* ಪಾಕಿಸ್ತಾನ ಮತ್ತು ಆಷ್ಘಾನಿಸ್ತಾನದ ನಡುವಿನ ವಾಕ್ಸಮರ
* ಕಳೆದೊಂದು ತಿಂಗಳಲ್ಲಿ 10 ಸಾವಿರಕ್ಕೂ ಹೆಚ್ಚು ಜಿಹಾದಿ ಉಗ್ರರು ಪಾಕಿಸ್ತಾನದಿಂದ ದೇಶ ಪ್ರವೇಶ
* ಆಷ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ ಆರೋಪ
ಕಾಬೂಲ್(ಜು.18): ತಾಲಿಬಾನ್ ಉಗ್ರರಿಗೆ ಸಂಬಂಧಿಸಿದಂತೆ ಪಾಕಿಸ್ತಾನ ಮತ್ತು ಆಷ್ಘಾನಿಸ್ತಾನದ ನಡುವಿನ ವಾಕ್ಸಮರ ಮುಂದುವರಿದಿದೆ. ಕಳೆದೊಂದು ತಿಂಗಳಲ್ಲಿ 10 ಸಾವಿರಕ್ಕೂ ಹೆಚ್ಚು ಜಿಹಾದಿ ಉಗ್ರರು ಪಾಕಿಸ್ತಾನದಿಂದ ದೇಶ ಪ್ರವೇಶಿಸಿದ್ದಾರೆ ಎಂದು ಆಷ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ ಆರೋಪಿಸಿದ್ದಾರೆ.
ಪಾಕಿಸ್ತಾನವು ತನ್ನ ಅಧಿಕಾರ ಮತ್ತು ಪ್ರಭಾವವನ್ನು ಬಳಸಿಕೊಂಡು ತಾಲಿಬಾನ್ ಸಂಘಟನೆಯನ್ನು ಮನವೊಲಿಸುವ ಯತ್ನವನ್ನು ಗಂಭೀರವಾಗಿ ಮಾಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಾಷ್ಕೆಂಟ್‌ನಲ್ಲಿ ನಡೆದ ಕೇಂದ್ರೀಯ ಮತ್ತು ದಕ್ಷಿಣ ಏಷಿಯಾ ಸಂಪರ್ಕ ಸಮಾವೇಶದಲ್ಲಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರ ಸಮ್ಮುಖದಲ್ಲೇ ಅಶ್ರಫ್ ಘಾನಿ ಈ ಮಾತುಗಳನ್ನಾಡಿದ್ದಾರೆ.