ರೈತ ಪ್ರತಿಭಟನೆ ನಡುವೆ ಸೇರಿಕೊಂಡ ಖಲಿಸ್ತಾನಕ್ಕೆ ಪಾಕ್ ಬಹಿರಂಗ ಬೆಂಬಲ; ವೈರಲ್ ವಿಡಿಯೋ!

Published : Feb 06, 2021, 06:04 PM IST
ರೈತ ಪ್ರತಿಭಟನೆ ನಡುವೆ ಸೇರಿಕೊಂಡ ಖಲಿಸ್ತಾನಕ್ಕೆ ಪಾಕ್ ಬಹಿರಂಗ ಬೆಂಬಲ; ವೈರಲ್ ವಿಡಿಯೋ!

ಸಾರಾಂಶ

ರೈತ ಪ್ರತಿಭಟನೆ ನಡುವೆ ಸೇರಿಕೊಂಡು ಗಣರಾಜ್ಯೋತ್ಸವ ದಿನ ಭಾರತದಲ್ಲಿ ದಂಗೆ ಎಬ್ಬಿಸಿದ ಖಲಿಸ್ತಾನ ಇದೀಗ ಹೋರಾಟ ತೀವ್ರಗೊಳಿಸಿದೆ. ವಿದೇಶಿ ಸೆಲೆಬ್ರೆಟಿಗಳ ಟ್ವೀಟ್ ಹಿಂದೆ ಇದೇ ಖಲಿಸ್ತಾನದ ಪಾತ್ರ ಖಚಿತವಾಗುತ್ತಿದೆ. ಇದರ ನಡುವೆ ಖಲಿಸ್ತಾನದ ಹೋರಾಟಕ್ಕೆ ಪಾಕಿಸ್ತಾನ ಬಹಿರಂಗವಾಗಿ ಬೆಂಬಲ ಸೂಚಿಸಿದೆ. ಭಾರತವನ್ನು ಟುಕ್ಡೆ ಟುಕ್ಡೆ ಮಾಡಲು ಕರೆ ಕೊಟ್ಟ ವಿಡಿಯೋವೊಂದು ವೈರಲ್ ಆಗಿದೆ.

ನವದೆಹಲಿ(ಫೆ.06): ಶಾಂತಿಯುತ ರೈತರ ಹೋರಾಟಡ ನಡುವೆ ಸೇರಿಕೊಂಡ ಖಲಿಸ್ತಾನ ಸೇರಿದಂತೆ ಕೆಲ ಉಗ್ರಗಾಮಿ ಗುಂಪುಗಳು ಇದೀಗ ಭಾರತವನ್ನೇ ಒಡೆಯಲು ಯತ್ನಿಸುತ್ತಿದೆ. ದಂಗೆ ಎಬ್ಬಿಸುವ ಪ್ರಯತ್ನ ಮಾಡುತ್ತಿದೆ. ರೈತ ಪ್ರತಿಭಟನೆಗೆ ಬೆಂಬಲ ಸೂಚಿಸಿರುವ ನಿಷೇಧಿತ ಸಿಖ್ ಉಗ್ರಗಾಮಿ ಸಂಘಟನೆಗೆ ಪಾಕಿಸ್ತಾನ ಬಹಿರಂಗ ಬೆಂಬಲ ಸೂಚಿಸಿದೆ. ಈ ವಿಡಿಯೋ ವೈರಲ್ ಆಗಿದೆ.

ರೈತರ ದಿಲ್ಲಿ ಹೋರಾಟದ ಹಿಂದೆ ಖಲಿಸ್ತಾನಿ ಪಾತ್ರ!...

ಈ ವಿಡಿಯೋ ಪಾಕಿಸ್ತಾನ ಖೈಬರ್ ಪಕ್ತುಂಕ್ವ ಪ್ರಾಂತ್ಯದಲ್ಲಿ ನಡೆದ ವಿಡಿಯೋವೊಂದು ಭಾರಿ ಸದ್ದು ಮಾಡುತ್ತಿದೆ.  ಪಾಕಿಸ್ತಾನದ ಯುವ ಸಂಸತ್ ಅಧ್ಯಕ್ಷ ಶಾಹ್ವೀರ್ ಸಿಯಾಲ್ವಿ ಭಾರತವನ್ನು ತುಂಡು ತುಂಡರಿಸಲು ಘೋಷಣೆ ನೀಡುತ್ತಿರುವ ದೃಶ್ಯವಿದೆ.  ಮೋದಿಗೆ ಕೇಳುವ ರೀತಿ ಹೇಳುತ್ತಿದ್ದೇನೆ ಪಾಕಿಸ್ತಾನ ಬಹಿರಂಗವಾಗಿ ಖಲಿಸ್ತಾನ ಹೋರಾಟಕ್ಕೆ ಬೆಂಬಲ ಸೂಚಿಸುತ್ತಿದೆ ಎಂದು ಶಾಹ್ವೀರ್ ಹೇಳಿದ್ದಾನೆ.

 

ಇಷ್ಟಕ್ಕೆ ಈತನ ಭಾಷನ ಮುಗಿದಿಲ್ಲ.ಹಿಂದೂಸ್ಥಾನ ತುಂಡು ತುಂಡಾಗಿ ಹೋಗಲಿದೆ. ಕಾಶ್ಮೀರ ಸ್ವತಂತ್ರವಾಗಲಿದೆ. ಹೈದರಾಬಾದ್ ಸ್ವತಂತ್ರವಾಗಲಿದೆ. ಜುನಘಡ ಸ್ವತಂತ್ರವಾಗಲಿದೆ. ಇದನ್ನು ನನಪಿಟ್ಟುಕೊಳ್ಳಿ ಖಲ್ಸಾ ಖಲಿಸ್ತಾನಕ್ಕೆ, ಕಾಶ್ಮೀರ ಪಾಕಿಸ್ತಾನಕ್ಕೆ. ಖಲಿಸ್ತಾನ ಹಾಗೂ ಪಾಕಿಸ್ತಾನ ಇಲ್ಲಿಂದ ಮೋದಿಗೆ ಎಚ್ಚರಿಕೆ ನೀಡುತ್ತಿದೆ ಎಂದು ಘಂಟಾಘೋಷವಾಗಿ ಹೇಳಿದ್ದಾನೆ.

ಪಾಕಿಸ್ತಾನದ ಶಾಹ್ವೀರ್ ಜೊತೆ ಖಲಿಸ್ತಾನ ಸಂಘಟನೆ ಸಿಖ್ ನಾಯಕ ಎಲ್ಲದಕ್ಕೂ ಜೈ ಎಂದಿದ್ದಾನೆ. ಭಾರತ ತುಂಡರಿಸುವ ಘೋಷಣೆ ಸೇರಿದಂತೆ ಎಲ್ಲದ್ದಕ್ಕೂ ಚಪ್ಪಾಳೆ ಹೊಡೆದಿದ್ದಾನೆ. ಇದೀಗ ಖಲಿಸ್ತಾನ ರೈತ ಹೋರಾಟದ ನಡುವೆ ಸೇರಿಕೊಂಡು ವಿಶ್ವವನ್ನೇ ಭಾರತದ ವಿರುದ್ಧ ಹೋರಾಟಕ್ಕೆ ಸಜ್ಜುಗೊಳಿಸುತ್ತಿದೆ. ಇದರ ಒಂದು ಭಾಗವೇ ವಿದೇಶಿ ಸೆಲೆಬ್ರೆಟಿಗಳ ಟ್ವಿಟರ್ ವಾರ್ ಅನ್ನೋದು ಈಗಾಗಲೇ ಬಹಿರಂಗವಾಗಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರಕ್ಷಿಸಲು ಹೋದವನನ್ನೇ ಕೆಳಗೆ ತಳ್ಳಿದ ಮಾನಸಿಕ ಅಸ್ವಸ್ಥ: ಜೀವ ಉಳಿಸಲು ಹೋಗಿ ಕೈಕಾಲು ಮುರಿದುಕೊಂಡ ಯುವಕ
ಉದ್ಯಮಿಗೆ ಲವ್‌ ಟ್ರ್ಯಾಪ್‌, ವೈರಲ್‌ ಆದ ಡಿಎಸ್‌ಪಿ ಕಲ್ಪನಾ ವರ್ಮಾ ಚಾಟ್‌..!