ಸಂಸತ್ ಭವನದ ಮೇಲೆ ದಾಳಿಯಿಂದ ದೇಶವೇ ಬೆಚ್ಚಿಬಿದ್ದಿದೆ. ಭವನದೊಳಗೆ ಹಾಗೂ ಹೊರಗೆ ಎರಡು ಪ್ರತ್ಯೇಕ ಘಟನೆ ದೇಶದ ಭದ್ರತಾ ವ್ಯವಸ್ಥೆಯನ್ನೇ ಪ್ರಶ್ನಿಸಿದೆ. ಟಿಯರ್ ಗ್ಯಾಸ್ ದಾಳಿ ಬೆನ್ನಲ್ಲೇ ಸಂಸತ್ ಭವನದಲ್ಲಿ ಪ್ರೇಕ್ಷಕರ ಎಲ್ಲಾ ಪಾಸ್ ರದ್ದುಗೊಳಿಸಲಾಗಿದೆ. ಇತ್ತ ಬೆಳಗಾವಿಯ ಸುವರ್ಣ ಸೌಧದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ನವದೆಹಲಿ(ಡಿ.12) ದೇಶದ ಪ್ರಜಾಪ್ರಭುತ್ವದ ದೇಗುಲದ ಮೇಲೆ ಎರಡನೇ ದಾಳಿಯಾಗಿದೆ. 2001ರಲ್ಲಿ ಭಯೋತ್ಪಾದಕ ದಾಳಿಯಾಗಿದ್ದರೆ, ಈ ಬಾರಿ ಅಪರಿಚಿತರು ಟಿಯರ್ ಗ್ಯಾಸ್ ಮೂಲಕ ದಾಳಿ ನಡೆಸಿದ್ದಾರೆ. ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ ಆರೋಪಿಗಳಾದ ಸಾಗರ್ ಶರ್ಮಾ ಹಾಗೂ ಮನೋರಂಜನ್ ಇಬ್ಬರು ಏಕಾಏಕಿ ಸದನದೊಳಕ್ಕೆ ಜಿಗಿದು ಟಿಯರ್ ಗ್ಯಾಸ್ ಮೂಲಕ ದಾಳಿ ನಡೆಸಿದ್ದಾರೆ. ಸದನದಲ್ಲಿ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲೇ ಈ ದಾಳಿ ನಡೆದಿದೆ. ರಾಹುಲ್ ಗಾಂಧಿ ಸೇರಿ ಪ್ರಮುಖ ನಾಯಕರು ಸದನದಲ್ಲಿ ಉಪಸ್ಥಿತಿರಿದ್ದರು. ಇದೇ ವೇಳೆ ದಾಳಿ ನಡೆದಿರುವುದು ಭದ್ರತ ವೈಫಲ್ಯ ಎತ್ತಿ ಹಿಡಿದಿದೆ. ಈ ದಾಳಿಯಿಂದ ಕಲಾಪ 2 ಗಂಟೆಗೆ ಮುಂದೂಡಲಾಗಿತ್ತು. ಸದನ ಮತ್ತೆ ಆರಂಭಗೊಂಡ ಬೆನ್ನಲ್ಲೇ ಪ್ರೇಕ್ಷಕರ ಪಾಸ್ ಸಂಪೂರ್ಣ ರದ್ದು ಮಾಡಿ ಸ್ಪೀಕರ್ ಓಂ ಬಿರ್ಲಾ ಆದೇಶ ನೀಡಿದ್ದಾರೆ. ಸಂಸತ್ ದಾಳಿಯಿಂದ ಬೆಳಗಾವಿ ಸುವರ್ಣ ಸೌಧದಲ್ಲೂ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.
ಬೆಳಗಾವಿ ಸುವರ್ಣ ಸೌಧದಲ್ಲಿ ಪೊಲೀಸರು ಇದೀಗ ಪ್ರೇಕ್ಷಕರ ಪಾಸ್ ಪರಿಶೀಲನೆ ನಡೆಸುತ್ತಿದ್ದಾರೆ. ಯಾರಿಗೆಲ್ಲಾ ಪಾಸ್ ನೀಡಲಾಗಿದೆಯೋ ಅವರ ಮಾಹಿತಿ, ಗುರುತಿನ ಚೀಟಿ ಸೇರಿದಂತೆ ಹಲವು ಮಾಹಿತಿಗಳನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ. ಇಷ್ಟೇ ಅಲ್ಲ ಸುವರ್ಣ ಸೌಧದ ಹೊರಭಾಗದಲ್ಲೂ ಭದ್ರತೆ ಹೆಚ್ಚಿಸಲಾಗಿದೆ. ಎಲ್ಲರನ್ನೂ ಮತ್ತೊಂದು ಸುತ್ತು ತಪಾಸಣೆ ನಡೆಸಲಾಗುತ್ತದೆ. ಸುವರ್ಣ ಸೌಧದ ಒಳಗೂ ಸಂಸತ್ ಭವನ ದಾಳಿ ಕೂಡ ಚರ್ಚೆಯಾಗಿದೆ. ಇದು ರಾಜಕೀಯ ಆರೋಪ ಪ್ರತ್ಯಾರೋಪಕ್ಕೆ ಸಾಕ್ಷಿಯಾಗಿದೆ.
ಮೋದಿ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಸಂಸತ್ ಮೇಲೆ ದಾಳಿ, ನೀಲಂ ಕೌರ್-ಅಮೋಲ್ ಅರೆಸ್ಟ್!
ಸಂಸತ್ ಭವನದೊಳಗೆ ದಾಳಿ ನಡೆಸಿದ ಸಾಗರ್ ಶರ್ಮಾ ಹಾಗೂ ಮನೋರಂಜನ್ ಇಬ್ಬರನ್ನೂ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಈ ಕುರಿತು ಮಾಹಿತಿ ನೀಡಿದ ಸ್ಪೀಕರ್ ಒಂ ಬಿರ್ಲಾ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಈ ಕುರಿತು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ದೆಹಲಿ ಪೊಲೀಸರು ಈ ವಿಚಾರಣೆಯಲ್ಲಿ ಭಾಗಿಯಾಗಲು ಸೂಚಿಸಲಾಗಿದೆ. ಇಬ್ಬರು ದಾಳಿಕೋರರನ್ನು ಬಂಧಿಸಲಾಗಿದೆ. ಅವರ ಬಳಸಿದ ಟಿಯರ್ ಗ್ಯಾಸ್ ವಶಕ್ಕೆ ಪಡೆಯಲಾಗಿದೆ ಎಂದು ಬಿರ್ಲಾ ಹೇಳಿದ್ದಾರೆ.
ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ, ಸಂಸದ ರಾಹುಲ್ ಗಾಂಧಿ ಸೇರಿದಂತೆ ಪ್ರಮುಖ ನಾಯರು ಸದನದಲ್ಲಿ ಇರುವಾಗಲೇ ಈ ದಾಳಿ ನಡೆದಿದೆ. ಪ್ರೇಕ್ಷಕರ ಗ್ಯಾಲರಿಯಿಂದ ಸದನಕ್ಕೆ ಜಿಗಿದ ಇಬ್ಬರು, ಟಿಯರ್ ಗ್ಯಾಸ್ ಮೂಲಕ ಸದನದೊಳಗೆ ದಾಳಿ ನಡೆಸಿದ್ದಾರೆ. ಈ ದಾಳಿಕೋರರು ಸಂಸದ ಪ್ರತಾಪ್ ಸಿಂಗ್ ಕಚೇರಿಯಿಂದ ಲೋಕಸಭೆಗೆ ಪ್ರವೇಶ ಪಾಸ್ ಪಡೆದಿದ್ದಾರೆ.
ಸಂಸತ್ ಭವನ ಮೇಲೆ ದಾಳಿ ಹಿಂದೆ ಖಲಿಸ್ತಾನಿ ಉಗ್ರ ಕೈವಾಡ, ಪನ್ನುನ್ ಡೆಡ್‌ಲೈನ್ ದಿನವೇ ಆ್ಯಟಾಕ್!