ಡಿಎಂಕೆ ಪರ ಡಿಕೆಶಿ ಪ್ರಚಾರ ಪ್ರಶ್ನಿಸಿದ ಪಳನಿಸ್ವಾಮಿ, ತಮಿಳುನಾಡು ಚುನಾವಣೆಲೂ ಮೇಕೆದಾಟು ಡ್ಯಾಂ ಗದ್ದಲ

Published : Apr 13, 2026, 07:27 AM IST
Edappadi Palaniswami

ಸಾರಾಂಶ

ಎಐಎಡಿಎಂಕೆ ನಾಯಕ ಪಳನಿಸ್ವಾಮಿ ಅವರು ಡಿಎಂಕೆ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ತಮಿಳುನಾಡಿಗೆ ಮಾರಕವಾದ ಮೇಕೆದಾಟು ಯೋಜನೆಗೆ ಮುಂದಾಗಿರುವ ಕರ್ನಾಟಕದ ಡಿಸಿಎಂ ಡಿಕೆಶಿ ಜೊತೆ ಡಿಎಂಕೆ ಜಂಟಿ ಪ್ರಚಾರ ನಡೆಸಿರುವುದು ಜನರ ಹಿತಕ್ಕೆ ವಿರುದ್ಧ ಎಂದಿದ್ದಾರೆ.

ತಂಜಾವೂರು (ಏ.13): ಆಡಳಿತಾರೂಢ ಡಿಎಂಕೆ ಮತ್ತು ವಿಪಕ್ಷ ಎಐಎಡಿಎಂಕೆ ನಡುವಿನ ಚುನಾವಣಾ ಸಮರದಲ್ಲಿ ಇದೀಗ ಕರ್ನಾಟಕದ ‘ಮೇಕೆದಾಟು’ ಯೋಜನೆಯೂ ಪ್ರಸ್ತಾಪವಾಗಿ ಗದ್ದಲಕ್ಕೆ ಸಾಕ್ಷಿಯಾಗಿದೆ. ಶನಿವಾರ ಇಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡಿದ ಎಐಎಡಿಎಂಕೆ ನಾಯಕ ಪಳನಿಸ್ವಾಮಿ, ‘ಡಿಎಂಕೆ ಪಕ್ಷವು, ತಮಿಳುನಾಡು ಜನರ ಹಿತ ಕಾಯುವಲ್ಲಿ ಇಬ್ಬಗೆ ನೀತಿ ಪ್ರದರ್ಶಿಸುತ್ತಿದೆ. ತಮಿಳು ಜನರ ಕೃಷಿಗೆ ಮಾರಕವಾದ ಮೇಕೆದಾಟು ಯೋಜನೆ ಜಾರಿಗೆ ಮುಂದಾಗಿರುವ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಜತೆ ಡಿಎಂಕೆ ಜಂಟಿ ಪ್ರಚಾರ ನಡೆಸಿದೆ’ ಎಂದು ಕುಟುಕಿದ್ದಾರೆ.

ಕೇಂದ್ರದೊಡನೆ ಉದ್ದೇಶಪೂರ್ವಕವಾಗಿ ಸಂಘರ್ಷ ನಡೆಸಿರುವ ಡಿಎಂಕೆ ರಾಜ್ಯಕ್ಕೆ ಅನುದಾನ ತರಲು ವಿಫಲವಾಗಿದೆ. ಚುನಾವಣೆ ವೇಳೆ ಪಕ್ಷಗಳ ನಡುವೆ ಭಿನ್ನಾಭಿಪ್ರಾಯ ಸಹಜ. ಆದರೆ ಚುನಾಯಿತ ಸರ್ಕಾರ ಜನರ ಹಿತಕ್ಕಾಗಿ ದುಡಿಯಬೇಕು ಎಂದು ತಿವಿದಿದ್ದಾರೆ.

 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India News Live: ಡಿಎಂಕೆ ಪರ ಡಿಕೆಶಿ ಪ್ರಚಾರ ಪ್ರಶ್ನಿಸಿದ ಪಳನಿಸ್ವಾಮಿ, ತಮಿಳುನಾಡು ಚುನಾವಣೆಲೂ ಮೇಕೆದಾಟು ಡ್ಯಾಂ ಗದ್ದಲ
10ನೇ ವಯಸ್ಸಿಗೆ ಗಾಯನ, 16ಕ್ಕೆ ಮದುವೆ ಗಾನ; ಹಾಡು ನಿಲ್ಲಿಸಿದ ಕ್ವೀನ್‌ ಆಫ್‌ ಇಂಡಿಪಾಪ್‌