ಪಾಕ್‌ ನುಸುಳುಕೋರ BSF ಯೋಧರ ಗುಂಡಿಗೆ ಬಲಿ

By Suvarna NewsFirst Published Aug 8, 2020, 7:07 PM IST
Highlights

ಪಾಕಿಸ್ತಾನ ನುಸುಳುಕೋರನನ್ನು ಬಿಎಸ್‌ಎಫ್‌  ಯೋಧರು ಗುಂಡಿಕ್ಕಿ ಕೊಂದಿದ್ದಾರೆ. ರಾಜಸ್ಥಾನದ ಬರ್ಮಾರ್ ಜಿಲ್ಲೆಯಲ್ಲಿ ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯಲ್ಲಿ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಾಕಿಸ್ತಾನಿ ನುಸುಳುಕೋರ ಗಡಿಯನ್ನು ದಾಟಿ, ಬೇಲಿಯನ್ನು ದಾಟಿಯಲ್ಲಿ ಪ್ರಯತ್ನಿಸುತ್ತಿದ್ದ ಸಂದರ್ಭ ಬಿಎಸ್‌ಎಫ್ ಯೋಧರು ಗಮನಿಸಿದ್ದಾರೆ. ನುಸುಳುಕೋರನಿಗೆ ವಾರ್ನಿಂಗ್ ನೀಡಲಾದರೂ ತಂತಿ ಬೇಲಿ ದಾಟಿ ಇನ್ನೊಂದು ದಿಕ್ಕಿನತ್ತ ಓಡಿದ್ದಾನೆ ಎಂದು ಎಂದಿದ್ದಾರೆ.

ಈ ಸಂದರ್ಭ ಯೋಧರು ಗುಂಡು ಹಾರಿಸಿದ್ದು, ನುಸುಳುಕೋರ ಪೊದೆಯಲ್ಲಿ ಅಡಗಿಕೊಂಡಿದ್ದ. ಗುಂಡಿನ ದಾಳಿ ನಂತರ ಹುಡುಕಿದಾದ ಮೃತದೇಹ ಸಿಕ್ಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಲಡಾಖ್‌ನಲ್ಲಿ ಹಾಲಿ ಸ್ಥಿತಿ ಕಾಪಾಡುವ ಚೀನಾ ಕುತಂತ್ರಕ್ಕೆ ಭಾರತದ ಬ್ರೇಕ್‌!

ಗಡಿಯ ಭಕಸರಾ ಭಾಗದಲ್ಲಿ ರಾತ್ರಿ 1 ಗಂಟೆಗೆ ಘಟನೆ ನಡೆದಿದೆ. ಪಾಕಿಸ್ತಾನ ಕಡೆಯಿಂದ 10ರಿಂದ 15 ಟಾರ್ಚ್ ಬೆಳಕು ಹಾಗೂ ಕಿರುಚಾಟವೂ ಕೇಳುತ್ತಿತ್ತು ಎಂದು ಯೋಧರು ತಿಳಿಸಿದ್ದಾರೆ.

ಆಗಸ್ಟ್‌ 15ರಂದು ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಗಡಿಯಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ ಎಂದು ಹಿರಿಯ ಅಧಿಕಾರಿ ಮಾಹಿತಿ ನೀಡಿದ್ದಾರೆ. ಬಿಎಸ್‌ಎಫ್ ಅಧಿಕಾರಿ ನುಸುಳುಕೋರನ ಪತ್ತೆಗಾಗಿ ಪಾಕ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಅಲ್ಲಿನ ವರದಿಯ ಬಳಿಕ ಹೆಚ್ಚಿನ ವಿವರ ಲಭ್ಯವಾಗಲಿದೆ.

click me!