3 ಕ್ರಿಮಿನಲ್ ಕಾಯ್ದೆ ಬದಲಿಸುವ ವರದಿಗೆ ಸಂಸತ್ ಸಮಿತಿ ಒಪ್ಪಿಗೆ: ಲಿಂಗಬೇಧವಿಲ್ಲದೇ ವ್ಯಭಿಚಾರ ಕೃತ್ಯಕ್ಕೆ ಶಿಕ್ಷೆ

By Kannadaprabha News  |  First Published Nov 7, 2023, 11:45 AM IST

ದೇಶದ ಹಾಲಿ ಮೂರು ಪ್ರಮುಖ ಕ್ರಿಮಿನಲ್ ಕಾಯ್ದೆಗಳನ್ನು ಬದಲಿಸುವ ಮೂರು ವರದಿಗಳಿಗೆ ಗೃಹ ಇಲಾಖೆಯ ವ್ಯವಹಾರಗಳಿಗೆ ಸಂಬಂಧಿಸಿದ ಸಂಸದೀಯ ಸಮಿತಿ ಸೋಮವಾರ ಒಪ್ಪಿಗೆ ನೀಡಿದೆ ಎಂದು ಮೂಲಗಳು ತಿಳಿಸಿವೆ.


ನವದೆಹಲಿ: ದೇಶದ ಹಾಲಿ ಮೂರು ಪ್ರಮುಖ ಕ್ರಿಮಿನಲ್ ಕಾಯ್ದೆಗಳನ್ನು ಬದಲಿಸುವ ಮೂರು ವರದಿಗಳಿಗೆ ಗೃಹ ಇಲಾಖೆಯ ವ್ಯವಹಾರಗಳಿಗೆ ಸಂಬಂಧಿಸಿದ ಸಂಸದೀಯ ಸಮಿತಿ ಸೋಮವಾರ ಒಪ್ಪಿಗೆ ನೀಡಿದೆ ಎಂದು ಮೂಲಗಳು ತಿಳಿಸಿವೆ. ಕೆಲ ವಿರೋಧ ಪಕ್ಷಗಳ ಸದಸ್ಯರ ವಿರೋಧದ ನಡುವೆಯ ವರದಿಗಳನ್ನು ಅಂಗೀಕರಿಸಿ ಸರ್ಕಾರಕ್ಕೆ ಹಲವು ಶಿಫಾರಸು ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಬಿಜೆಪಿ ಸಂಸದ (BJP MP)ಬೃಜ್ ಲಾಲ್‌ (Brij Lal) ಅಧ್ಯಕ್ಷತೆಯ 30 ಸದಸ್ಯರ ಸಂಸದೀಯ ಸಮಿತಿ ಸೋಮವಾರ ಸಭೆ ನಡೆಸಿ, ಬ್ರಿಟಿಷ್ ಕಾಲದ ಭಾರತೀಯ ದಂಡ ಸಂಹಿತೆ (ಐಪಿಸಿ), ಅಪರಾಧ ಪ್ರಕ್ರಿಯಾ ಸಂಹಿತೆ  (ಸಿಆರ್‌ಪಿಸಿ) (Criminal Procedure Code) ಹಾಗೂ ಭಾರತೀಯ ಸಾಕ್ಷ್ಯ ಕಾಯ್ದೆಗಳನ್ನು ಕ್ರಮವಾಗಿ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಹಾಗೂ ಭಾರತೀಯ ಸಾಕ್ಷ್ಯ ಅಧಿನಿಯಮಗಳ ಮೂಲಕ ಬದಲಿಸಲು ಒಪ್ಪಿಗೆ ನೀಡಿತು ಎಂದು ಮೂಲಗಳು ಹೇಳಿವೆ.

ನಿಷೇಧ ಪ್ರಶ್ನಿಸಿ ಪಿಎಫ್‌ಐ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್‌

Tap to resize

Latest Videos

ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ (Union Home Minister Amit Shah) ಮಂಡಿಸಿದ್ದ ಈ ಕುರಿತ ಮೂರು ಮಸೂದೆಗಳನ್ನು ಸಂಸದೀಯ ಸಮಿತಿಯ ಪರಾಮರ್ಶೆಗೆ ನೀಡಲಾಗಿತ್ತು. 10 ದಿನಗಳ ಹಿಂದೆ ಕಡೆಯ ಬಾರಿ ಸಮಿತಿ ಸಭೆ ನಡೆಸಿದಾಗ ಮಸೂದೆಗಳನ್ನು ಪರಿಶೀಲಿಸಲು ಇನ್ನಷ್ಟು ಕಾಲಾವಕಾಶ ನೀಡಬೇಕೆಂದು ವಿಪಕ್ಷಗಳ ಕೆಲ ಸದಸ್ಯರು ಕೋರಿದ್ದರು. ಲೋಕಸಭೆಯ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಸೇರಿ ಕೆಲ ಸದಸ್ಯರು ಕಾಯ್ದೆ ಬದಲಾವಣೆಗೆ ವಿರೋಧ ವ್ಯಕ್ತಪಡಿಸಿ ಈಗ ತಮ್ಮ ಆಕ್ಷೇಪಣಾ ವರದಿ ನೀಡಿದ್ದಾರೆ ಎನ್ನಲಾಗಿದ್ದು, ಇನ್ನು ಕೆಲವರು ಆಕ್ಷೇಪಣೆ ಸಲ್ಲಿಸಿಲ್ಲ. ಅವರಿಗೆ ಆಕ್ಷೇಪಣೆ ಸಲ್ಲಿಸಲು 2 ದಿನಗಳ ಕಾಲಾವಕಾಶ ನೀಡಲಾಗಿದೆ. 

ಅದರ ನಡುವೆಯೇ ಸಂಸದೀಯ ಸಮಿತಿಯಲ್ಲಿ ಬಿಜೆಪಿಗೆ ಬಹುಮತ ಇರುವುದರಿಂದ ಕಾಯ್ದೆಗಳ ಬದಲಾವಣೆ ಕುರಿತಾದ ವರದಿಗೆ ಒಪ್ಪಿಗೆ ನೀಡಲಾಗಿದೆ ಎಂದು ತಿಳಿದುಬಂದಿದೆ.

ಹಿಂದಿ ಹೆಸರಿಗೆ ವಿರೋಧಕ್ಕೆ ಮನ್ನಣೆಯಿಲ್ಲ


3 ಕ್ರಿಮಿನಲ್ ಕಾಯ್ದೆಗಳಿಗೆ ಹಿಂದಿ ಹೆಸರನ್ನು ನಾಮಕರಣ ಮಾಡಲಾಗಿದ್ದು, ಅದಕ್ಕೆ ಡಿಎಂಕೆ ಸಂಸದ ದಯಾನಿಧಿ ಮಾರನ್‌ (dayanidhi Maran) ಸೇರಿ ಕೆಲವರು ವಿರೋಧ ವ್ಯಕ್ತಪಡಿದ್ದರು. ಆದರೆ ಸಮಿತಿಯು ಅದಕ್ಕೆ ಮನ್ನಣೆ ನೀಡದೆ ಹಿಂದಿ ಹೆಸರುಗಳಿಗೆ ಒಪ್ಪಿಗೆ ನೀಡಿದೆ.

ದೇಶದ ಮುಖ್ಯ ಮಾಹಿತಿ ಆಯುಕ್ತರಾಗಿ ಹೀರಾಲಾಲ್‌ ಸಮಾರಿಯಾ ನೇಮಕ : ಇವರು ಈ ಹುದ್ದೆಗೇರಿದ ಮೊದಲ ದಲಿತ ವ್ಯಕ್ತಿ

ಸಂಸದೀಯ ಸಮಿತಿ ಶಿಫಾರಸುಗಳೇನು?
ನಿರ್ಲಕ್ಷದಿಂದ ಸಂಭವಿಸುವ ಸಾವಿನ ಪ್ರಕರಣದಲ್ಲಿ ದೋಷಿಗಳಿಗೆ ಹಾಲಿ ವಿಧಿಸುವ ಶಿಕ್ಷೆ ಪ್ರಮಾಣ ಕಡಿಮೆ ಇದೆ. ಇದನ್ನು ಇನ್ನಷ್ಟು ಕಠಿಣಗೊಳಿಸಬೇಕು. ಸಾರ್ವಜನಿಕ ಸೇವೆಯಲ್ಲಿ ಇರುವವರ ಕರ್ತವ್ಯಕ್ಕೆ ಅಡ್ಡಿಪಡಿಸಿದರೆ ವಿಧಿಸುವ ಶಿಕ್ಷೆಯ ಪ್ರಮಾಣವನ್ನು ಹಾಲಿ ಇರುವ 2 ವರ್ಷಗಳಿಂದ 1 ವರ್ಷಕ್ಕೆ ಇಳಿಸಬೇಕು. 'ವ್ಯಭಿಚಾರ ಕಾಯ್ದೆಯನ್ನು ಲಿಂಗ ತಾಟಸ್ಥ್ಯ ಮಾಡಬೇಕು. ಹಾಲಿ ಇರುವ ಕಾಯ್ದೆಯಡಿ, ವಿವಾಹಿತ ಮಹಿಳೆಯೊಬ್ಬಳು ತನ್ನ ಪತಿಯ ಅನುಮತಿ ಇಲ್ಲದೇ ಪರಪುರುಷನ ಸಂಗ ಮಾಡಿದರೆ, ಅಂಥ ಪ್ರಕರಣದಲ್ಲಿ ಪುರುಷನಿಗೆ ಮಾತ್ರ ಶಿಕ್ಷೆ ವಿಧಿಸಲಾಗುತ್ತದೆ. ಮಹಿಳೆಯರು ಯಾವುದೇ ಶಿಕ್ಷೆಗೆ ಗುರಿಯಾಗುವುದಿಲ್ಲ. ಹೀಗಾಗಿ ಅವರನ್ನೂ ಪ್ರಕರಣದಲ್ಲಿ ದೋಷಿ ಎಂದು ಪರಿಗಣಿಸಿ ಶಿಕ್ಷೆಗೆ ಗುರಿಪಡಿಸಬೇಕು. ಇಬ್ಬರು ಪುರುಷರು, ಇಬ್ಬರು ಮಹಿಳೆಯರು ಮತ್ತು ಸಲಿಂಗಿಗಳ ನಡುವೆ ನಡೆಯುವ ಸಮ್ಮತಿ ಇಲ್ಲದ ಲೈಂಗಿಕ ಚಟುವಟಿಕೆಯನ್ನು ಕ್ರಿಮಿನಲ್‌ ಅಪರಾಧ ಎಂದು ಪರಿಗಣಿಸ ಬೇಕು' ಎಂದು ಈ ಹಿಂದಿನ ಸಭೆಯಲ್ಲಿ ಶಿಫಾರಸಿಗೆ ನಿರ್ಧರಿಸಲಾಗಿತ್ತು.

ಕೇಜ್ರಿವಾಲ್ ಬಂಧನವಾದರೆ 'ವರ್ಕ್ ಫ್ರಂ ಜೈಲ್' : ಜೈಲಲ್ಲೇ ಸಂಪುಟ ಸಭೆ, ಅಲ್ಲಿಂದಲೇ ಕೆಲಸ: ಆಪ್ ನಿರ್ಣಯ

click me!