ದೆಹಲಿ ಜವಾಹರ್‌ಲಾಲ್ ನೆಹರೂ ಕ್ರೀಡಾಂಗಣದ ಪೆಂಡಾಲ್ ಕುಸಿತ, 8 ಮಂದಿಗೆ ಗಾಯ!

By Suvarna News  |  First Published Feb 17, 2024, 1:05 PM IST

ದೆಹಲಿ ಜವಾಹರ್‌ಲಾಲ್ ನೆಹರೂ ಕ್ರೀಡಾಂಗಣದಲ್ಲಿ ಹಾಕಿದ್ದ ಬೃಹತ್ ಗಾತ್ರದ ಪೆಂಡಾಲ್ ದಿಢೀರ್ ಕುಸಿದು ಬಿದ್ದ ಪರಿಣಾಮ 8 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವನ್ನು ಸ್ಥಳೀಯ ಆಸ್ಪತ್ರೆ ದಾಖಲಿಸಲಾಗಿದೆ.


ನವದೆಹಲಿ(ಫೆ.17) ಕಾರ್ಯಕ್ರಮಕ್ಕಾಗಿ ಹಾಕಿದ್ದ ತಾತ್ಕಾಲಿಕ ಪೆಂಡಾಲ್ ಕುಸುದು 8 ಮಂದಿ ಗಾಯಗೊಂಡ ಘಟನೆ ದೆಹಲಿಯ ಜವಾಹರ್‌ಲಾಲ್ ನೆಹರೂ ಕ್ರೀಡಾಂಗಣದಲ್ಲಿ ನಡೆದಿದೆ. ಮೈದಾನದ ಗೇಟ್ ನಂಬರ್ 2 ಬಳಿ ಹಾಕಿದ್ದ ಪೆಂಡಾಲ್ ದಿಢೀರ್ ಕುಸಿದು ಬಿದ್ದಿದೆ. ಈ ವೇಳೆ ಕಾರ್ಮಿಕರು ಸೇರಿದಂತೆ ಇತರರು ಗಾಯಗೊಂಡಿದ್ದಾರೆ. ಪೆಂಡಾಲ್ ಅಡಿಯಲ್ಲಿ ಸಿಲುಕಿದ್ದವರ ಪೈಕಿ 8 ಮಂದಿಗೆ ಗಾಯಗಳಾಗಿದ್ದರೆ, ಇಬ್ಬರಿಗೆ ಯಾವುದೇ ಗಾಯವಾಗಿಲ್ಲ. ಗಾಯಗೊಂಡವರನ್ನು ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೃಷ್ಠವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಪೆಂಡಾಲ್ ಕುಸಿದ ಮಾಹಿತಿ ತಿಳಿಯುತ್ತಿದ್ದ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿತು. ಪೆಂಡಾಲ್ ಅಡಿಯಲ್ಲಿ ಸಿಲುಕಿದ್ದ 10 ಮಂದಿ ಪೈಕಿ 8 ಮಂದಿ ಗಾಯಗೊಂಡವರು ಹಾಗೂ ಇಬ್ಬರನ್ನು ಸುರಕ್ಷಿತವಾಗಿ ಹೊರತೆಗೆಯಲಾಗಿದೆ. ರಕ್ಷಣಾ ಕಾರ್ಯ ಮುಂದುವರಿಸಿರುವ ಪೊಲೀಸರು, ಪೆಂಡಾಲ್ ಅಡಿಯಲ್ಲಿ ಯಾರಾದರು ಸಿಲುಕಿದ್ದರೆ ಸುರಕ್ಷಿತವಾಗಿ ಹೊರತೆಯಲು ಶ್ರಮಿಸುತ್ತಿದ್ದಾರೆ.

Latest Videos

undefined

ರಾಷ್ಟ್ರಪತಿ ಪ್ರಯಾಣಿಸಿದ ಮಾರನೇ ದಿನ ದಿಲ್ಲಿ ಮೆಟ್ರೋ ನಿಲ್ದಾಣದ ಭಾಗ ಕುಸಿದು ದುರಂತ, ಓರ್ವ ಸಾವು

 10 ರಿಂದ 12 ಮಂದಿ ಪೆಂಡಾಲ್ ಅಡಿಯಲ್ಲಿ ಸಿಲುಕಿರುವ ಸಾಧ್ಯತೆ ಇದೆ ಎಂದು ಪೊಲೀಸರು ಹೇಳಿದ್ದಾರೆ. ಅತೀ ದೊಡ್ಡ ಪೆಂಡಾಲ್ ಆಗಿರುವ ಕಾರಣ ಪೊಲೀಸರು ಸೂಕ್ಷ್ಮವಾಗಿ ಪರಿಶೀಲಿಸಿ ಪೆಂಡಾಲ್ ತೆಗೆಯುವ ಕಾರ್ಯಾಚರಣೆ ಆರಂಭಿಸಿದ್ದಾರೆ. ಆಸ್ಪತ್ರೆ ದಾಖಲಾಗಿರುವ ಗಾಯಾಳುಗಲಿಗೆ ಸೂಕ್ತ ಚಿಕ್ತಿತ್ಸೆ ನೀಡಲಾಗುತ್ತಿದೆ. ಕೆಲವರ ಮೂಳೆಗಳು ಮುರಿತಗೊಂಡಿದೆ ಎಂದು ಆಸ್ಪತ್ರೆ ಮೂಲಗಳ ಹೇಳಿವೆ. 

 

| Police say more than 8 people have been injured after a temporary structure installed near Gate number 2 of Jawaharlal Nehru stadium collapsed pic.twitter.com/Dc5sZTwqyb

— ANI (@ANI)

 

 ಜವಾಹರ್‌ಲಾಲ್ ನೆಹರೂ ಕ್ರೀಡಾಂಗಣದ ಪೆಂಡಾಲ್ ಕುಸಿತದ ಕುರಿತು ದೆಹಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪೆಂಡಾಲ್ ಅಳವಡಿಕೆ ವೇಳೆ ಸುರಕ್ಷತಾ ಕ್ರಮಗಳನ್ನು ಜರುಗಿಸಲಾಗಿದೆಯಾ ಅನ್ನೋದನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಪೆಂಡಾಲ್ ಅಳವಡಿಕೆಗೆ ಪಡೆದುಕೊಂಡಿರುವ ಅನುಮತಿ, ಕಾರಣ ಸೇರಿದಂತೆ ಇತರ ಎಲ್ಲಾ ಆಯಾಮಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

 

ನವೀಕರಣದ ವೇಳೆ ಕುಸಿದ ಬಹುಮಹಡಿ ಕಟ್ಟಡ, 6 ಮಹಿಳಾ ಕಾರ್ಮಿಕರು ಸಾವು!

click me!