ಪಾಕ್​ನಿಂದ ಅಣ್ವಸ್ತ್ರ ಬೆದರಿಕೆ; ತುರ್ತು ಸಭೆ ಕರೆದ ಪಾಕ್​, ಯುಎಸ್​ ಮಧ್ಯಸ್ಥಿಕೆ

Published : May 10, 2025, 10:20 AM IST
ಪಾಕ್​ನಿಂದ ಅಣ್ವಸ್ತ್ರ ಬೆದರಿಕೆ; ತುರ್ತು ಸಭೆ ಕರೆದ ಪಾಕ್​, ಯುಎಸ್​ ಮಧ್ಯಸ್ಥಿಕೆ

ಸಾರಾಂಶ

ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತ ಆಪರೇಷನ್ ಸಿಂದೂರ್ ನಡೆಸಿತು. ಪಾಕಿಸ್ತಾನ ಅಣ್ವಸ್ತ್ರ ಬೆದರಿಕೆ ಹಾಕಿದ್ದು, ಅಮೆರಿಕ ಮಧ್ಯಸ್ಥಿಕೆಗೆ ಮುಂದಾಗಿದೆ. ಜಿ7 ರಾಷ್ಟ್ರಗಳು ಶಾಂತಿ ಮರುಸ್ಥಾಪನೆಗೆ ಕರೆ ನೀಡಿವೆ. ಭಾರತದ ಎಸ್-೪೦೦ ರಕ್ಷಣಾ ವ್ಯವಸ್ಥೆ ಪಾಕ್ ದಾಳಿಗಳನ್ನು ತಡೆಯಿತು. ಮಹಿಳಾ ನಾಯಕತ್ವದಲ್ಲಿ ಭಾರತದ ಕಾರ್ಯಾಚರಣೆಗೆ ಜಾಗತಿಕ ಮೆಚ್ಚುಗೆ ವ್ಯಕ್ತವಾಗಿದೆ.

ದೆಹಲಿ: ಪಹಲ್ಗಾಮ್ ದಾಳಿ ಬೆನ್ನಲ್ಲೆ ಭಾರತ ಆಪರೇಷನ್ ಸಿಂದೂರ್ ನಡೆಸಿದ್ದು, ಪಾಕಿಸ್ತಾನ ತತ್ತರಿಸಿದೆ. ತನ್ನ ಹತ್ತಿರ ಅಣ್ವಸ್ತ್ರ ಇಟ್ಕೊಂಡಿರುು ಪಾಕಿಸ್ತಾನ, ಭಾರತದ ಮೇಲೆ ಇದನ್ನು ಪ್ರಯೋಗಿಸುವುದಾಗಿ ಬೆದರಿಕೆ ಹಾಕಿದ್ದು, ಪಾಕ್ ಪ್ರಧಾನಿ ಶಹಬಾಜ್ ಷರೀಫ್ ಅಣ್ವಸ್ತ್ರ ಕುರಿತು ಕಮಾಂಡ್ ಅಥಾರಿಟಿ ಸಭೆ ಕರೆದಿದ್ದಾರೆ. ಕಾಶ್ಮೀರ ಮತ್ತು ಗಡಿ ರಾಜ್ಯಗಳ ಮೇಲೆ ದಿನಗಳಿಂದ ದಾಳಿ ನಡೆಸಿದ ನಂತರ ಭಾರತಕ್ಕೆ ಈ ಬೆದರಿಕೆ ಹಾಕುತ್ತಿರುವ ಪಾಕಿಸ್ತಾನ, ನಮ್ಮ ದೇಶದ ಮೇಲಿನ ದಾಳಿಯನ್ನು ಮುಂದುವರಿಸಿದೆ. 

ಭಾರತ-ಪಾಕಿಸ್ತಾನ ಯುದ್ಧ ಪರಿಸ್ಥಿತಿಗೆ ಬಗ್ಗೆ ನ್ಯೂಟಲ್ ಆಗಿರುವುದಾಗಿ ನಿನ್ನೆಯಷ್ಟೇ ಹೇಳಿದ್ದ ಅಮೆರಿಕ ಇದೀಗ ಪಾಕಿಸ್ತಾನದ ಅಣ್ವಸ್ತ್ರ ಬೆದರಿಕೆ ನಂತರ ಮಧ್ಯಸ್ಥಿಕೆ ವಹಿಸಲು ಆಸಕ್ತಿ ತೋರುತ್ತಿದ್ದು, ಯುಎಸ್ ಸ್ಟೇಟ್ ಸೆಕ್ರೆಟರಿ ಮಾರ್ಕೊ ರುಬಿಯೊ ಪಾಕ್ ಸೇನಾ ಮುಖ್ಯಸ್ಥರ ಜೊತೆ ಮಾತುಕತೆ ನಡೆಸಿದ್ದಾರೆ. ಪಾಕಿಸ್ತಾನ ಅಣ್ವಸ್ತ್ರ ಪ್ರಾಧಿಕಾರ ಸಮಿತಿ ಸಭೆ ಕರೆದ ನಂತರ ಅಮೆರಿಕ ಈ ನಡೆಗೆ ಮುಂದಾಗಿದೆ. ಇಂದು ಪಾಕ್ ಪ್ರಧಾನಿ ನೇತೃತ್ವದಲ್ಲಿ ಅಣ್ವಸ್ತ್ರ ಪ್ರಯೋಗ ಕುರಿತು ನಿರ್ಧಾರ ತೆಗೆದುಕೊಳ್ಳಲು ಸಮಿತಿ ಸಭೆ ಸೇರಲಿದೆ. ಈ ನಡುವೆಯೇ ಉಭಯ ರಾಷ್ಟ್ರಗಳು ಯುದ್ಧ ಸಂಘರ್ಷದಿಂದ ಹಿಂದೆ ಸರಿಯಬೇಕೆಂದು ಜಿ7 ರಾಷ್ಟ್ರಗಳೂ ಒತ್ತಡ ಹೇರುತ್ತಿವೆ. 

ಭಾರತ-ಪಾಕ್ ಸಂಘರ್ಷಿತ ಪ್ರದೇಶದಲ್ಲಿ ಶಾಂತಿ ಮರುಸ್ಥಾಪನೆಯಾಗಬೇಕೆಂದು ಜಿ-7 ರಾಷ್ಟ್ರಗಳ ಒಕ್ಕೂಟ ಹೇಳಿಕೆ ನೀಡಿದೆ. ಏಪ್ರಿಲ್ 22 ರಂದು ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ 26 ಹಿಂದೂ ಪ್ರವಾಸಿಗರ ಹತ್ಯೆಗೆ  ಕಾರಣವಾದ ಭಯೋತ್ಪಾದಕ ದಾಳಿಯನ್ನು ಜಿ7 ರಾಷ್ಟ್ರಗಳು ಖಂಡಿಸಿವೆ. ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಯುಕೆ, ಯುಎಸ್, ಯುರೋಪಿಯನ್ ಒಕ್ಕೂಟ ಜಿ7 ರಾಷ್ಟ್ರಗಳಾಗಿವೆ.

'ಪಹಲ್ಗಾಮ್‌ನಲ್ಲಿ ಏಪ್ರಿಲ್ 22 ರಂದು ನಡೆದ ಭಯೋತ್ಪಾದಕ ದಾಳಿಯನ್ನು ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಯುಕೆ, ಯುಎಸ್ ದೇಶಗಳ ವಿದೇಶಾಂಗ ಮಂತ್ರಿಗಳು ಮತ್ತು ಯುರೋಪಿಯನ್ ಒಕ್ಕೂಟದ ಹಿರಿಯ ಪ್ರತಿನಿಧಿಗಳು ಖಂಡಿಸಿದ್ದಾರೆ. ಇಂಡಿಯಾ ಮತ್ತು ಪಾಕಿಸ್ತಾನ ಸಂಘರ್ಷದಿಂದ ದೂರವಾಗಬೇಕು.ದಾಳಿ ಪ್ರತಿದಾಳಿಗೆ ಮಿಲಿಟರಿ ಕ್ರಮಗಳು ಪ್ರದೇಶದ ಸ್ಥಿರತೆಗೆ ಅಪಾಯಕಾರಿ. ಎರಡೂ ಕಡೆಯ ನಾಗರಿಕರ ಸುರಕ್ಷತೆಯ ಬಗ್ಗೆ ಜಿ7 ರಾಷ್ಟ್ರಗಳು ಕಳವಳ ವ್ಯಕ್ತಪಡಿಸಿವೆ. ಸಂಘರ್ಷವನ್ನು ತಕ್ಷಣವೇ ಕಡಿಮೆ ಮಾಡಲುಕರೆ ನೀಡುತ್ತೇವೆ. ನೇರ ಮಾತುಕತೆ ಮೂಲಕ ಭಾರತ ಮತ್ತು ಪಾಕಿಸ್ತಾನ ಶಾಂತಿ ಸ್ಥಾಪಿಸುತ್ತವೆಂದು ಭಾವಿಸುತ್ತೇವೆ. ಇಂಡಿಯಾ-ಪಾಕ್ ಸಂಘರ್ಷದ ಪರಿಸ್ಥಿತಿಯನ್ನು ನಿರಂತರವಾಗಿ ಗಮನಿಸುತ್ತಿದ್ದು, ರಾಜತಾಂತ್ರಿಕ ಪರಿಹಾರಕ್ಕೆ ಸಂಪೂರ್ಣ ಬೆಂಬಲವನ್ನು ನೀಡುತ್ತೇವೆ' ಎಂದು ಜಿ7 ರಾಷ್ಟ್ರಗಳೂ ಹೇಳಿಕೆ ನೀಡಿದೆ. 

ಇದೇ ವೇಳೆ, ಭಾರತ-ಪಾಕಿಸ್ತಾನ ಸಂಘರ್ಷವನ್ನು ತಡೆಯಲು ಬಯಸುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಯುಎಸ್ ಸ್ಟೇಟ್ ಸೆಕ್ರೆಟರಿ ಇಂಡಿಯಾ ಮತ್ತು ಪಾಕಿಸ್ತಾನದ ಜೊತೆ ಸಂಪರ್ಕದಲ್ಲಿದ್ದಾರೆಂದು ವೈಟ್ ಹೌಸ್ ತಿಳಿಸಿದೆ. ಪಾಕಿಸ್ತಾನ ಪ್ರಧಾನಿಯ ಜೊತೆ ಸೌದಿ ವಿದೇಶಾಂಗ ಮಂತ್ರಿ ಮಾತುಕತೆ ನಡೆಸಿದ್ದಾರೆ.

ಭಾರತ ವಿರುದ್ಧ ದಾಳಿ ಆರಂಭಿಸಿದ್ದಾಗಿ ಪಾಕಿಸ್ತಾನ ಒಪ್ಪಿಕೊಂಡಿದೆ. ನಿನ್ನೆ ರಾತ್ರಿ ಪಾಕಿಸ್ತಾನ ಡ್ರೋನ್‌ಗಳ ಮೂಲಕ ದಾಳಿ ನಡೆಸಿತು. ಇಂಡಿಯಾ ಯಶಸ್ವಿಯಾಗಿ ತಡೆದು ಪ್ರತಿದಾಳಿ ನಡೆಸಿತು. ಪಾಕ್ ವಾಯುನೆಲೆಗಳು ಇಂಡಿಯನ್ ವಾಯುಪಡೆಯ ಬಲವನ್ನು ಕಂಡವು. ಇಸ್ಲಾಮಾಬಾದ್, ಕರಾಚಿ ಮತ್ತು ಲಾಹೋರ್ ಸೇರಿ ಎಂಟು ಪಾಕ್ ನಗರಗಳಲ್ಲಿ ಸ್ಫೋಟಗಳು ಸಂಭವಿಸಿದವು. ಪಾಕಿಸ್ತಾನ ಇಂದು ಬೆಳಿಗ್ಗೆಯೂ ದಾಳಿ ಮುಂದುವರಿಸಿದೆ. ಜಮ್ಮು ಮತ್ತು ಶ್ರೀನಗರದಲ್ಲಿ ಸ್ಫೋಟದ ಶಬ್ದಗಳು ಕೇಳಿಬಂದಿವೆ ಎಂದು ವರದಿಯಾಗಿದೆ. ವಿಮಾನ ನಿಲ್ದಾಣದ ಮೇಲೆಯೂ ದಾಳಿ ಪ್ರಯತ್ನ ನಡೆದಿದೆ. ಉತ್ತರ ಕಮಾಂಡ್ ಪ್ರಧಾನ ಕಚೇರಿ ಉಧಮ್‌ಪುರದಲ್ಲಿ ಕ್ಷಿಪಣಿ ದಾಳಿ ನಡೆದಿದೆ. ಅಮೃತಸರದಲ್ಲಿ ಇಂದು ಬೆಳಿಗ್ಗೆ ಡ್ರೋನ್ ದಾಳಿ ನಡೆದಿದೆ. ಜಲಂಧರ್‌ನಲ್ಲಿಯೂ ಅಪಾಯದ ಸೈರನ್‌ಗಳು ಮೊಳಗಿವೆ.

ಭಾರತ-ಪಾಕ್ ಯುದ್ಧ ಹಿನ್ನೆಲೆ ಏನು?: 
ಏಪ್ರಿಲ್ 22, 2025ರಂದು ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಶಿವಮೊಗ್ಗದ ಮಂಜುನಾಥ್ ರಾವ್ ಹಾಗೂ ಬೆಂಗಳೂರಿನ ಭರತ್ ಭೂಷಣ್ ಸೇರಿ 26 ಹಿಂದೂಗಳನ್ನು ಧರ್ಮ ಕೇಳಿ ಬಲಿ ಪಡೆದ ಪಾಕಿಸ್ತಾನಕ್ಕೆ ಆಪರೇಷನ್ ಸಿಂದೂರದ ಮೂಲಕ ಮೇ 7, 2025ರಂದು ಭಾರತ ತಕ್ಕ ಪ್ರತೀಕಾರ ತೋರಲು ಆರಂಭಿಸದೆ. ನಾಗರಿಕರ ಪ್ರಾಣಕ್ಕೆ ಹಾನಿಯಾಗದಂತೆ ಪಾಕ್ ಉಗ್ರರ ಅಡಗು ತಾಣಗಳ ಮೇಲೆ ಭಾರತ ಮೊದಲ ದಿನ ದಾಳಿ ನಡೆಸಿ, 9 ಉಗ್ರ ತಾಣಗಳನ್ನು ನಾಶ ಪಡಿಸಿದ್ದಷ್ಟೇ ಅಲ್ಲ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಹಾಗೂ ಕ.ಸೋಫಿಯಾ ಖುರೇಷಿ ಮೂಲಕ ಭಾರತೀಯ ಮಹಿಳೆಯ ಸಿಂಧೂರ ಕಸಿದ ಪ್ರತೀಕಾರವಾಗಿ ತೆಗೆದುಕೊಂಡ ಕ್ರಮಕ್ಕೆ ಇಡೀ ಜಗತ್ತಿಗೆ ಮಹಿಳೆಯರ ನೇತೃತ್ವದಲ್ಲಿಯೇ ದಾಳಿ ನಡೆಯುವಂತೆ ನೋಡಿಕೊಂಡಿದೆ. ಜಗತ್ತಿಗೆ ಈ ಮಹಿಳಾ ನಾಯಕರಿಂದಲೇ ಪತ್ರಿಕಾ ಗೋಷ್ಠಿ ಮಾಡಿಸಿದ್ದು ದೇಶದ ನಾರಿ ಶಕ್ತಿ ಸಾಮರ್ಥ್ಯವನ್ನು ಸಾರಿ ಸಾರಿ ಹೇಳಿದಂತಾಗಿದೆ. ಅಷ್ಟೇ ಅಲ್ಲ ಹಿಂದೂ ಎನ್ನುವ ಕಾರಣಕ್ಕೆ 26 ಅಮಾಯಕಕನ್ನು ಬಲಿ ಪಡೆದಿದ್ದಕ್ಕೆ ಪ್ರತೀಕಾರವಾಗಿ ಹಿಂದು-ಮುಸ್ಲಿಂ ಜಂಟಿಯಾಗಿಯೇ ನಡೆದ ಕಾರ್ಯಾಚರಣೆ ಬಗ್ಗೆ ಹೇಳಿ, ದೇಶದ ಭದ್ರತಾ ವಿಷಯವಾಗಿ ಬಂದಾಗ ಭಾರತದಲ್ಲಿ ಮಹಿಳೆಯರೊಡಗೂಡಿ ಹಿಂದೂ-ಮುಸ್ಲಿಂ ಎಂದೆಂದಿಗೂ ಒಂದೇ ಎಂದು ಜಗತ್ತಿಗೆ ಸಾರಿ ಹೇಳಿದ ಭಾರತದ ಕ್ರಮಕ್ಕೆ ಶ್ಲಾಘನೆ ವ್ಯಕ್ತವಾಗಿದೆ. 

ಭಾರತ ಅಳವಡಿಸಿಕೊಂಡಿರುವ ರಷ್ಯಾದ ಎಸ್‌-400 ಏರ್‌ ಡಿಫೆನ್ಸ್‌ ಸಿಸ್ಟಮ್ಸ್‌ ಪಾಕಿಸ್ತಾನದ ಪಾಲಿಗೆ ದುಸ್ವಪ್ನವಾಗಿದೆ. ಭಾರತದ 15 ನಗರಗಳ ಮಿಲಿಟರಿ ಮತ್ತು ರೇಡಾರ್‌ ವ್ಯವಸ್ಥೆಗಳನ್ನು ಗುರಿಯಾಗಿರಿಸಿಕೊಂಡು ಪಾಕ್ ಕ್ಷಿಪಣಿ, ಡ್ರೋನ್‌ ದಾಳಿ ನಡೆಸಿದರೂ ಅವುಗಳನ್ನೆಲ್ಲ ಆಗಸದಲ್ಲೇ ಕರಾರುವಕ್ಕಾಗಿ ಹೊಡೆದುರುಳಿಸುವಲ್ಲಿ ಈ ರಕ್ಷಣಾ ವ್ಯವಸ್ಥೆ ಯಶಸ್ವಿಯಾಗಿದೆ.  'ಸುದರ್ಶನ ಚಕ್ರ' ಎಂದೇ ಕರೆಯಲ್ಪಡುವ ಈ ಏರ್‌ ಡಿಫೆನ್ಸ್‌ ಸಿಸ್ಟಮ್‌ ಭಾರತದ ಪಾಲಿನ ರಕ್ಷಾ ಕವಚವಾಗಿದೆ. ವಿಶ್ವದಲ್ಲೇ ಅತ್ಯಾಧುನಿಕ ಎನ್ನಲಾದ ಈ ರಕ್ಷಣಾ ವ್ಯವಸ್ಥೆ 600 ಕಿ.ಮೀ.ದೂರದಿಂದಲೇ ತನ್ನನ್ನ ಬರುವ ಗುರಿಯನ್ನು ಗುರುತಿಸಿ, 400 ಕಿ.ಮೀ.ದ ದೂರದಲ್ಲೇ ಅವುಗಳನ್ನು ಹೊಡೆದುರುಳಿಸಬಲ್ಲದು. ಭಾರತ ಇಂಥ ನಾಲ್ಕು ಎಸ್‌-400 ಡಿಫೆನ್ಸ್‌ ಸಿಸ್ಟಮ್ ಅನ್ನು ಜಮ್ಮು ಮತ್ತು ಕಾಶ್ಮೀರ, ಪಂಜಾಬ್‌, ರಾಜಸ್ಥಾನ ಮತ್ತು ಗುಜರಾತ್‌ನ ರಕ್ಷಣೆಗಾಗಿ ನಿಯೋಜಿಸಿದೆ.

ಭಾರತ-ಫಾಕಿಸ್ತಾನ ಸಂಘರ್ಷದ ಪ್ರತಿ ಕ್ಷಣದ ಮಾಹಿತಿಗಾಗಿ ಸುವರ್ಣ ನ್ಯೂಸ್‌ಗೆ ಟ್ಯೂನ್ ಆಗಿರಿ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇನ್ನೂ 10 ದಿನಗಳ ಕಾಲ ಇಂಡಿಗೋಳು
ಧಾರ್ಮಿಕ ಪ್ರಾರ್ಥನೆಗೆ ಧ್ವನಿವರ್ಧಕ ಕಡ್ಡಾಯವಲ್ಲ : ಹೈಕೋರ್ಟ್‌