲ್ಲಿ ಸುದೈವವಶಾತ್‌ ಯಾವುದೇ ಪ್ರಾಣ ಹಾನಿ ಅಥವಾ ಗಾಯಗೊಂಡಿರುವ ಬಗ್ಗೆ ವರದಿಯಾಗಿಲ್ಲ.

ದೆಹಲಿ-ಜೈಪುರ ರೈಲು ಮಾರ್ಗದ ಬಳಿಯಿರುವ ಈ ಮೇಲ್ಸೇತುವೆಯನ್ನು 2019ರ ಸೆಪ್ಟೆಂಬರ್‌ ತಿಂಗಳಲ್ಲಿ ಹರಾರ‍ಯಣದ ಲೋಕೋಪಯೋಗಿ ಇಲಾಖೆ ಉದ್ಘಾಟನೆ ಮಾಡಿತ್ತು. ಕಳಪೆ ಕಾಮಗಾರಿ ಹಾಗೂ ಅಕಾಲಿಕ ಮಳೆ ಸುರಿದ ಪರಿಣಾಮವೇ ಈ ಮೇಲ್ಸೇತುವೆಯ ಕೆಲ ಭಾಗ ಕುಸಿಯಲು ಕಾರಣವಾಗಿದೆ ಎನ್ನಲಾಗಿದೆ.

ಮತ್ತೊಂದೆಡೆ, ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದ ಉದಾಸೀನತೆ ಹಾಗೂ ಅದಕ್ಷತೆಯೇ ಮೇಲ್ಸೇತುವೆ ಕುಸಿತಕ್ಕೆ ಕಾರಣ ಎಂದು ಪಹಾರಿ ಗ್ರಾಮಸ್ಥರು ದೂರಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮುಸ್ಲಿಂ ಲೀಗ್‌, ಜಿನ್ನಾಗೆ ಮಣಿದ ನೆಹರು, ವಂದೇ ಮಾತರಂ ಅನ್ನು ಹರಿದು ಹಾಕಿದ್ದು ಕಾಂಗ್ರೆಸ್‌: ಮೋದಿ ವಾಗ್ದಾಳಿ
ಮದುವೆಯಾದ್ರೆ ಸಿಗುತ್ತೆ 2.5 ಲಕ್ಷ ರೂಪಾಯಿ; ಶೇ.99 ಜನರಿಗೆ ಈ ವಿಷಯವೇ ಗೊತ್ತಿಲ್ಲ