ಭಾರತದೊಂದಿಗಿನ ವಿಮಾನಯಾನ ಮತ್ತು ಸರಕು ಸಾಗಣೆ ರದ್ದು ಪಡಿಸಿದ ಪಾಕ್!

Published : Apr 24, 2025, 07:08 PM ISTUpdated : Apr 24, 2025, 07:25 PM IST
ಭಾರತದೊಂದಿಗಿನ ವಿಮಾನಯಾನ ಮತ್ತು ಸರಕು ಸಾಗಣೆ ರದ್ದು ಪಡಿಸಿದ ಪಾಕ್!

ಸಾರಾಂಶ

ಪಹಲ್ಗಾಮ್ ದಾಳಿಯ ಹಿನ್ನೆಲೆಯಲ್ಲಿ ಭಾರತ-ಪಾಕ್ ಸಂಬಂಧ ಹಳಸಿದೆ. ಪಾಕಿಸ್ತಾನ ಭಾರತೀಯ ವಿಮಾನಗಳಿಗೆ ವಾಯುಮಾರ್ಗ, ವ್ಯಾಪಾರ ಸ್ಥಗಿತ, ಭಾರತೀಯ ಅಧಿಕಾರಿಗಳನ್ನು ಹೊರಹಾಕುವಿಕೆ, ವೀಸಾ ರದ್ದತಿ, ವಾಘಾ ಗಡಿ ಮುಚ್ಚುವಿಕೆ ಸೇರಿ ಹಲವು ಕ್ರಮ ಕೈಗೊಂಡಿದೆ. ಸಿಂಧೂ ನದಿ ಒಪ್ಪಂದ ರದ್ದತಿಗೆ ತೀವ್ರ ವಿರೋಧ ವ್ಯಕ್ತಪಡಿಸಿದೆ.

ಭಾನುವಾರ ಕಾಶ್ಮೀರದ ಜನಪ್ರಿಯ ಪ್ರವಾಸಿ ತಾಣ ಪಹಲ್ಗಾಮ್ ನ  ಉಗ್ರರು 26 ನಾಗರಿಕರನ್ನು ಕೊಂದು ಹಾಕಿದ ನಂತರ ಎರಡು ದಶಕಗಳಲ್ಲಿ ನಾಗರಿಕರ ಮೇಲೆ ನಡೆದ ಅತ್ಯಂತ ಭಯಾನಕ ದಾಳಿಯ ಹಿನ್ನೆಲೆಯಲ್ಲಿ, ಬುಧವಾರ ಭಾರತವು ಪಾಕಿಸ್ತಾನದೊಂದಿಗೆ ತನ್ನ ಸಂಬಂಧಗಳನ್ನು ಕುಗ್ಗಿಸುವ ಹಲವು ಕ್ರಮಗಳನ್ನು ಘೋಷಿಸಿ, ಹಲವು ಒಪ್ಪಂದಗಳನ್ನು ರದ್ದು ಮಾಡಿದೆ. ಪರಿಸ್ಥತಿಯನ್ನು ಗಂಭೀರತೆಯನ್ನು ಅರಿತ ಪಾಕಿಸ್ತಾನ ಭಾರತೀಯ ಸ್ವಾಮ್ಯದ ಮತ್ತು ಭಾರತದಿಂದ ಕಾರ್ಯನಿರ್ವಹಿಸುವ ಎಲ್ಲಾ ವಿಮಾನಯಾನ ಸಂಸ್ಥೆಗಳಿಗೆ ತಕ್ಷಣ ಮುಚ್ಚುವುದಾಗಿ ಘೋಷಿಸಿದೆ, ಜೊತೆಗೆ ಭಾರತ ಮತ್ತು ಇತರ ದೇಶಗಳಿಂದ  ಪಾಕಿಸ್ತಾನ ಮೂಲಕ ಸಾಗುವ ಸರಕುಗಳು ಸೇರಿದಂತೆ ಎಲ್ಲಾ ವ್ಯಾಪಾರವನ್ನು ಸ್ಥಗಿತಗೊಳಿಸಿದೆ ಮತ್ತು ಇಂಡಸ್ ನೀರಿನ ಒಪ್ಪಂದವನ್ನು ಸ್ಥಗಿತಗೊಳಿಸುವ ಭಾರತದ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದೆ.

ಪಹಲ್ಗಾಮ್‌ ಟೆರರಿಸ್ಟ್ ಅಟ್ಯಾಕ್: ಪಾಕಿಸ್ತಾನದ ಕುತಂತ್ರ ಬಯಲು ಮಾಡಿದ ಮಾಜಿ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ!

ಪಾಕಿಸ್ತಾನಕ್ಕೆ ಹಂಚಿಕೆ ಮಾಡಿದ ನೀರಿನ ಹರಿವನ್ನು ತಡೆಹಿಡಿಯಲು ಅಥವಾ ಮರುನಿರ್ದೇಶಿಸಲು ಯಾವುದೇ ಪ್ರಯತ್ನವನ್ನಾದರೂ "ಯುದ್ಧದ ಕೃತ್ಯ"ವೆಂದು ಪರಿಗಣಿಸಲಾಗುವುದು ಎಂದು ಪಾಕಿಸ್ತಾನ ಎಚ್ಚರಿಕೆ ನೀಡಿದೆ, ಪಾಕಿಸ್ತಾನವು ತನ್ನ ಹೈಕಮಿಷನ್‌ನಲ್ಲಿರುವ ಭಾರತೀಯ ಮಿಲಿಟರಿ ಸಲಹೆಗಾರರನ್ನು ಏಪ್ರಿಲ್ 30 ರೊಳಗೆ ಹೊರಹೋಗುವಂತೆ ನಿರ್ದೇಶಿಸಿದೆ ಎಂದು ಪಿಟಿಐ ವರದಿ ಮಾಡಿದೆ.

ಪಹಲ್ಗಾಮ್ ದಾಳಿ: ಅಟ್ಟಾರಿ ಗಡಿ ಬಂದ್ ಮಾಡಿ ಪಾಕ್‌ ಸೊಂಟ ಮುರಿದ ಭಾರತ

  • ಭಾರತದ ವಿರುದ್ಧ ತೀವ್ರ ನಿಲುವು ತೆಗೆದುಕೊಂಡಿರುವ ಪಾಕಿಸ್ತಾನವು, ಈ ಕೆಳಕಂಡ ಪ್ರಮುಖ ಕ್ರಮಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಘೋಷಿಸಿದೆ: ವಾಘಾ ಗಡಿಯನ್ನು ಮುಚ್ಚಿ ಭಾರತದಿಂದ ಬರುವ ಎಲ್ಲಾ ಸಾರಿಗೆಯನ್ನು ಸ್ಥಗಿತಗೊಳಿಸಲಾಗಿದೆ.
  • ಮಾನ್ಯತೆಯೊಂದಿಗೆ ವಾಘಾ ಮೂಲಕ ಪ್ರವೇಶಿಸಿದ ಭಾರತೀಯರು ಏಪ್ರಿಲ್ 30ರ ಒಳಗೆ ಹಿಂತಿರುಗಬೇಕೆಂದು ಸೂಚಿಸಿದೆ.
  • ಶಿಮ್ಲಾ ಒಪ್ಪಂದ ಸೇರಿದಂತೆ ಎಲ್ಲಾ ದ್ವಿಪಕ್ಷೀಯ ಒಪ್ಪಂದಗಳನ್ನು ಸ್ಥಗಿತಗೊಳಿಸಲಾಗಿದೆ.
  • ಸಿಖ್ ಯಾತ್ರಿಕರನ್ನು ಹೊರತುಪಡಿಸಿ, ಸಾರ್ಕ್ ವೀಸಾ ವಿನಾಯಿತಿ ಯೋಜನೆಯಡಿಯಲ್ಲಿ ನೀಡಲಾಗಿದ್ದ ಎಲ್ಲಾ ಭಾರತೀಯ ವೀಸಾಗಳನ್ನು ರದ್ದುಗೊಳಿಸಲಾಗಿದೆ ಮತ್ತು ಪಾಕಿಸ್ತಾನದಲ್ಲಿರುವ ಭಾರತೀಯರು 48 ಗಂಟೆಗಳೊಳಗೆ ಹೊರಹೋಗಬೇಕೆಂದು ಸೂಚಿಸಲಾಗಿದೆ.
  • ಭಾರತೀಯ ಮಾಲೀಕತ್ವದ ಅಥವಾ ಭಾರತದಿಂದ ನಿರ್ವಹಿಸಲ್ಪಡುವ ಎಲ್ಲಾ ವಿಮಾನಯಾನ ಸಂಸ್ಥೆಗಳಿಗೆ ಪಾಕಿಸ್ತಾನದ ವಾಯುಪ್ರದೇಶವನ್ನು ಮುಚ್ಚಲಾಗಿದೆ.
  • ಮೂರನೇ ದೇಶಗಳ ಮಾರ್ಗದಲ್ಲೂ ಸೇರಿದಂತೆ ಭಾರತದೊಂದಿಗೆ ಎಲ್ಲಾ ವ್ಯಾಪಾರ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.
  • ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ರಕ್ಷಣಾ, ನೌಕಾ ಮತ್ತು ವಾಯು ಸಲಹೆಗಾರರನ್ನು 'ಪರ್ಸನಾ ನಾನ್ ಗ್ರಾಟಾ' ಎಂದು ಘೋಷಿಸಿ ಏಪ್ರಿಲ್ 30ರೊಳಗೆ ದೇಶ ತೊರೆಯಬೇಕೆಂದು ಆದೇಶಿಸಲಾಗಿದೆ.
  • ಜೊತೆಗೆ, ಈ ತಿಂಗಳ ಅಂತ್ಯದ ವೇಳೆಗೆ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್‌ನ ಸಿಬ್ಬಂದಿ ಸಂಖ್ಯೆಯನ್ನು 30ಕ್ಕೆ ಇಳಿಸಲು ನಿರ್ಧರಿಸಲಾಗಿದೆ.
  • ಶಿಮ್ಲಾ ಒಪ್ಪಂದವನ್ನು ರದ್ದು ಮಾಡಲಾಗಿದೆ.ಶಿಮ್ಲಾ ಒಪ್ಪಂದ ರದ್ದು ಮಾಡಿದ ಪಾಕ್‌, 53 ವರ್ಷದ ಹಿಂದಿನ ಒಪ್ಪಂದದ ಬಗ್ಗೆ ಇಲ್ಲಿದೆ ಮಾಹಿತಿ..

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಂದೇ.. ಚರ್ಚೆಯಿಂದ ಹೊಸ ಇತಿಹಾಸ ಸೃಷ್ಟಿಗೆ ಮೋದಿ ಯತ್ನ: ಕಾಂಗ್ರೆಸ್‌
ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ