ಆಯೋಧ್ಯೆಯಲ್ಲಿನ ಭವ್ಯ ರಾಮ ಮಂದಿರ ಹಾಗೂ ಶ್ರೀರಾಮನ ಪ್ರಾಣಪ್ರತಿಷ್ಠೆಯಿಂದ ಪಾಕಿಸ್ತಾನ ಉರಿದು ಬಿದ್ದಿದೆ. ಭಾರತದಲ್ಲಿರುವ ತನ್ನ ಮುಸ್ಲಿಮ ಸಹೋದರ ಸಹೋದರಿಯರ ಮೇಲೆ ನಿರಂತರ ದಾಳಿಗಳಾಗುತ್ತಿದೆ. ಭಾರತದಲ್ಲಿರುವ ಮುಸ್ಲಿಂ ಪಾರಂಪರಿಕ ತಾಣಗಳನ್ನು ರಕ್ಷಿಸಲು ವಿಶ್ವಸಂಸ್ಥೆ ಮಧ್ಯಪ್ರವೇಶಿಸಬೇಕು ಎಂದು ಪಾಕಿಸ್ತಾನ ಮನವಿ ಮಾಡಿದೆ.
ಇಸ್ಲಾಮಾಬಾದ್(ಜ.27) ಆಯೋಧ್ಯೆ ರಾಮ ಮಂದಿರ ನಿರ್ಮಾಣಗೊಂಡು ಬಾಲ ರಾಮನ ಪ್ರಾಣಪ್ರತಿಷ್ಠೆಯೂ ನಡೆದಿದೆ. ಪ್ರಾಣಪ್ರತಿಷ್ಠೆಯನ್ನು ದೇಶ ವಿದೇಶಗಳಲ್ಲಿ ದೀಪಾವಳಿ ಹಬ್ಬದಂತೆ ಆಚರಿಸಲಾಗಿದೆ. ಭಾರತೀಯರ ಸಂತಸ ಇಮ್ಮಡಿಗೊಂಡಿದೆ. ಇದೀಗ ಪ್ರತಿ ದಿನ ಲಕ್ಷಾಂತರ ಭಕ್ತರು ಶ್ರೀರಾಮ ಮಂದಿರ ದರ್ಶನ ಮಾಡುತ್ತಿದ್ದಾರೆ. ಇದು ಪಾಕಿಸ್ತಾನಕ್ಕೆ ನುಂಗಲಾರದ ತುತ್ತಾಗಿ ಪರಿಣಿಸಿದೆ. ಭಾರತದಲ್ಲಿನ ಮುಸ್ಲಿಂ ಪಾರಂಪರಿಕ ತಾಣಗಳನ್ನು ಧ್ವಂಸ ಮಾಡಿ ಮಂದಿರ ನಿರ್ಮಿಸುವ ಪ್ರಯತ್ನನ್ನು ಭಾರತ ನಿರಂತರವಾಗಿ ಮಾಡುತ್ತಿದೆ. ಇದರಿಂದ ಭಾರತದ ಮುಸ್ಲಿಮ್ ಸಮುದಾಯದ ಮೇಲೆ ದೌರ್ಜನ್ಯ ಎಸೆಗಲಾಗುತ್ತಿದೆ. ಭಾರತದ ಈ ನಿರ್ಧಾರ ಸಾಮಾಜಿಕ, ರಾಜಕೀಯ ಹಾಗೂ ಸೌಹಾರ್ಧತೆಗೂ ಧಕ್ಕೆ ತರುತ್ತಿದೆ. ಹೀಗಾಗಿ ವಿಶ್ವಸಂಸ್ಥೆ ಮಧ್ಯಪ್ರವೇಶಿಸಬೇಕು ಎಂದು ಪಾಕಿಸ್ತಾನ ಪತ್ರ ಬರೆದಿದೆ.
ತನ್ನ ದೇಶ ಬಡತನದಿಂದ ಸಾಯುತ್ತಿದೆ. ತನ್ನ ದೇಶದಲ್ಲಿನ ಪರಿಸ್ಥಿತಿ ಸುಧಾರಿಸುವ ಪ್ರಯತ್ನ ಬಿಟ್ಟು, ಭಾರತದ ಪಾಠ ಹೇಳಲು ಪಾಕಿಸ್ತಾನ ಸದಾ ಮುಂಚೂಣಿಯಲ್ಲಿರುತ್ತದೆ. ಇದೀಗ ರಾಮ ಮಂದಿರ ನಿರ್ಮಾಣ ಹಾಗೂ ಪ್ರತಿಷ್ಠಾಪನೆ ಪಾಕಿಸ್ತಾನಕ್ಕೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ವಿಶ್ವಸಂಸ್ಥೆಯಲ್ಲಿರುವ ಪಾಕಿಸ್ತಾನ ಪ್ರತಿನಿದಿ ಮುನೀರ್ ಅಕ್ರಮ್ ಅಧಿಕೃತ ಪತ್ರವನ್ನು ವಿಶ್ವಸಂಸ್ಥೆಗೆ ನೀಡಿದ್ದಾರೆ.
undefined
ರಾಮ ಸ್ಮರಣೆ ವೇಳೆ ಅಲ್ಲಾಹು ಅಕ್ಬರ್' ಎಂದು ಘೋಷಣೆ ಕೂಗಿದ ಮಹಿಳೆ
ಭಾರತದ ಆಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಹಾಗೂ ಪ್ರಾಣಪ್ರತಿಷ್ಠೆಯನ್ನು ಪಾಕಿಸ್ತಾನ ತೀವ್ರವಾಗಿ ಖಂಡಿಸುತ್ತಿದೆ. ಈ ರಾಮ ಮಂದಿರವನ್ನು ಬಾಬ್ರಿ ಮಸೀದಿಯನ್ನು ಧ್ವಂಸಗೊಳಿಸಿ, ಅದೇ ಜಾಗದಲ್ಲಿ ಕಟ್ಟಲಾಗಿದೆ. ಭಾರತದ ಈ ನಡೆ ಭಾರತೀಯ ಮುಸ್ಲಿಮರ ಸಾಮಾಜಿಕ, ಆರ್ಥಿಕ, ರಾಜಕೀಯ ಹಾಗೂ ಸೌಹಾರ್ಧ ಸಾಮರಸ್ಯಕ್ಕೆ ಅಡ್ಡಿಪಡಿಸುತ್ತಿದೆ. ಶಾಂತಿಗೆ ಭಂಗ ತರುವ ಗಂಭೀರ ಅಪಾಯವನ್ನು ಸೃಷ್ಟಿಸಲಿದೆ. ಹೀಗಾಗಿ ವಿಶ್ವಸಂಸ್ಥೆ ತುರ್ತು ಮಧ್ಯಪ್ರವೇಶ ಮಾಡಿ ಇಸ್ಲಾಮಿಕ್ ಪಾರಂಪರಿಕ ತಾಣಗಳನ್ನು ರಕ್ಷಿಸುವ ಕೆಲಸ ಮಾಡಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದೆ.
ಈ ಪತ್ರದ ಮೂಲಕ ಪಾಕಿಸ್ತಾನ ಮಥುರಾ ಹಾಗೂ ಗ್ಯಾನವಾಪಿ ಮಸೀದಿ ಆತಂಕವನ್ನು ವ್ಯಕ್ತಪಡಿಸಿದೆ. ಭಾರತದಲ್ಲಿರುವ ಮುಸ್ಲಿಂ ಪಾರಂಪರಿತ ತಾಣಗಳು ನಶಿಸಿ ಹೋಗುವ ಪರಿಸ್ಥಿತಿ ಎದುರಾಗಿದೆ. ಭಾರತ ಉಭಯ ದೇಶಗಳ ನಡುವಿನ ಪರಿಸ್ಥಿತಿ ಮಾತ್ರವಲ್ಲ, ಮುಸ್ಲಿಮ್ ಸಮುದಾಯಕ ಆಕ್ರೋಶವನ್ನು ಹೆಚ್ಚಿಸುತ್ತಿದೆ ಎಂದು ಪತ್ರದಲ್ಲಿ ಹೇಳಿದೆ. ಇದೇ ವೇಳೆ ರಾಮ ಮಂದಿರದ ಪ್ರಾಣಪ್ರತಿಷ್ಠೆಯಲ್ಲಿ ಭಾರತದ ಮುಸ್ಲಿಮರು ಪಾಲ್ಗೊಂಡಿರುವುದನ್ನು ಪಾಕಿಸ್ತಾನ ಖಂಡಿಸಿದೆ.
ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಸಂಭ್ರಮದ ನಡುವೆ ಅಪ್ರಾಪ್ತ ಮುಸ್ಲಿಂ ಯುವಕನಿಂದ ಉದ್ರೇಕಕಾರಿ ಸಂದೇಶ!
ಸತತ 500 ವರ್ಷಗಳ ಹೋರಾಟದ ಬಳಿಕ ಆಯೋಧ್ಯೆಯಲ್ಲಿ ಶ್ರೀರಾಮ ಮಂದಿರ ತಲೆ ಎತ್ತಿದೆ. ಬಾಬರ್‌ನಿಂದ ಧ್ವಂಸಗೊಂಡ ಮಂದಿರ ಮರು ನಿರ್ಮಾಣಕ್ಕಾಗಿ ಕೋಟ್ಯಾಂತರ ಹಿಂದುಗಳು, ಸಾಧು ಸಂತರ ಬಲಿದಾನ ಮಾಡಿದ್ದಾರೆ. ತ್ಯಾಗ ಬಲಿದಾನ, ಹೋರಾಟದ ಫಲವಾಗಿ ಭವ್ಯ ರಾಮ ಮಂದಿರ ನಿರ್ಮಾಣವಾಗಿದೆ. ಇದೀಗ ಪ್ರತಿ ದಿನ ಲಕ್ಷ ಲಕ್ಷ ಭಕ್ತರು ರಾಮ ಮಂದಿರ ದರ್ಶನ ಮಾಡಿ ಪುನೀತರಾಗುತ್ತಿದ್ದಾರೆ.