ಹೊಸ ಸಂಪ್ರದಾಯಕ್ಕೆ ನಾಂದಿ, ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ ಗೌರವ ಸಲ್ಲಿಸಿದ ಪದ್ಮಪ್ರಶಸ್ತಿ ಪುರಸ್ಕೃತರು!

Published : Mar 22, 2022, 04:36 PM IST
ಹೊಸ ಸಂಪ್ರದಾಯಕ್ಕೆ ನಾಂದಿ, ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ ಗೌರವ ಸಲ್ಲಿಸಿದ ಪದ್ಮಪ್ರಶಸ್ತಿ ಪುರಸ್ಕೃತರು!

ಸಾರಾಂಶ

ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ ಮೋದಿ ಸರ್ಕಾರ ಪದ್ಮಪ್ರಶಸ್ತಿ ವಿಜೇತರಿಂದ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ, ಗೌರವ ಯುದ್ಧಸ್ಮಾರಕವನ್ನು ಇನ್ನಷ್ಟು ಪ್ರಖ್ಯಾತಿಗೊಳಿಸುವ ಉದ್ದೇಶದಲ್ಲಿ ಸರ್ಕಾರದ ಕ್ರಮ

ನವದೆಹಲಿ (ಮಾ.22): ಪ್ರಧಾನಮಂತ್ರಿ ನರೇಂದ್ರ ಮೋದಿ (Prime Minister Narendra Modi) ನೇತೃತ್ವದ ಕೇಂದ್ರ ಸರ್ಕಾರದ (Central Government) ಉಪಕ್ರಮದ ಅಡಿಯಲ್ಲಿ ಮಂಗಳವಾರ ವಿಶೇಷ ಸಂಪ್ರದಾಯವೊಂದಕ್ಕೆ ನಾಂದಿ ಹಾಡಲಾಗಿದೆ. ಸೋಮವಾರ ರಾಷ್ಟ್ರಪತಿ ಭವನದಲ್ಲಿ (Rashtrapati Bhavan) ನಡೆದ ಕಾರ್ಯಕ್ರಮದಲ್ಲಿ 2022ರ ಸಾಲಿನ ಪದ್ಮಪ್ರಶಸ್ತಿ (Padma Awards) ಸ್ವೀಕಾರ ಮಾಡಿದ ಸಾಧಕರು ಮಂಗಳವಾರ, ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ (National War Memorial) ಭೇಟಿ ನೀಡಿ ಉತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸಿದ್ದಾರೆ.  ಆ ಮೂಲಕ ರಾಷ್ಟ್ರೀಯ ಯುದ್ಧ ಸ್ಮಾರಕವನ್ನು ಇನ್ನಷ್ಟು ಪ್ರಖ್ಯಾತಿಗೊಳಿಸುವ ಸರ್ಕಾರದ ಕ್ರಮ ಇದಾಗಿದೆ.

ಸೋಮವಾರ, ರಾಷ್ಟ್ರಪತಿ ರಾಮನಾಥ್ ಕೋವಿಂದ್ (President Ram Nath Kovind ) ಅವರು ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ 2022 ರ ಎರಡು ಪದ್ಮವಿಭೂಷಣ, ಎಂಟು ಪದ್ಮಭೂಷಣ ಮತ್ತು 54 ಪದ್ಮಶ್ರೀ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಇಂದು ಈ ಪದ್ಮ ಪ್ರಶಸ್ತಿ ಪುರಸ್ಕೃತರು ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿದ್ದಾರೆ.

ಗೃಹ ಸಚಿವಾಲಯದ ಪ್ರಕಟಣೆಯ ಪ್ರಕಾರ, ಪ್ರಶಸ್ತಿ ಪುರಸ್ಕೃತರು ಸ್ಮಾರಕದ ಸುತ್ತಲೂ ತೆರಳಿ ಹುತಾತ್ಮ ಯೋಧರನ್ನು ಸ್ಮರಿಸಿದ್ದಾರೆ. ಹಲವಾರು ವರ್ಷಗಳಿಂದ ಸರ್ವೋಚ್ಚ ತ್ಯಾಗ ಮಾಡಿದ ಮತ್ತು ರಾಷ್ಟ್ರದ ಗಡಿಗಳನ್ನು ರಕ್ಷಿಸಲು ತಮ್ಮ ಪ್ರಾಣವನ್ನು ಅರ್ಪಿಸಿದ ರಕ್ಷಣಾ ಪಡೆಗಳ ಸಿಬ್ಬಂದಿಗಳ ಹೆಸರನ್ನು ನೋಡಿ ಭಾವುಕರಾಗಿದ್ದಾರೆ. ಈ ಭೇಟಿಯನ್ನು ಆಯೋಜಿಸಿದ ಸರ್ಕಾರದ ಕ್ರಮವನ್ನೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು ಮೆಚ್ಚಿದ್ದಾರೆ. ರಾಷ್ಟ್ರರಾಜಧಾನಿಗೆ ಬಂದಾಗ ಮಕ್ಕಳು ಹಾಗೂ ಜನರು ಈ ಯುದ್ಧಸ್ಮಾರಕಕ್ಕೆ ಭೇಟಿ ನೀಡಲೇಬೇಕಾಗಿರುವ ಸ್ಮಾರಕವಾಗುವ ನಿಟ್ಟಿನಲ್ಲಿ ಸರ್ಕಾರ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಿದೆ ಎಂದು ಹೇಳಿದ್ದಾರೆ.


 ಸ್ಮಾರಕಕ್ಕೆ ಭೇಟಿ ನೀಡುವುದರಿಂದ ದೇಶಭಕ್ತಿ, ಕರ್ತವ್ಯ ನಿಷ್ಠೆ, ಧೈರ್ಯ ಮತ್ತು ತ್ಯಾಗದ ಮೌಲ್ಯಗಳನ್ನು ಬೆಳೆಸಲು ಮತ್ತು ರಾಷ್ಟ್ರೀಯತೆಯ ಭಾವನೆಯನ್ನು ತುಂಬಲು ಸಹಾಯ ಮಾಡುತ್ತದೆ ಎಂದು ಪದ್ಮಶ್ರೀ ಪುರಸ್ಕೃತರು ಅಭಿಪ್ರಾಯಪಟ್ಟಿದ್ದಾರೆ.

National War Memorial : ಸುಮ್ಮನೆ ಆಗಿದ್ದಲ್ಲ ರಾಷ್ಟ್ರೀಯ ಯುದ್ಧ ಸ್ಮಾರಕ, ಇದಕ್ಕಾಗಿಯೇ ನಡೆದಿತ್ತು ಹೋರಾಟ!
ಸ್ವಾತಂತ್ರ್ಯದ ನಂತರ ಭಾರತದ ಧೀರ ಸೈನಿಕರು ಮಾಡಿದ ತ್ಯಾಗಕ್ಕೆ ಸಾಕ್ಷಿಯಾಗಿ, ರಾಷ್ಟ್ರೀಯ ಯುದ್ಧ ಸ್ಮಾರಕವನ್ನು (NWM) 25 ಫೆಬ್ರವರಿ 2019 ರಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರಕ್ಕೆ ಸಮರ್ಪಿಸಿದರು.  ಈ ಸ್ಮಾರಕವು ಶಾಶ್ವತ ಜ್ವಾಲೆಯನ್ನು ಹೊಂದಿದೆ, ಇದು ಕರ್ತವ್ಯದ ವೇಳೆ ಸೈನಿಕನು ಮಾಡಿದ ಅತ್ಯುನ್ನತ ತ್ಯಾಗವನ್ನು ಉದಾಹರಿಸುತ್ತದೆ, ಹೀಗಾಗಿ ಅವರನ್ನು ಅಮರನನ್ನಾಗಿ ಮಾಡಿದೆ ಎಂದು ಗೃಹ ಸಚಿವಾಲಯದ ಪ್ರಕಟಣೆ ತಿಳಿಸಿದೆ. ಇದರ ಉದ್ಘಾಟನೆಯಾದಾಗಿನಿಂದ, ರಾಷ್ಟ್ರೀಯ ದಿನಗಳು ಸೇರಿದಂತೆ ಎಲ್ಲಾ ಗೌರವ ಸಮಾರಂಭಗಳನ್ನು NWM ನಲ್ಲಿ ಮಾತ್ರ ನಡೆಸಲಾಗುತ್ತದೆ.

ಪ್ರತಿದಿನ ಸಂಜೆ, ನೆಕ್ಸ್ಟ್-ಆಫ್-ಕಿನ್ (NK) ಸಮಾರಂಭವನ್ನು ನಡೆಸಲಾಗುತ್ತದೆ, ಈ ಸಮಯದಲ್ಲಿ ಸೈನಿಕನ ಅತ್ಯುನ್ನತ ತ್ಯಾಗವನ್ನು ಸ್ಮರಿಸುತ್ತಾ ಮಡಿದ ವೀರನ NoK ಸ್ಮಾರಕದಲ್ಲಿ ಹೂವಿನ ಮಾಲೆಯನ್ನು ಇಡಲಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ. ದೇಶ ಮತ್ತು ವಿದೇಶಗಳ ಗಣ್ಯರು ತಮ್ಮ ವೇಳಾಪಟ್ಟಿಯ ಭಾಗವಾಗಿ NWM ಗೆ ಭೇಟಿ ನೀಡುತ್ತಾರೆ ಮತ್ತು ದೇಶದ ಕೆಚ್ಚೆದೆಯ ಸೈನಿಕರಿಗೆ  ಗೌರವ ಸಲ್ಲಿಸುತ್ತಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Amar Jawan Jyoti : ತಪ್ಪು ಗ್ರಹಿಕೆ ಬೇಡ, ಅಮರ್ ಜವಾನ್ ಜ್ಯೋತಿ ಆರಿಸುತ್ತಿಲ್ಲ ಎಂದ ಕೇಂದ್ರ ಸರ್ಕಾರ
ಹಲವು ವರ್ಷಗಳ ಹೋರಾಟ: 2009 ರಲ್ಲಿ, ಹಿರಿಯ ಕಾಂಗ್ರೆಸ್ ನಾಯಕ ಎಕೆ ಆಂಟನಿ (AK Antony) ಅವರು ರಕ್ಷಣಾ ಸಚಿವಾಲಯದ ನೇತೃತ್ವ ವಹಿಸಿಕೊಂಡಿದ್ದಾಗ, ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ (Rajya Sabha MP Rajeev Chandrasekhar) ಅವರು ವಿಶ್ವದ ಬಹುತೇಕ ದೇಶಗಳು ಅವರದೇ ಆದ ಯುದ್ಧ ಸ್ಮಾರಕಗಳನ್ನು ಹೊಂದಿವೆ. ಭಾರತಕ್ಕೂ ತನ್ನದೇ ಆದ ಯುದ್ಧ ಸ್ಮಾರಕ ನಿರ್ಮಾಣವಾಗಬೇಕು ಎಂದು ಆಗ್ರಹಿಸಿ ರಕ್ಷಣಾ ಇಲಾಖೆ (ರಾಜ್ಯ) ಸಚಿವ ಎಂ.ಎಂ. ಪಲ್ಲಂ ರಾಜು (Pallam Raju) ಅವರಿಗೆ ಪತ್ರ ಬರೆದಿದ್ದರು. ಆ ಬಳಿಕ ಹಲವು ವ್ಯಕ್ತಿಗಳ ಅವಿರತ ಶ್ರಮದಿಂದಾಗಿ 2019ರಲ್ಲಿ ಕೊನೆಗೆ ರಾಷ್ಟ್ರೀಯ ಯುದ್ಧ ಸ್ಮಾರಕ ದೇಶಕ್ಕೆ ಲೋಕಾರ್ಪಣೆಗೊಂಡಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live: ₹610 ಕೋಟಿ ಟಿಕೆಟ್‌ ಹಣ ವಾಪಸ್‌ ನೀಡಿದ ಇಂಡಿಗೋ; ಪ್ರಯಾಣಿಕರಿಗೆ ತಲುಪಿದ ಲಗೇಜ್
ಟಾಪ್‌ 10 ಸ್ವಚ್ಛ ಗಾಳಿಯ ನಗರಗಳಲ್ಲಿ ರಾಜ್ಯದ 6 !