ಮೋದಿ ಟ್ವೀಟರ್‌ ಖಾತೆಗಿಂದು ಸ್ಫೂರ್ತಿದಾಯಕ ಮಹಿಳೆ ಬಾಸ್!

Published : Mar 08, 2020, 09:02 AM IST
ಮೋದಿ ಟ್ವೀಟರ್‌ ಖಾತೆಗಿಂದು ಸ್ಫೂರ್ತಿದಾಯಕ ಮಹಿಳೆ ಬಾಸ್!

ಸಾರಾಂಶ

ಇಂದು ಸಾಧಕಿಯರಿಂದ ಮೋದಿ ಟ್ವೀಟರ್‌ ಖಾತೆ ನಿರ್ವಹಣೆ!| ನಾರಿ ಶಕ್ತಿ ಪ್ರಶಸ್ತಿ ಪುರಸ್ಕೃತ ಮಹಿಳೆಯರ ಜೊತೆಗೆ ಮೋದಿ ಸಂವಾದ| ಮಹಿಳಾ ದಿನದ ವಿಶೇಷ

ನವದೆಹಲಿ[ಮಾ.08]: ಭಾನುವಾರದ ವಿಶ್ವ ಮಹಿಳಾ ದಿನಾಚರಣೆ ನಿಮಿತ್ತ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಟ್ವೀಟರ್‌ ಖಾತೆಯ ನಿರ್ವಹಣೆಯನ್ನು ಸ್ಫೂರ್ತಿದಾಯಕ ಸಾಧಕ ಮಹಿಳೆಯರಿಗೆ ಬಿಟ್ಟುಕೊಡಲಿದ್ದಾರೆ. ಇದೇ ವೇಳೆ ಅವರು ನಾರಿ ಶಕ್ತಿ ಪುರಸ್ಕಾರ ವಿಜೇತ ಮಹಿಳೆಯರ ಜತೆ ಸಂವಾದ ನಡೆಸಲಿದ್ದಾರೆ.

ಭಾನುವಾರವೇ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ‘ನಾರಿ ಶಕ್ತಿ’ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ. ಬಳಿಕ ಮೋದಿ ಅವರು ಈ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕ ಮಹಿಳೆಯರೊಂದಿಗೆ ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ.

ಮೋದಿ ಅವರು ಇತ್ತೀಚೆಗೆ ‘ನಾನು ಸಾಮಾಜಿಕ ಮಾಧ್ಯಮಗಳಿಂದ ಬರುವ ಭಾನುವಾರ (ಮಾ.8) ಹೊರಬರುವ ಚಿಂತನೆ ನಡೆಸಿದ್ದೇನೆ’ ಎಂದು ಟ್ವೀಟ್‌ ಮಾಡಿ ಮಿಂಚಿನ ಸಂಚಲನ ಮೂಡಿಸಿದ್ದರು. ಆದರೆ ಮರುದಿನವೇ ಅವರು, ‘ಮಾ.8ರ ಮಹಿಳಾ ದಿನದಂದು ನಮಗೆ ಸ್ಫೂರ್ತಿಯಾದ ಮಹಿಳಾ ಸಾಧಕರಿಗೆ ನನ್ನ ಸಾಮಾಜಿಕ ಮಾಧ್ಯಮ ನಿರ್ವಹಣೆ ಬಿಟ್ಟುಕೊಡಲಿದ್ದೇನೆ. ಇದರಿಂದ ಲಕ್ಷಾಂತರ ಜನರಿಗೆ ಸ್ಫೂರ್ತಿಯಾಗಲಿದೆ’ ಎಂದು ಹೇಳಿ ತಮ್ಮ ಗೂಢಾರ್ಥದ ಟ್ವೀಟ್‌ನಿಂದ ನಡೆದಿದ್ದ ಚರ್ಚೆಗೆ ತೆರೆ ಎಳೆದಿದ್ದರು.

ಮೋದಿ ಅವರು ಟ್ವೀಟರ್‌ನಲ್ಲಿ 5.33 ಕೋಟಿ ಹಿಂಬಾಲಕರನ್ನು ಹೊಂದಿದ್ದಾರೆ. ಫೇಸ್‌ಬುಕ್‌ನಲ್ಲಿ 4.45 ಕೋಟಿ, ಇನ್‌ಸ್ಟಾಗ್ರಾಂನಲ್ಲಿ 3.52 ಕೋಟಿ ಹಾಗೂ ಯೂಟ್ಯೂಬ್‌ನಲ್ಲಿ 45 ಲಕ್ಷ ಫಾಲೋವರ್‌ಗಳು ಮೋದಿಗೆ ಇದ್ದಾರೆ. ಪ್ರಧಾನಿ ಕಚೇರಿಯ ಟ್ವೀಟರ್‌ ಖಾತೆಗೆ 3.2 ಕೋಟಿ ಹಿಂಬಾಲಕರಿದ್ದಾರೆ.

ಸುಧಾ, ತಿಮ್ಮಕ್ಕ ವಿಜೇತರಾಗಲಿದ್ದಾರೆಯೇ?

ಸ್ಪೂರ್ತಿದಾಯಕ ಸಾಧನೆ ಮಾಡಿದ ಮಹಿಳೆಯರ ಸಾಧನೆಯನ್ನು ್ಫಖhಛಿಐ್ಞspಜ್ಟಿಛಿsಖಿsಹ್ಯಾಶ್‌ ಟ್ಯಾಗ್‌ ಬಳಸಿ ಅವರ ಸಾಧನೆ ಬಗ್ಗೆ ಹಂಚಿಕೊಳ್ಳಿ. ಅವರಿಗೆ ಮಾ.8ರ ಮಹಿಳಾ ದಿನದಂದು ತಮ್ಮ ಟ್ವೀಟರ್‌ ಖಾತೆ ಬಳಸುವ ಅವಕಾಶ ನೀಡುವುದಾಗಿ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದರು.

ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿ, ಜನರು ಹಲವು ಸಾಧಕಿಯರ ಹೆಸರನ್ನು ಶಿಫಾರಸು ಮಾಡಿದ್ದರು. ಇದರಲ್ಲಿ ಕರ್ನಾಟಕದ ವೃಕ್ಷ ಮಾತೆ ಸಾಲು ಮರದ ತಿಮ್ಮಕ್ಕ ಹಾಗೂ ತಮ್ಮ ಇಸ್ಫೋಸಿಸ್‌ ಫೌಂಡೇಶನ್‌ ಮೂಲಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿರುವ ಸುಧಾ ಮೂರ್ತಿ ಅವರೂ ಇದ್ದರು. ಹಾಗಾಗಿ ಮಹಿಳಾ ದಿನದಂದು ಮೋದಿಯವರ ಟ್ವೀಟರ್‌ ಖಾತೆ ಬಳಸುವ ಅವಕಾಶ ಸಿಗಲಿದೆಯಾ ಎಂಬ ಕುತೂಹಲ ಗರಿಗೆದರಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Vande Mataram ಎರಡು ಪದಗಳ ಅರ್ಥ ವಿವರಿಸಿದ ಇಕ್ರಾ ಹಸನ್: ಸಂಸದೆಯ ಮಾತು ವೈರಲ್
ವಿದೇಶಗಳಿಗೆ ಭಾರತೀಯ ಪ್ರತಿಭೆ : ನಷ್ಟವೋ ? ಪ್ರಭಾವವೋ?