
ಶ್ರೀನಗರ(ಆ.07): ಜಮ್ಮು ಮತ್ತು ಕಾಶ್ಮೀರ ಗಡಿಯಲ್ಲಿ ಭಾರತೀಯ ಭದ್ರತಾ ಪಡೆಗಳು ಪಹರೆ ಬಿಗಿ ಮಾಡಿರುವ ಹಿನ್ನೆಲೆಯಲ್ಲಿ, ಪಾಕ್‌ನಿಂದ ಡ್ರೋನ್‌ಗಳ ಮೂಲಕ ಭಾರತಕ್ಕೆ ಶಸ್ತ್ರಾಸ್ತ್ರ ರವಾನಿಸಲಾಗುತ್ತಿದೆ ಎಂಬ ವಿಷಯ ಬೆಳಕಿಗೆ ಬಂದಿದೆ. ರಾಜ್ಯದ ಪೊಲೀಸ್ ಮಹಾನಿರ್ದೇಶಕ ದಿಲ್ಬಾಗ್ ಸಿಂಗ್ ಈ ಮಾಹಿತಿ ನೀಡಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ 200ಕ್ಕೂ ಹೆಚ್ಚು ಉಗ್ರರು ಈಗಲೂ ಸಕ್ರಿಯರಾಗಿದ್ದಾರೆ. ಈ ವರ್ಷ ಕೇವಲ 26 ಮಂದಿ ಉಗ್ರರು ಗಡಿ ನುಸುಳಿ ಬಂದಿರಬಹುದು. ಆದರೆ ಇಲ್ಲಿಯೇ ಇದ್ದು ದೇಶದ್ರೋಹ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವವರು ಅನೇಕರಿದ್ದಾರೆ. ಇಂಥವರಿಗೆ ಪಾಕಿಸ್ತಾನ ಡ್ರೋನ್‌ಗಳ ಮೂಲಕ ಶಸ್ತ್ರಾಸ್ತ್ರಗಳನ್ನು ಪೂರೈಸುವ ಪ್ರಯತ್ನ ನಡೆಸಿದೆ. ಇತ್ತೀಚೆಗಿನ ದಿನಗಳಲ್ಲಿ ಇಂತಹ ಅನೇಕ ಪ್ರಕರಣಗಳು ಪತ್ತೆಯಾಗಿವೆ ಎಂದು ದಿಲ್ಬಾಗ್ ಸಿಂಗ್ ಹೇಳಿದ್ದಾರೆ.
ತರ್ಕಾರಿ, ಹಣ್ಣುಗಳನ್ನು ಸಾಗಿಸಲು ಇಂದಿನಿಂದ ಕಿಸಾನ್ ರೈಲು ಆರಂಭ
ನವದೆಹಲಿ: ತರ್ಕಾರಿ, ಹಣ್ಣು-ಹಂಪಲು ಮುಂತಾದ ಬೇಗನೇ ಹಾಳಾಗುವ ಪದಾರ್ಥಗಳನ್ನು ಸುಲಭವಾಗಿ ಸಾಗಿಸಲು ಕಳೆದ ಬಜೆಟ್‌ನಲ್ಲಿ ಘೋಷಿಸಲಾಗಿದ್ದ ‘ಕಿಸಾನ್ ರೈಲು’ ಸೇವೆಗೆ ಶುಕ್ರವಾರ ಚಾಲನೆ ಸಿಗಲಿದೆ.
ಚೀನಾ ಮೇಲೆ ಹದ್ದಿನ ಕಣ್ಣಿಡಲು 6 ಉಪಗ್ರಹ ಬೇಕೆಂದ ಭಾರತೀಯ ಸೇನೆ
ಮೊದಲ ರೈಲು ಮಹಾರಾಷ್ಟ್ರದ ದೆವ್ಲಾಯಿಯಿಂದ ಹೊರಟು ಬಿಹಾರದ ದನಾಪುರ್‌ಗೆ ತಲುಪಲಿದೆ. ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ರೈಲು ಮೊದಲ ಪ್ರಯಾಣ ಆರಂಭಿಸಲಿದ್ದು, 31.45 ಗಂಟೆಗಳಲ್ಲಿ 1,519 ಕಿ.ಮಿ ಚಲಿಸಿ ಶನಿವಾರ ದನಾಪುರ್ ತಲುಪಲಿದೆ ಎಂದು ರೈಲ್ವೇ ಸಚಿವಾಲಯ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಬೇಗನೇ ಕೊಳೆಯುವ ವಸ್ತುಗಳನ್ನು ದೇಶದ ಇತೆರೆಡೆ ಸುಲಭವಾಗಿ ಸಾಗಸಲು ಶೀತಲ ಬೋಗಿಗಳು ಇರುವ ಕಿಸಾನ್ ರೈಲುಗಳನ್ನು ಆರಂಭಿಸಲಾಗುವುದು ಎಂದು ಫೆಬ್ರವರಿಯಲ್ಲಿ ಮಂಡಿಸಿದ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ