
ಇಸ್ಲಾಮಾಬಾದ್: ಉಗ್ರಪೋಷಕ ಪಾಕಿಸ್ತಾನದಲ್ಲಿ ಸಾಲದ ಬೆಟ್ಟ ಸಾರ್ವಕಾಲಿಕ ದಾಖಲೆಗೆ ಏರಿದೆ. ದೇಶದಲ್ಲಿ ಒಟ್ಟು ಸಾಲದ ಮೊತ್ತವು 76 ಲಕ್ಷ ಕೋಟಿ ಪಾಕ್ ರು.ಗೆ (23 ಲಕ್ಷ ಭಾರತೀಯರು.) (2.6 ಲಕ್ಷ ಅಮೆರಿಕನ್ ಡಾಲರ್) ತಲುಪಿದ್ದು, ಪಾಕಿಸ್ತಾನದ ಅರ್ಥ ವ್ಯವಸ್ಥೆ ಮೇಲೆ ತೂಗುಗತ್ತಿತಾಗಿ ನೇತಾಡುತ್ತಿದೆ ಎಂದು ವರದಿ ಹೇಳಿದೆ.
ಅಲ್ಲಿನ ಆರ್ಥಿಕ ಸಮೀಕ್ಷೆ ಬಿಡುಗಡೆಯಾಗಿದ್ದು, ಮಾರ್ಚ್ 2025ರ ವೇಳೆಗೆ 76 ಲಕ್ಷ ಕೋಟಿ ರು. ಸಾಲಿದೆ ಎಂದು ಅಂಕಿ ಅಂಶ ತಿಳಿಸಿದೆ. ಕಳೆದ 10 ವರ್ಷದಲ್ಲಿ ಈ ಮೊತ್ತವು 5 ಪಟ್ಟು ಹೆಚ್ಚಳವಾಗಿದ್ದು, ಜನರ ಮೇಲೆ ಸಾಲದ ಹೊರೆ ಹೆಚ್ಚಾಗಿದೆ ಎಂದು ಅದು ಹೇಳಿದೆ.
ಪಾಕಿಸ್ತಾನದ ಸಾಲವು 10 ವರ್ಷಗಳ ಹಿಂದೆ 17 ಲಕ್ಷ ಕೋಟಿ ರು., 2020-21ರಲ್ಲಿ 39 ಲಕ್ಷ ಕೋಟಿ ರು.ಗೆ ಹೆಚ್ಚಳವಾಗಿತ್ತು. ನಾಲ್ಕು ವರ್ಷದಲ್ಲಿ ಈ ಮೊತ್ತವು ದುಪಟ್ಟು ಹೆಚ್ಚಳವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ