ರಾಹುಲ್ ಗಾಂಧಿಗೆ ಚುನಾವಣಾ ಆಯೋಗ ವಾರ್ನಿಂಗ್, ಪನೌತಿ, ಜೇಬುಗಳ್ಳ ಹೇಳಿಕೆಗೆ ಗರಂ!

By Suvarna News  |  First Published Mar 6, 2024, 8:47 PM IST

ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಚುನಾವಣಾ ಆಯೋಗ ಖಡಕ್ ವಾರ್ನಿಂಗ್ ನೀಡಿದೆ. ಎಚ್ಚರಿಕೆಯಿಂದ ಮಾತನಾಡಿ ಎಂದು ಸೂಚಿಸಿದೆ. ಇಷ್ಟೇ ಅಲ್ಲ ಮತ್ತೆ ಇದೇ ತಪ್ಪು ಮಾಡಿದರೆ ಕಠಿಣ ಕ್ರಮದ ಎಚ್ಚರಿಕೆ ನೀಡಿದೆ.


ನವದೆಹಲಿ(ಮಾ.06) ಲೋಕಸಭಾ ಚುನಾವಣಾ ಕಣ ರಂಗೇರುತ್ತಿದೆ. ವಾಕ್ಸಮರ್, ಏಟು ಏದಿರೇಟುಗಳು ಆರಂಭಗೊಂಡಿದೆ. ಇದರ ಬೆನ್ನಲ್ಲೇ ಚುನಾವಣಾ ಆಯೋಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಖಡಕ್ ವಾರ್ನಿಂಗ್ ನೀಡಿದೆ. ಪ್ರಧಾನಿ ಮೋದಿ ವಿರುದ್ಧ ಕಳೆದ ವರ್ಷ ರಾಹುಲ್ ಗಾಂಧಿ ನೀಡಿದ ಹೇಳಿಕೆ ಕುರಿತು ಚುನಾವಣಾ ಆಯೋಗ ಗರಂ ಆಗಿದೆ. ಮೋದಿ ಪನೌತಿ, ಜೇಬುಗಳ್ಳ ಅನ್ನೋ ರಾಹುಲ್ ಗಾಂಧಿ ಹೇಳಿಕೆ ಭಾರಿ ಕೋಲಾಹಲ ಸೃಷ್ಟಿಸಿತ್ತು. ಈ ಕುರಿತು ಆಯೋಗ ವಾರ್ನಿಂಗ್ ನೀಡಿದೆ. ಮಾತನಾಡುವ ಎಚ್ಚರಿಕೆಯಿಂದ ಇರಿ, ಇದೇ ತಪ್ಪು ಮುಂದುವರಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದೆ.

ವಿಶ್ವಕಪ್ ಫೈನಲ್ ಪಂದ್ಯ ವೀಕ್ಷಿಸಿದ್ದ ಮೋದಿಗೆ ಅಪಶಕುನಾ ಎಂದು ರಾಹುಲ್ ಗಾಂಧಿ ಹೇಳಿದ್ದರು. ಇತ್ತ ಮೋದಿ ಜೇಬುಗಳ್ಳ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ವಿರುದ್ಧ ಬಿಜೆಪಿ ತೀವ್ರ ಆಕ್ರೋಶ ಹೊರಹಾಕಿತ್ತು. ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು. ಇದೀಗ ಮಾರ್ಚ್ 1 ರಂದು ಚುನಾವಣಾ ಆಯೋಗ ನೀತಿ ಸಂಹಿತೆ, ಹೇಳಿಕೆಗಳ ಮಾರ್ಗಸೂಚಿ ನೀಡಿದೆ. ಈ ವೇಳೆ ಇಂತಹ ತಪ್ಪುಗಳು ಮರುಕಳಿಸದಂತೆ ನೋಡಿಕೊಳ್ಳಲು ಸೂಚಿಸಿದೆ. ರಾಹುಲ್ ಗಾಂಧಿಗೆ ಚುನಾವಣಾ ಆಯೋಗ ನೀಡಿರುವ ನೋಟಿಸ್‌ನಲ್ಲಿ ಈ ವಿಚಾರಗಳ ಕುರಿತು ಎಚ್ಚರಿಕೆ ನೀಡಿದೆ.

Tap to resize

Latest Videos

ರಾಯ್‌ಬರೇಲಿಯಿಂದ ಪ್ರಿಯಾಂಕಾ, ಅಮೆಥಿ-ವಯನಾಡಿನಿಂದ ರಾಹುಲ್ ಗಾಂಧಿ ಸ್ಪರ್ಧೆ ಸಾಧ್ಯತೆ!

ಚುನಾವಣಾ ವೇಳೆ ಪಕ್ಷದ ಸ್ಟಾರ್ ಪ್ರಚಾಕರು ಅತೀವ ಎಚ್ಚರಿಕೆಯಿಂದ ಮಾತನಾಡಬೇಕು. ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಈಗಾಗಲೇ ನಿಯಮ ಉಲ್ಲಂಘಿಸಿ ವಾರ್ನಿಂಗ್ ಪಡೆದಿದ್ದರೆ ಶಿಕ್ಷೆ ಪ್ರಮಾಣ ಹೆಚ್ಚಾಗಲಿದೆ ಎಂದು ಚುನಾವಣಾ ಆಯೋಗ ಹೇಳಿದೆ.  

ಪಿಎಂ ಎಂದರೆ ಪನೌತಿ (ಅಪಶಕುನ/ದುರಾದೃಷ್ಟ) ಮೋದಿ ಎಂದರ್ಥ. ಪ್ರಧಾನಿ ನರೇಂದ್ರ ಮೋದಿ ದುರಾದೃಷ್ಟವನ್ನು ತರುತ್ತಾರೆ’ ಎಂದು ವಿಶ್ವಕಪ್‌ ಫೈನಲ್ ಪಂದ್ಯವನ್ನು ಮೋದಿ ವೀಕ್ಷಿಸಿದ ಬಳಿಕ ರಾಹುಲ್ ಗಾಂಧಿ ಹೇಳಿಕೆ ನೀಡಿದ್ದರು. ಈ ಪಂದ್ಯದಲ್ಲಿ ಭಾರತ ಸೋಲು ಕಂಡಿತ್ತು.  2023ರ ರಾಜಸ್ಥಾನ ವಿಧಾನಸಭಾ ಚುನಾವಣಾ ರ್ಯಾಲಿಯಲ್ಲಿ ರಾಹುಲ್ ಗಾಂಧಿ ಈ ಮಾತು ಹೇಳಿದ್ದರು.

'ದೇಶ ವಿರೋಧಿಗಳ ಜೊತೆ ಭಾರತ್‌ ತೋಡೋ..'ಸೋಶಿಯಲ್‌ ಮೀಡಿಯಾದಲ್ಲಿ ಟ್ರೆಂಡ್‌ ಆಗ್ತಿದೆ ರಾಹುಲ್‌-ಇಲ್ತಾಜ್‌ ಫೋಟೋ!

ರಾಹುಲ್‌ ಗಾಂಧಿ ಈ ಹಿಂದೆ ಮೋದಿ ಹೆಸರಿನವರೆಲ್ಲ ಕಳ್ಳ ಎಂದಿದ್ದರು. ಅದಕ್ಕಾಗಿ ಅವರಿಗೆ ಜೈಲು ಶಿಕ್ಷೆಯಾಗಿತ್ತು. ಮೋದಿ ಅವರನ್ನು ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರು ಒಮ್ಮೆ ‘ಮೌತ್ ಕಾ ಸೌದಾಗರ್’ ಎಂದು ಕರೆದಿದ್ದರು.

click me!