ಉತ್ತರ ಪ್ರದೇಶ ಮತ್ತೆ ಬಿಜೆಪಿ ತೆಕ್ಕೆಗೆ: ಕೇಸರಿ ಪಾಳಯಕ್ಕೆ ಸಮೀಕ್ಷೆ ಸಿಹಿ!

By Suvarna NewsFirst Published Jul 18, 2021, 8:51 AM IST
Highlights

* ಉತ್ತರ ಪ್ರದೇಶ ಮತ್ತೆ ಬಿಜೆಪಿಗೆ

* ಬಿಜೆಪಿ ಪರ ಶೇ.43 ಮತದಾರರ ಒಲವು

* ಎಸ್‌ಪಿ ಪರ ಶೇ.29, ಬಿಎಸ್ಪಿ ಪರ ಶೇ.10

* ಕಾಂಗ್ರೆಸ್‌ಗೆ ಕೇವಲ ಶೇ.8 ಜನರ ಮತ

* ಟೈಮ್ಸ್‌ ನೌ ಸುದ್ದಿವಾಹಿನಿ ಸಮೀಕ್ಷೆ

ನವದೆಹಲಿ(ಜು.18): ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶದಲ್ಲಿ ಜನರು ಈಗಲೂ ಬಿಜೆಪಿಯ ಮೇಲೆಯೇ ಹೆಚ್ಚು ಭರವಸೆ ಇಟ್ಟಿದ್ದಾರೆ. ಕೇಸರಿ ಪಕ್ಷದ ಪರ ಹೆಚ್ಚು ಒಲವು ವ್ಯಕ್ತಪಡಿಸಿದ್ದಾರೆ ಎಂಬ ಸಂಗತಿ ಟೈಮ್ಸ್‌ ನೌ- ಸಿ ವೋಟ​ರ್‍ಸ್ ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿದೆ.

ಸಮೀಕ್ಷೆಯ ಪ್ರಕಾರ ಮುಂಬರುವ ಚುನಾವಣೆಯಲ್ಲಿ ಶೇ.43.1ರಷ್ಟುಮಂದಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಸರ್ಕಾರವನ್ನು ಬೆಂಬಲಿಸುವ ಸಾಧ್ಯತೆ ಇದೆ. ಅದೇ ರೀತಿ ಶೇ.29.6ರಷ್ಟುಮಂದಿ ಸಮಾಜವಾದಿ ಪಕ್ಷವನ್ನು ಬೆಂಬಲಿಸಬಹುದು. ಬಿಎಸ್‌ಪಿ ಪರ ಶೇ.10.1ರಷ್ಟುಮಂದಿ ಹಾಗೂ ಕಾಂಗ್ರೆಸ್‌ ಪಕ್ಷದ ಪರ ಶೇ. 8.1ರಷ್ಟುಮಂದಿ ಒಲವು ಹೊಂದಿದ್ದಾರೆ ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ.

ಯೋಗಿ ಬಗ್ಗೆ ಶೇ.31 ಜನರ ತೃಪ್ತಿ:

ಇದೇ ವೇಳೆ ಯೋಗಿ ಸರ್ಕಾರದ ಸಾಧನೆಯ ಬಗ್ಗೆ 31.7ರಷ್ಟುಮಂದಿ ತೃಪ್ತಿ ವ್ಯಕ್ತಪಡಿಸಿದರೆ, ಶೇ.23.4ರಷ್ಟುಮಂದಿ ಸರ್ಕಾರದ ಸಾಧನೆ ಸಾಧಾರಣವಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು ಶೇ.39.5ರಷ್ಟುಮಂದಿ ಸರ್ಕಾರದ ಸಾಧನೆ ಕಳಪೆ ಆಗಿದೆ ಎಂದು ಹೇಳಿದ್ದಾರೆ.

2022ರ ಫೆಬ್ರವರಿ ಹಾಗೂ ಮಾಚ್‌ರ್‍ನಲ್ಲಿ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ನಡೆಯಲಿದೆ.

click me!