ದೇಶದ ರೈತರಿಗೆ 18 ಲಕ್ಷ ಕೋಟಿ ರೂ. ನೀಡಲಾಗಿದೆ, ರಾಮ ಮಂದಿರ ಕನಸು ಈಡೇರಿದೆ: ರಾಷ್ಟ್ರಪತಿ ದ್ರೌಪದಿ ಮುರ್ಮು

Published : Jan 31, 2024, 12:10 PM ISTUpdated : Jan 31, 2024, 12:11 PM IST
ದೇಶದ ರೈತರಿಗೆ 18 ಲಕ್ಷ ಕೋಟಿ ರೂ. ನೀಡಲಾಗಿದೆ, ರಾಮ ಮಂದಿರ ಕನಸು ಈಡೇರಿದೆ: ರಾಷ್ಟ್ರಪತಿ ದ್ರೌಪದಿ ಮುರ್ಮು

ಸಾರಾಂಶ

ಶತಮಾನಗಳಿಂದಲೂ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಭರವಸೆ ನೀಡಲಾಗಿದ್ದು, ಆ ಕನಸು ಈಗ ಈಡೇರಿದೆ ಎಂದು ರಾಷ್ಟ್ರಪತಿ ಮುರ್ಮು ಮೋದಿ ಸರ್ಕಾರವನ್ನು ಶ್ಲಾಘಿಸಿದರು.

ದೆಹಲಿ (ಜನವರಿ 31, 2024): ಸಂಸತ್‌ ಬಜೆಟ್‌ ಅಧಿವೇಶನ ಆರಂಭವಾಗಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಸಂಸತ್‌ ಜಂಟಿ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ್ದಾರೆ. ನೂತನ ಸಂಸತ್‌ ಕಟ್ಟಡದಲ್ಲಿ ಇದು ದ್ರೌಪದಿ ಮುರ್ಮು ಅವರ ಮೊದಲ ಭಾಷಣವಾಗಿದೆ. ಉಭಯ ಸದನಗಳ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಅವರ ಭಾಷಣದೊಂದಿಗೆ ಬಜೆಟ್ ಅಧಿವೇಶನ ಪ್ರಾರಂಭವಾಗುತ್ತದೆ. 

ಬಜೆಟ್ ಅಧಿವೇಶನಕ್ಕಾಗಿ ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಲು ಅಧ್ಯಕ್ಷೆ ದ್ರೌಪದಿ ಮುರ್ಮು ಬುಧವಾರ ಸಂಸತ್ತಿಗೆ ಆಗಮಿಸಿದರು. ಅವರಿಗೆ ಸೆಂಗೋಲ್‌ ಮೂಲಕ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಸ್ವಾಗತಿಸಿದ್ದಾರೆ. ಆಕೆಯ ಭಾಷಣದ ಮೊದಲು, ಐತಿಹಾಸಿಕ ಚಿನ್ನದ ರಾಜದಂಡವಾದ ಸೆಂಗೋಲ್‌ನ ಆಚರಣೆಗಳನ್ನು ಸದನದಲ್ಲಿ ನಡೆಸಲಾಯಿತು.

ಇಂದಿನಿಂದ ಸಂಸತ್ತಿನ ಬಜೆಟ್‌ ಅಧಿವೇಶನ: ನಾಳೆ ನಿರ್ಮಲಾ ಸೀತಾರಾಮನ್‌ರಿಂದ ಮಧ್ಯಂತರ ಬಜೆಟ್‌ ಮಂಡನೆ

'ಅಮೃತ ಕಾಲ'ದ ಆರಂಭದಲ್ಲಿ ನಿರ್ಮಿಸಲಾದ ಹೊಸ ಸಂಸತ್ತಿನ ಕಟ್ಟಡದಲ್ಲಿ ಇದು ನನ್ನ ಮೊದಲ ಭಾಷಣ ಎಂದು ದ್ರೌಪದಿ ಮುರ್ಮು ಹೇಳಿದರು. ಹಾಗೂ, ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸಿದ್ದಕ್ಕಾಗಿ ನಾನು ಪ್ರಧಾನಿ ಮೋದಿಯನ್ನು ಅಭಿನಂದಿಸುತ್ತೇನೆ ಎಂದೂ ಪ್ರಧಾನಿಯನ್ನು ಶ್ಲಾಘಿಸಿದರು.

ಈ ಸಂಸತ್ತು ತ್ರಿವಳಿ ತಲಾಖ್ ಅನ್ನು ನಿಷೇಧಿಸಿದೆ ಎಂದು ಹೇಳಿದ ರಾಷ್ಟ್ರಪತಿ, ಭಾರತದ ಆರ್ಥಿಕ ಬೆಳವಣಿಗೆಯನ್ನು ಶ್ಲಾಘಿಸಿದರು. ಹಾಗೂ, ಕೇಂದ್ರ ಸರ್ಕಾರವು 25 ಕೋಟಿ ಜನರನ್ನು ಬಡತನದಿಂದ ಮೇಲೆತ್ತಿದೆ ಎಂದು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದರು. 

ಸತತ 6 ಬಾರಿ ಕೇಂದ್ರ ಬಜೆಟ್‌ ಮಂಡಿಸಿ 2ನೇ ಸಚಿವೆಯಾಗಲಿರೋ ನಿರ್ಮಲಾ ಸೀತಾರಾಮನ್: ಈ ಸಾಧನೆ ಮಾಡಿದ ಮೊದಲ ವ್ಯಕ್ತಿ ಇವರೇ!

ಅಲ್ಲದೆ, ಭಾರತದ ಡಿಜಿಟಲ್ ಪ್ರಗತಿಯನ್ನು ವಿದೇಶದಲ್ಲಿ ಪ್ರಶಂಸಿಸಲಾಗಿದೆ. ಶತಮಾನಗಳಿಂದಲೂ (ಅಯೋಧ್ಯೆಯಲ್ಲಿ) ರಾಮಮಂದಿರ ನಿರ್ಮಾಣದ ಭರವಸೆ ನೀಡಲಾಗಿದ್ದು, ಆ ಕನಸು ಈಗ ಈಡೇರಿದೆ. ಜಮ್ಮು ಮತ್ತು ಕಾಶ್ಮೀರದಿಂದ 370ನೇ ವಿಧಿಯನ್ನು ರದ್ದುಗೊಳಿಸಬೇಕೆಂದು ಬಯಸಿದ್ದರು. ಈಗ ಆರ್ಟಿಕಲ್ 370 ಕೂಡ ಇತಿಹಾಸವಾಗಿದೆ ಎಂದೂ ಹೇಳಿದರು.

ಕಳೆದ ವರ್ಷ ಭಾರತವು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಯಿತು. ಭಾರತವು ಚಂದ್ರನ ದಕ್ಷಿಣ ಧ್ರುವವನ್ನು ತಲುಪಿದ ಮೊದಲ ರಾಷ್ಟ್ರವಾಯಿತು. ಭಾರತ ಆಯೋಜಿಸಿದ ಯಶಸ್ವಿ G20 ಶೃಂಗಸಭೆಯು ವಿಶ್ವದಲ್ಲಿ ಭಾರತದ ಪಾತ್ರವನ್ನು ಬಲಪಡಿಸಿತು. ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ 100 ಕ್ಕೂ ಹೆಚ್ಚು ಪದಕಗಳನ್ನು ಗೆದ್ದಿದೆ. ಅಟಲ್ ಸುರಂಗವನ್ನು ಪಡೆದುಕೊಂಡಿದೆ ಎಂದೂ ಮಾಹಿತಿ ನೀಡಿದರು.

ಕಳೆದ 10 ವರ್ಷಗಳಲ್ಲಿ, ರಾಷ್ಟ್ರೀಯ ಹಿತಾಸಕ್ತಿಗಾಗಿ ಜನರು ದಶಕಗಳಿಂದ ಕಾಯುತ್ತಿದ್ದ ಇಂತಹ ಅನೇಕ ಕೆಲಸಗಳನ್ನು ಭಾರತ ಪೂರ್ಣಗೊಳಿಸಿದೆ ಎಂದೂ ದ್ರೌಪದಿ ಮುರ್ಮು ಹೇಳಿದ್ದಾರೆ. ಅಲ್ಲದೆ, 80% ಕುಟುಂಬಗಳು ಭಾರತದಾದ್ಯಂತ ಉಚಿತ ಪಡಿತರವನ್ನು ಪಡೆಯುತ್ತವೆ ಎಂದೂ ಹೇಳಿಕೊಂಡಿದ್ದಾರೆ.
'ಮೇಕ್ ಇನ್ ಇಂಡಿಯಾ' ಮತ್ತು 'ಆತ್ಮನಿರ್ಭರ್ ಭಾರತ್' ನಮ್ಮ ಶಕ್ತಿಯಾಗಿವೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದ್ದಾರೆ. ರಕ್ಷಣಾ ಉತ್ಪಾದನೆಯು 1 ಲಕ್ಷ ಕೋಟಿ ರೂ. ಗಡಿ ದಾಟಿರುವುದನ್ನು ರಾಷ್ಟ್ರಪತಿಗಳು ಶ್ಲಾಘಿಸಿದರು. ನಾವು ಆರ್ಥಿಕತೆಯ ವಿವಿಧ ಆಯಾಮಗಳನ್ನು ನೋಡಿದರೆ, ಭಾರತವು ಸರಿಯಾದ ದಿಕ್ಕಿನಲ್ಲಿದೆ ಎಂಬ ವಿಶ್ವಾಸವು ಬೆಳೆಯುತ್ತದೆ ಎಂದೂ ತಿಳಿಸಿದರು.

ಇನ್ನೊಂದೆಡೆ, ಭಾರತದಲ್ಲಿ ಮಹಿಳೆಯರು ಈಗ ಫೈಟರ್ ಪೈಲಟ್‌ಗಳಾಗಿದ್ದಾರೆ ಎಂದು ಶ್ಲಾಘಿಸಿದ ಅವರು, ಭಾರತದಲ್ಲಿ ರೈತರಿಗೆ ಎಂಎಸ್‌ಪಿಯಾಗಿ 18 ಲಕ್ಷ ಕೋಟಿ ನೀಡಲಾಗಿದೆ, ರೈತರು ಈಗ 2.5 ಪಟ್ಟು ಹೆಚ್ಚು ಎಂಎಸ್‌ಪಿ ಪಡೆಯುತ್ತಿದ್ದಾರೆ ಎಂದೂ ರಾಷ್ಟ್ರಪತಿ ಸಂಸತ್‌ ಜಂಟಿ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

UIDAI Rules: ಯಾವುದೇ ಹೋಟೆಲ್‌ನಲ್ಲಿ ಆಧಾರ್ ಕಾರ್ಡ್ ಫೋಟೋಕಾಪಿ ನೀಡೋ ಅಗತ್ಯವಿಲ್ಲ: ಈ ಹೊಸ ನಿಯಮ ತಿಳ್ಕೊಳ್ಳಿ
ತಾಯಿಯ ಜಾತಿ ಆಧಾರದಲ್ಲೇ ಮಗಳಿಗೆ ಜಾತಿ ಪ್ರಮಾಣಪತ್ರ: ಸುಪ್ರೀಂ ಮಹತ್ವದ ತೀರ್ಪು