ಕೇಂದ್ರದ J&K ಭೂ ತಿದ್ದುಪಡಿ ಕಾನೂನಿಗೆ ಕಾಶ್ಮೀರಿ ಪಂಡಿತರಿಂದಲೇ ವಿರೋಧ!

Published : Oct 30, 2020, 05:30 PM ISTUpdated : Oct 30, 2020, 05:33 PM IST
ಕೇಂದ್ರದ J&K ಭೂ ತಿದ್ದುಪಡಿ ಕಾನೂನಿಗೆ ಕಾಶ್ಮೀರಿ ಪಂಡಿತರಿಂದಲೇ ವಿರೋಧ!

ಸಾರಾಂಶ

ಜಮ್ಮು ಮತ್ತು ಕಾಶ್ಮೀರ ಭೂ ಕಾಯ್ದೆಗೆ ತಿದ್ದುಪಡಿ ತಂದಿರುವ ಕೇಂದ್ರ ಸರ್ಕಾರ, ಯಾರೂ ಬೇಕಾದರೂ ಕಣಿವೆ ರಾಜ್ಯದಲ್ಲಿ ಭೂಮಿ ಖರೀದಿಸಲು ಅವಕಾಶ ಮಾಡಿಕೊಟ್ಟಿದೆ. ಕೇಂದ್ರ ನಿರ್ಧಾರವನ್ನು ಪಿಡಿಪಿ, ಎನ್‌ಪಿಪಿ, ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿದೆ. ಇದೀಗ ಕೇಂದ್ರದ ಬೆಂಬಲ ನೀಡಿದ್ದ ಕಾಶ್ಮೀರಿ ಪಂಡಿತರೇ ಭೂ ನಿಯಮಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ಕಾಶ್ಮೀರ(ಅ.30):   ಕಾಶ್ಮೀರಿ ಪಂಡಿತರ ಪರ ಧನಿ ಎತ್ತಿದ, ಆರ್ಟಿಕಲ್ 370 ರದ್ದು ಮಾಡಿದ ಹಾಗೂ ಕೇಂದ್ರ ಸರ್ಕಾರ ಹಲವು ನಿರ್ಧಾರಗಳಿಗೆ ಬೆಂಬಲವಾಗಿ ನಿಂತಿದ್ದ ಕಾಶ್ಮೀರಿ ಪಂಡಿತರು ಇದೀಗ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಮ್ಮ ಮತ್ತು ಕಾಶ್ಮೀರದಲ್ಲಿ ಯಾರೂ ಬೇಕಾದರೂ ಭೂಮಿ ಖರೀದಿಸಬಹುದು ಅನ್ನೋ ಕೇಂದ್ರದ ಆದೇಶ ಇದೀಗ ಕಾಶ್ಮೀರಿ ಪಂಡಿತರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಜಮ್ಮು - ಕಾಶ್ಮೀರದಲ್ಲಿ ಎಲ್ಲಾ ಭಾರತೀಯರಿಗೆ ಭೂಮಿ ಖರೀದಿಗೆ ಅವಕಾಶ, ಕೇಂದ್ರದ ಮಹತ್ವದ ಹೆಜ್ಜೆ!.

ಹಿಂದಿನ ಸರ್ಕಾರಗಳು ನಮ್ಮ ಭೂಮಿಯನ್ನು ಮರಳಿ ನಮಗೆ ನೀಡುವ ಯಾವುದೇ ಪ್ರಯತ್ನಗಳನ್ನು ನಡೆಸಲಿಲ್ಲ. ಬದಾಗಿ ನಮ್ಮ ಮೇಲೆ ದೌರ್ಜನ್ಯ ನಡೆಸಿತು. ಇದೀಗ ಬಿಜೆಪಿ ಸರ್ಕಾರ ಭೂ ಕಾನೂನು ತಿದ್ದುಪಡಿ ತರುವ ಮೂಲಕ ನಮ್ಮನ್ನು ಶಾಶ್ವತವಾಗಿ ಗಡೀಪಾರು ಮಾಡುವ ಯೋಚನೆಯಲ್ಲಿದೆ ಎಂದು ಕಾಶ್ಮೀರ ಪಂಡಿತ್ ಸಮಿತಿ ಅಸಮಾಧಾನ ಹೊರಹಾಕಿದೆ.

ಗುಂಡಿಟ್ಟು ಮೂವರು ಬಿಜೆಪಿ ನಾಯಕರ ಹತ್ಯೆ,  ಸೇನಾಪಡೆ ದೌಡು.

ಕಳೆದ 31 ವರ್ಷಗಳಿಂದ ನಿರಾಶ್ರಿತರಾಗಿರುವ ಕಾಶ್ಮೀರಿ ಪಂಡಿತರು ತಮ್ಮ ಭೂಮಿಗಾಗಿ ಹೋರಾಟ ಮಾಡುತ್ತಿದ್ದಾರೆ. ನಮ್ಮ ಮೇಲೆ ಆಕ್ರಮಣ, ಮಾರಣಹೋಮ ಮಾಡಿ ಭೂಮಿ ಕಬಳಿಸಲಾಗಿದೆ. ಕಾಶ್ಮೀರದ ಮೂಲ ಕಾಶ್ಮೀರಿ ಪಂಡಿತರು ನಿರಾಶ್ರಿತ ಕೇಂದ್ರಗಳಲ್ಲಿ ಬದುಕು ಸಾಗಿಸುತ್ತಿದ್ದಾರೆ. ಹೀಗಾಗಿ ಕಾಶ್ಮೀರಿ ಪಂಡಿತರ ಭೂಮಿ ಮರಳಿ ನೀಡಿದ ಬಳಿಕ ಜಮ್ಮು ಮತ್ತುಕಾಶ್ಮೀರ ಭೂ ಕಾನೂನಿಗೆ ತಿದ್ದುಪಡಿ ಉತ್ತಮ ಎಂದು ನಿರಾಶ್ರಿತರ ಪುನರ್ವವಸತಿ ಸಮಿತಿ ಮುಖ್ಯಸ್ಥ ಸತೀಶ್ ಮಹಲ್ದಾರ್ ಆಗ್ರಹಿಸಿದ್ದಾರೆ.

ಕೇಂದ್ರ ಸರ್ಕಾರದ ಭೂ ಕಾನೂನು ತಿದ್ದುಪಡಿಯಿಂದ ಕಾಶ್ಮೀರ ಪಂಡಿತರ ಭೂಮಿ, ದೇವಸ್ಥಾನ, ಮಂದಿರ ನಮ್ಮ ಕುರುಹುಗಳು, ಇತಿಹಾಸ ನಾಶವಾಗಲಿದೆ. ಮೊದಲು ಕಾಶ್ಮೀರ ಪಂಡಿತರ ಜೀವನಕ್ಕಾಗಿ ನಮ್ಮ ಭೂಮಿ ಮರಳಿಸಲಿದೆ. ಬಳಿಕ ಭೂ ಕಾನೂನು ತಿದ್ದುಪಡಿ ಮಾಡಲಿ ಎಂದು ಕಾಶ್ಮೀರಿ ಪಂಡಿತ್ ಸಮಿತಿ ಆಗ್ರಹಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ
Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!