ಫುಡ್ ಡೆಲಿವರಿಗೆ ಮೊದಲ ಬಾರಿಗೆ ಡ್ರೋನ್ ಬಳಸಿದ ಸಂಸ್ಥೆ, ಎಡವಟ್ಟಿನಿಂದ ದಾಖಲಾಯ್ತು ಕೇಸ್!

By Suvarna News  |  First Published Feb 17, 2024, 12:26 PM IST

ಕ್ಯಾಮೆರಾ, ಕೃಷಿ, ಔಷಧ ಸರಬರಾಜು, ರಕ್ಷಣಾ ವ್ಯವಸ್ಥೆಯಿಂದ ಬಹುತೇಕ ಎಲ್ಲಾ ಕ್ಷೇತ್ರದಲ್ಲಿ ಡ್ರೋನ್ ಬಳಕೆಯಾಗುತ್ತಿದೆ. ಇದೀಗ ಆಹಾರ ಡೆಲಿವರಿಗೂ ಡ್ರೋನ್ ಬಳಸಲಾಗುತ್ತಿದೆ. ಆದರೆ ಗುರುಗ್ರಾಂನಲ್ಲಿ ಇದೇ ಮೊದಲ ಬಾರಿಗೆ ಫುಡ್ ಡೆಲಿವರಿ ಮಾಡಲು ಡ್ರೋನ್ ಬಳಕೆ ಮಾಡಲಾಗಿತ್ತು. ಮೊದಲ ಪ್ರಯತ್ನದಲ್ಲೇ ಕೇಸ್ ದಾಖಲಾಗಿದೆ. 


ಗುರುಗ್ರಾಂ(ಫೆ.17) ಆನ್‌ಲೈನ್ ಫುಡ್ ಆರ್ಡರ್ ಮಾಡಿದ ಗ್ರಾಹಕರಿಗೆ ಕನಿಷ್ಠ ಸಮಯದಲ್ಲಿ ಆಹಾರ ತಲುಪಿಸುವುದು ಅತ್ಯಂತ ಸವಾಲು. ನಗರ ಪ್ರದೇಶಗಳಲ್ಲಿನ ಟ್ರಾಫಿಕ್ ಸೇರಿದಂತೆ ಇತರ ಕಾರಣಗಳಿಂದ ಆಹಾರ ತಲುಪಿಸಲು ಡ್ರೋನ್ ನೆರವು ಪಡೆದುಕೊಳ್ಳುತ್ತಿದ್ದಾರೆ. ಔಷಧ ಸರಬರಾಜು ಸೇರಿದಂತೆ ಹಲವು ಕಾರಣಗಳಿಗೆ ಡ್ರೋನ್ ಬಳಕೆಯಾಗುತ್ತಿದೆ. ಹೀಗೆ ಡ್ರೋನ್ ಮೂಲಕ ಸುಲಭವಾಗಿ ಫುಡ್ ಡೆಲವರಿ ಮಾಡಲು ಆನ್‌ಲೈನ್ ಫುಡ್ ಬುಕಿಂಗ್ ಸಂಸ್ಥೆ ಪ್ಲಾನ್ ಹಾಕಿಕೊಂಡು ಗುರುಗ್ರಾಂನಲ್ಲಿ ಈ ಸೇವೆ ಆರಂಭಿಸಿತು. ಗುರುಗ್ರಾಂನಲ್ಲಿ ಡ್ರೋನ್ ಮೂಲಕ ಆಹಾರ ಡೆಲಿವರಿ ಆರಂಭಿಸಿದ ಮೊದಲ ಸಂಸ್ಥೆ ಅನ್ನೋ ಹೆಗ್ಗಳಿಕೆಗೂ ಪಾತ್ರವಾಗಿತ್ತು. ಆದರೆ ಆಹಾರ ಡೆಲವರಿ ಮಾಡಲು ಹೊರಟ ಡ್ರೋನ್ ಇನ್ನೇನು ಕೆಲವೇ ಕ್ಷಣಗಳಲ್ಲಿ ಉದ್ದೇಶಿತ ವಿಳಾಸ ತಲುಪಬೇಕಿತ್ತು. ಎರಡು ಕಟ್ಟಗಳ ಮೇಲಿಂದ ಸಾಗುತ್ತಿದ್ದ ಡ್ರೋನ್ ಏಕಾಏಕಿ ಡಿಶ್ ಟಿವಿ ಆ್ಯಂಟಿನಾಗೆ ಡಿಕ್ಕಿಯಾಗಿದೆ. ಇದರ ಪರಿಣಾಮ ಇದೀಗ ಸಂಸ್ಥೆ ಮಾಲೀಕನ ಮೇಲೆ ಪ್ರಕರಣ ದಾಖಲಾಗಿದೆ.

ರಾಷ್ಟ್ರ ರಾಜಧಾನಿ ವ್ಯಾಪ್ತಿಯ ಗುರುಗ್ರಾಂ ಸುತ್ತಮುತ್ತಲಿನ ಪ್ರದೇಶ ಟ್ರಾಫಿಕ್, ರೈತರ ಪ್ರತಿಭಟನೆ, ಸೆಕ್ಷನ್ 144 ಗಳಿಂದ ಆನ್‌ಲೈನ್ ಮೂಲಕ ಆಹಾರ ಬುಕ್ ಮಾಡುವು ಗ್ರಾಹಕರಿಗೆ ತಲುಪಿಸುವುದು ಅತೀ ದೊಡ್ಡ ಸವಾಲು. ಹೀಗ ಫೆಬ್ರವರಿ 16 ರಂದು ಆನ್‌ಲೈನ್ ಫುಡ್ ಡೆಲಿವರಿ ಸಂಸ್ಥೆ 50 ಕೆಜಿ ತೂಕ ಸಾಮರ್ಥ್ಯದ ಡ್ರೋನ್ ಮೂಲಕ ಆಹಾರ ವಿತರಣೆ ಮಾಡಲು ನಿರ್ಧರಿಸಿತ್ತು.

Latest Videos

undefined

Drone Mahotsav 2022 ಬೆಂಗಳೂರಿನ ಡ್ರೋನ್ ಹಾರಿಸಿ ಕಾರ್ಯಕ್ರಮ ಉದ್ಘಾಟಿಸಿದ ಪ್ರಧಾನಿ ಮೋದಿ!

ಬುಕಿಂಗ್ ಮಾಡಿದ ಗ್ರಾಹಕರ ಆಹಾರವನ್ನು ಹೊತ್ತ ಡ್ರೋನ್ ಹಾರಾಟ ಆರಂಭಿಸಿತು. ಕೆಲವೇ ಕ್ಷಣಗಳಲ್ಲಿ ಡ್ರೋನ್ ಬುಕಿಂಗ್ ಗ್ರಾಹಕರ ವಿಳಾಸದತ್ತ ತಲುಪಿತ್ತು. ಕಟ್ಟಡದ ಮೇಲೆ ಡ್ರೋನ್ ಇಳಿಸುವಾಗ ಬ್ಯಾಲೆನ್ಸ್ ತಪ್ಪಿದೆ. ಇದರ ಪರಿಣಾಮ ಕಟ್ಟಡದ ಮೇಲೆ ಫಿಕ್ಸ್ ಮಾಡಿದ್ದ ಟಿವಿ ಡಿಶ್‌ಗೆ ಬಡಿದಿದೆ. ಭಾರಿ ಸದ್ದು ಆಗಮಿಸಿದೆ. ಈ ಶಬ್ದಕ್ಕೆ ಈ ನಿವಾಸಿಗಳು ಬೆಚ್ಚಿ ಬಿದ್ದಿದ್ದಾರೆ. ಮನೆಯಿಂದ ಹೊರಗೋಡಿದ್ದಾರೆ. 

ಕಟ್ಟಡದ ಮೇಲಿನ ಮಹಡಿಯಲ್ಲಿದ್ದ ನಿವಾಸಿಗಳು ಕಟ್ಟಡದ ಮೇಲೆ ತೆರಳಿ ನೋಡಿದಾಗ ಡ್ರೋನ್ ಅಪಘಾತಕ್ಕೀಡಾಗಿರುವುದು ಗಮನಕ್ಕೆ ಬಂದಿದೆ. ಡ್ರೋನ್‌ನಲ್ಲಿದ್ದ ಆಹಾರಗಳು ಚೆಲ್ಲಾಪಿಲ್ಲಿಯಾಗಿದೆ. ಇತ್ತ ಭಾರಿ ಶಬ್ದದ ಕಾರಣ ಪೊಲೀಸ್ ಠಾಣೆಗೂ ಮಾಹಿತಿ ತಲುಪಿದೆ. ತಕ್ಷಣವೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಡ್ರೋನ್ ವಶಕ್ಕೆ ಪಡೆದಿದ್ದಾರೆ. ಬಳಿಕ ಫುಡ್ ಡೆಲಿವರಿ ಸಂಸ್ಥೆ ಮೇಲೆ ದೂರು ದಾಖಲಿಸಿದ್ದಾರೆ.

 

Vijayapura: ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ವಿದ್ಯಾರ್ಥಿನಿಯರಿಗೆ ಡ್ರೋನ್‌ ಟ್ರೈನಿಂಗ್!

ಇದೀಗ ಡ್ರೋನ್ ಬಳಕೆ ಸುರಕ್ಷತೆ ಕುರಿತು ಪ್ರಶ್ನೆ ಎದ್ದಿದೆ. ಈ ಪ್ರಕರಣ ಗಂಭೀರವಾಗುವ ಸಾಧ್ಯತೆ ಇದೆ. ಡ್ರೋನ್ ಬಳಕೆಗೆ ಅನುಮತಿ, ಸುರಕ್ಷತೆ ಸೇರಿದಂತೆ ಹಲವು ಪ್ರಶ್ನೆಗಳು ಎದ್ದಿದೆ.

click me!