ಪುಲ್ವಾಮಾ;  'ಆರೋಪ ಮಾಡಿದ್ದವರು ಮೋದಿ ಕ್ಷಮೆ ಕೇಳಿ ಪ್ರಾಯಶ್ಚಿತ್ತ ಮಾಡಿಕೊಳ್ಳಿ'

By Suvarna NewsFirst Published Oct 30, 2020, 6:31 PM IST
Highlights

ಪುಲ್ವಾಮಾ ದಾಳಿ ನಾವೇ ಮಾಡಿಸಿದ್ದು ಎಂದು ಒಪ್ಪಿಕೊಂಡ ಕುತಂತ್ರಿ ಪಾಕ್/ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಸಲ್ಲದ ಆರೋಪ ಮಾಡಿದ್ದವರು ಕ್ಷಮೆ ಕೇಳಬೇಕು/ ಬಿಜೆಪಿ ನಾಯಕರ ಒತ್ತಾಯ

ನವದೆಹಲಿ(ಅ. 30) ಕುತಂತ್ರಿ ಪಾಕಿಸ್ತಾನ ಕೊನೆಗೂ ಸತ್ಯ ಒಪ್ಪಿಕೊಂಡಿದೆ. ಪುಲ್ವಾಮಾ ದಾಳಿ ತಾನೇ ಮಾಡಿಸಿದ್ದು ಎಂದು ಬಹಿರಂಗವಾಗಿ ಒಪ್ಪಿಕೊಂಡು  ಮಾನಹಾನಿ ಕೆಲಸವನ್ನು ತಾನೇ ಮಾಡಿಕೊಂಡಿದೆ.

ಪುಲ್ವಾಮಾ ದಾಳಿ  ನಂತರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿರಿಸಿಕೊಂಡು ಸಲ್ಲದ ಆರೋಪ ಮಾಡಿದ್ದ ಕಾಂಗ್ರೆಸ್ ನಾಯಕರು ಕ್ಷಮೆ ಕೇಳಬೇಕು ಎಂದು ಬಿಜೆಪಿ ಆಗ್ರಹಿಸಿದೆ. 

ಪುಲ್ವಾಮಾ ದಾಳಿ ಹಿಂದೆ ತಾನೇ ಇರುವುದಾಗಿ ಪಾಕಿಸ್ತಾನ ಸತ್ಯ ಒಪ್ಪಿಕೊಂಡಿದೆ.  ಕಾಂಗ್ರೆಸ್ ಮತ್ತು ಇತರೆ ಪಕ್ಷದ ನಾಯಕರು ಅಂದು ತಮ್ಮದೇ ದಾಟಿಯಲ್ಲಿ ಮಾತನಾಡಿದ್ದರು.  ಇಂಥ ವ್ಯರ್ಥ ಥಿಯರಿ ಹೇಳಿದ್ದವರು ಕ್ಷಮೆ  ಕೇಳಬೇಕು ಎಂದು  ಕೇಂದ್ರ ಸಚಿವ ಪ್ರಕಾಶ್ ಕಾವಡೇಕರ್ ಆಗ್ರಹಿಸಿದ್ದಾರೆ.

ಅಗ್ರ ನಾಯಕರು ಅಂದು ಮೋದಿ ವಿರುದ್ಧ ಕೊಟ್ಟಿದ್ದ ಸ್ಟೇಟ್ ಮೆಂಟ್‌ಗಳು

ನರೇಂದ್ರ ಮೋದಿ ಮತ್ತು ಪಾಕಿಸ್ತಾನ ಮ್ಯಾಚ್ ಫಿಕ್ಸಿಂಗ್‌ ಮಾಡಿಕೊಂಡಿದೆ.  ಸರ್ಜಿಕಲ್ ದಾಳಿ ಆಗೇ ಇಲ್ಲ. ಅದಕ್ಕೆ ಸಾಕ್ಷಿ ಕೊಡಿ ಎಂದೆಲ್ಲಾ ವಿಪಕ್ಷಗಳು ದಾಳಿ ಮಾಡಿದ್ದವು. 

ಪಾಕಿಸ್ತಾನ ಸಂಸತ್ ನಲ್ಲಿ ನಡೆದ ಚರ್ಚೆ ವೇಳೆ ಸ್ಪಷ್ಟನೆ ಕೊಡಲು ಹೋದ ಅಲ್ಲಿಯ ಸಚಿವ ಸತ್ಯ ಒಪ್ಪಿಕೊಂಡಿದ್ದಾನೆ. ಪಾಕ್ ಸಂಸತ್ತಿನಲ್ಲಿ ಮಾತನಾಡಿದ್ದ ಸಚಿವ ಫವಾದ್ ಚೌಧರಿ, ಭಾರತದ ಗಡಿಯೊಳಗೆ ನುಗ್ಗಿ ಹೊಡೆದಿದ್ದೇವೆ. ಪುಲ್ವಾಮಾ ದಾಳಿ ಪ್ರಧಾನಿ ಇಮ್ರಾನ್ ಖಾನ್ ಸರ್ಕಾರದ ಬಹು ದೊಡ್ಡ ಸಾಧನೆ. ಪುಲ್ವಾಮಾ ದಾಳಿಯ ಯೋಜನೆ ಪಾಕಿಸ್ತಾನದಲ್ಲೇ ಸಿದ್ಧವಾಗಿತ್ತು. ಹೀಗಾಗಿ ಪುಲ್ವಾಮಾ ದಾಳಿಯ ಕೀರ್ತಿ ಇಮ್ರಾನ್ ಖಾನ್ ಸರ್ಕಾರಕ್ಕೆ ನೀಡಬೇಕು ಎಂದು ಹೇಳುವ ಮೂಲಕ ಪುಲ್ವಾಮಾ ದಾಳಿಯ ಹಿಂದಿನ ಸತ್ಯವನ್ನು ಒಪ್ಪಿಕೊಂಡಿದ್ದರು. ಇದು ಭಾರತದ ರಾಜಕಾರಣದಲ್ಲಿಯೂ  ಸಂಚಲನಕ್ಕೆ ಕಾರಣವಾಗಿದೆ. 

click me!