
ನವದೆಹಲಿ: ದೆಹಲಿಯ ನಾಗರಿಕ ಸೇವೆಗಳ ಮೇಲಿನ ತನ್ನ ಅಧಿಕಾರ ಮತ್ತು ನಿಯಂತ್ರಣಕ್ಕಾಗಿ ಹೊರಡಿಸಿರುವ ಸುಗ್ರೀವಾಜ್ಞೆಯನ್ನು ಬದಲಿಸುವ ಮಸೂದೆಯನ್ನು ಕೇಂದ್ರ ಸಂಪುಟ ಮಂಗಳವಾರ ಅಂಗೀಕರಿಸಿದೆ ಎಂದು ಮೂಲಗಳು ತಿಳಿಸಿವೆ. ಈ ಮಸೂದೆಯನ್ನು ಸಂಸತ್ತಿನ ಪ್ರಸಕ್ತ ಅಧಿವೇಶನದಲ್ಲೇ ಸರ್ಕಾರ ಮಂಡಿಸುವ ಸಾಧ್ಯತೆ ಇದೆ. ಈ ಸುಗ್ರಿವಾಜ್ಞೆ ವಿರುದ್ಧ ದೆಹಲಿ ಆಪ್ ಸರ್ಕಾರ ಈಗಾಗಲೇ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಇದರ ವಿಚಾರಣೆಗೆ ನ್ಯಾಯಾಲಯ ಮೂವರು ಸದಸ್ಯರ ಪೀಠ ರಚಿಸಿದೆ. ಸಂಸತ್ತಿನ ಅಧಿವೇಶನ ಇಲ್ಲದ ಸಂದರ್ಭದಲ್ಲಿ ತುರ್ತು ಪರಿಸ್ಥಿತಿ ಇದ್ದ ವೇಳೆ ಸರ್ಕಾರವು ತನ್ನ ಯಾವುದೇ ನೀತಿಯನ್ನು ಸುಗ್ರೀವಾಜ್ಞೆ ಮೂಲಕ ಹೊರಡಿಸುತ್ತದೆ. ಆದರೆ 6 ವಾರಗಳಲ್ಲಿ ಸುಗ್ರೀವಾಜ್ಞೆಯಲ್ಲಿ ತಾನು ಹೊರಡಿಸಿದ್ದ ಕಾನೂನನ್ನು ಮಸೂದೆಯಾಗಿ ರಚಿಸಿ ಸಂಸತ್ತಿನಲ್ಲಿ ಮಂಡಿಸಿ ಕಾಯ್ದೆಯಾಗಿ ರೂಪಿಸಬೇಕು.
ಸಹಕಾರ ವಲಯಕ್ಕೆ ತುಂಬುವ ಮಸೂದೆ ಅಂಗೀಕಾರ
ನವದೆಹಲಿ: ಸಹಕಾರ ವಲಯದ ಸಂಸ್ಥೆಗಳ ಆಡಳಿತ, ನಿರ್ವಹಣೆಯಲ್ಲಿ ಹೆಚ್ಚಿನ ಪಾರದರ್ಶಕತೆಗೆ ಅವಕಾಶ ಕಲ್ಪಿಸುವ ಬಹುರಾಜ್ಯ- ಸಹಕಾರ ಸೊಸೈಟಿ (ತಿದ್ದುಪಡಿ) ಮಸೂದೆಗೆ ಲೋಕಸಭೆ ಮಂಗಳವಾರ ಅನುಮೋದನೆ ನೀಡಿದೆ. ಮಸೂದೆ ಕುರಿತ ಚರ್ಚೆ ವೇಳೆ ಮಾತನಾಡಿದ ಸಹಕಾರ ಖಾತೆ ಸಚಿವ ಅಮಿತ್ ಶಾ, ‘ಹೊಸ ಮಸೂದೆಯಲ್ಲಿನ ಅಂಶಗಳು ಸಹಕಾರ ವಲಯದಲ್ಲಿ ಹೊಸ ಯುಗಕ್ಕೆ ಕಾರಣವಾಗಲಿದೆ. ಈ ಮಸೂದೆಯು ಆಡಳಿತದಲ್ಲಿ ಪಾರದರ್ಶಕತೆಗೆ ಅನುವು ಮಾಡಿಕೊಡಲಿದೆ. ನಿಯಮಿತ ಚುನಾವಣೆ ನಡೆಸಲು ಅನುಕೂಲವಾಗುವಂತೆ ಸಹಕಾರ ಚುನಾವಣಾ ಪ್ರಾಧಿಕಾರ ರಚನೆಗೆ ಅವಕಾಶ ಕಲ್ಪಿಸಿಕೊಡಲಿದೆ. ಸಹಕಾರ ಸಂಘಗಳಲ್ಲಿ ತಮ್ಮ ಸಂಬಂಧಿಗಳನ್ನೇ ನೇಮಕ ಮಾಡುವ ಸಂಪ್ರದಾಯಕ್ಕೆ ಕೊನೆ ಹಾಡಲಿದೆ. ಒಟ್ಟಾರೆ ಸಹಕಾರ ವಲಯಕ್ಕೆ ಸಂಬಂಧಿಸಿದಂತೆ ನೂತನ ರಾಷ್ಟ್ರೀಯ ನೀತಿ ಜಾರಿಗೆ ಅನುವು ಮಾಡಿಕೊಡಲಿದೆ’ ಎಂದು ಮಾಹಿತಿ ನೀಡಿದರು.
ಸಹಾರಾ ರೀಫಂಡ್ ಪೋರ್ಟಲ್‌ನಲ್ಲಿ ಈವರೆಗೂ 7 ಲಕ್ಷ ಅರ್ಜಿ, 158 ಕೋಟಿಗೆ ಕ್ಲೇಮ್!
ದೆಹಲಿ ಸರ್ಕಾರದ ಆಡಳಿತದ ಮೇಲೆ ಕೇಂದ್ರಕ್ಕೆ ಅಧಿಕಾರ ಹೊಂದಿರುವ ಸುಗ್ರೀವಾಜ್ಞೆ ವಿರುದ್ಧ ಆಮ್ ಆದ್ಮಿ ಪಾರ್ಟಿ ಸತತ ಹೋರಾಟ ನಡೆಸುತ್ತ ಬಂದಿತ್ತು. ಈ ಮಸೂದೆ ವಿರುದ್ಧ ಮತ ಹಾಕಲು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹಲವು ಪಕ್ಷಗಳ ನಾಯಕರನ್ನು ಭೇಟಿಯಾಗಿ ಬೆಂಬಲ ಕೋರಿದ್ದರು. ಒಂದೆಡೆ ರಾಜಕೀಯ ಹೋರಾಟವಾದರೆ, ಮತ್ತೊಂದೆಡೆ ಕಾನೂನು ಹೋರಾಟವನ್ನು ತೀವ್ರಗೊಳಿಸಿ ಕೇಂದ್ರದ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಕೇಜ್ರಿವಾಲ್ ಹೋರಾಟಕ್ಕೆ ಸುಪ್ರೀಂಕೋರ್ಟ್ ತಣ್ಣೀರೆರಚಿತ್ತು. ಈ ಬಗ್ಗೆ ಆಪ್ ಸಲ್ಲಿಸಿದ ಅರ್ಜಿಯನ್ನು ಜುಲೈ 10 ರಂದು ವಿಚಾರಣೆಗೆ ತೆಗೆದುಕೊಂಡ ಪೀಠ ಸುಗ್ರೀವಾಜ್ಞೆಗೆ ತಡೆ ನೀಡಲು ನಿರಾಕರಿಸಿತ್ತು. ಆದರೆ ಈ ಕುರಿತು ಪ್ರತಿಕ್ರಿಯೆ ಬಯಸಿ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿತು. ಅಲ್ಲದೆ ಪ್ರಕರಣದಲ್ಲಿ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಅವರನ್ನೂ ಪಕ್ಷಗಾರರನ್ನಾಗಿ ಮಾಡುವಂತೆ ಆಪ್ ಪರ ವಕೀಲರಿಗೆ ಸೂಚಿಸಿತು.
ಮಣಿಪುರ ವಿಚಾರದಲ್ಲಿ ಚರ್ಚೆಗೆ ಅವಕಾಶ ನೀಡಿ, ಖರ್ಗೆ-ಅಧಿರಂಜನ್‌ಗೆ ಅಮಿತ್ ಶಾ ಪತ್ರ
ಮೇ 19 ರಂದು ದೆಹಲಿಯಲ್ಲಿ ಐಎಎಸ್ ಸೇರಿದಂತೆ ಹಲವು ಅಧಿಕಾರಿಗಳ ವರ್ಗಾವಣೆ, ಅಧಿಕಾರವನ್ನು ನೀಡುವ ಕುರಿತು ಸುಗ್ರೀವಾಜ್ಞೆಯನ್ನು ಕೇಂದ್ರ ಪ್ರಕಟಿಸಿತ್ತು. ಈ ನಿರ್ಧಾರವನ್ನು ಆಮ್ ಆದ್ಮಿ ಪಾರ್ಟಿ ತೀವ್ರವಾಗಿ ವಿರೋಧಿಸಿತ್ತು.ಸುಗ್ರೀವಾಜ್ಞೆಯಲ್ಲಿ ಮುಖ್ಯಕಾರ್ಯದರ್ಶಿಗೆ ಸಚಿವ ಸಂಪುಟಕ್ಕಿಂತ ಉನ್ನತ ಸ್ಥಾನ ನೀಡಲಾಗಿದೆ ಎಂದು ಆರೋಪಿಸಿತ್ತು. ದೆಹಲಿಯಲ್ಲಿ ಸಚಿವರಿಗಿಂತ ಅಧಿಕಾರಿಗಳೆ ಉನ್ನತ ಸ್ಥಾನ ಹೊಂದಿರುತ್ತಾರೆ. ಮಂತ್ರಿಗಳು ತೆಗದುಕೊಂಡ ನಿರ್ಧಾರವನ್ನು ಅಧಿಕಾರಿಗಳು ವಜಾ ಮಾಡುತ್ತಾರೆ. ಇದು ಚುನಾಯಿತ ಸರ್ಕಾರದ ಕೈಗಳನ್ನು ಕಟ್ಟಿಹಾಕಿದಂತೆ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದರು. ಈ ನಿರ್ಧಾರದ ವಿರುದ್ಧ ಕೇಜ್ರಿವಾಲ್ ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳ ನಾಯಕರನ್ನು ಬೇಟಿ ಮಾಡಿ ಬೆಂಬಲ ಕೋರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ