ಬಾಲಾಪರಾಧಿ ವಯಸ್ಸಿನ ಮಿತಿ 16ಕ್ಕೆ ಇಳಿಕೆ ಅಗತ್ಯವಿಲ್ಲ: ಸಂಸದೀಯ ಸಮಿತಿ

By Suvarna NewsFirst Published Aug 12, 2021, 9:26 AM IST
Highlights

* ಬಾಲಾಪರಾಧಿಗಳ ವಯಸ್ಸನ್ನು 18ರಿಂದ 16ಕ್ಕೆ ಇಳಿಸುವ ಅನಿವಾರ್ಯತೆ ಇಲ್ಲ

* ಪ್ರಸ್ತುತ ಇರುವ ಪೋಕ್ಸೋ ಕಾನೂನು 18 ವರ್ಷದವರನ್ನು ನಿಯಂತ್ರಿಸಲು ಶಕ್ತಿಯುತವಾಗಿದೆ

* ಗೃಹ ವ್ಯವಹಾರಗಳ ಸಂಸದೀಯ ಸಮಿತಿ ಹೇಳಿಕೆ

ನವದೆಹಲಿ(ಆ.12): ಪೋಕ್ಸೋ ಪ್ರಕರಣಗಳ ಅಡಿಯಲ್ಲಿ ಬಾಲಾಪರಾಧಿಗಳ ವಯಸ್ಸನ್ನು 18ರಿಂದ 16ಕ್ಕೆ ಇಳಿಸುವ ಅನಿವಾರ್ಯತೆ ಇಲ್ಲ. ಪ್ರಸ್ತುತ ಇರುವ ಪೋಕ್ಸೋ ಕಾನೂನು 18 ವರ್ಷದವರನ್ನು ನಿಯಂತ್ರಿಸಲು ಶಕ್ತಿಯುತವಾಗಿದೆ ಎಂದು ಗೃಹ ವ್ಯವಹಾರಗಳ ಸಂಸದೀಯ ಸಮಿತಿ ಹೇಳಿದೆ.

ಅತ್ಯಾಚಾರ ಪ್ರಕರಣಗಳಲ್ಲಿ 18 ವರ್ಷದ ಒಳಗಿರುವವರು ಹೆಚ್ಚು ಭಾಗಿಯಾಗುತ್ತಿದ್ದಾರೆ. ಹಾಗಾಗಿ ಬಾಲಾಪರಾಧಿ ಎಂದು ಗುರುತಿಸಲು ನಿಗದಿಪಡಿಸಿರುವ 18 ವರ್ಷದ ವಯೋಮಿತಿಯನ್ನು 16 ವರ್ಷಕ್ಕೆ ಇಳಿಸಬೇಕು ಎಂದು ಸಮಿತಿ ಅಧ್ಯಕ್ಷರಾದ ಕಾಂಗ್ರೆಸ್‌ ನಾಯಕ ಆನಂದ್‌ ಶರ್ಮಾ ಹೇಳಿದ್ದರು.

ಆದರೆ, ಇದಕ್ಕೆ ಪ್ರತಿಕ್ರಿಯಿಸಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮಕ್ಕಳು ಮಾಡುವ ಅಪರಾಧಗಳಿಗೆ 2015ರ ಪೋಕ್ಸೋ ಕಾನೂನಿನಂತೆ ಶಿಕ್ಷೆ ನೀಡಲಾಗುತ್ತಿದೆ. 18 ವರ್ಷದವರನ್ನೂ ನಿಯಂತ್ರಿಸುವಷ್ಟುಈ ಕಾನೂನು ಬಲವಾಗಿದೆ ಎಂದಿದೆ. ಇದರ ಬೆನ್ನಲ್ಲೇ 16ಕ್ಕೆ ಇಳಿಸುವ ಪ್ರಸ್ತಾವನೆ ಕೈಬಿಡಲು ಸಮಿತಿ ನಿರ್ಧರಿಸಿದೆ.

click me!