ಶೂ ಕದ್ದ ಯುವತಿಯರಿಗೆ 2.5 ಕೋಟಿ ವರದಕ್ಷಿಣೆ ತಗೊಂಡ ವರ ಕೊಟ್ಟ ಹಣವೆಷ್ಟು?

Published : Dec 02, 2024, 03:00 PM ISTUpdated : Dec 02, 2024, 05:29 PM IST
ಶೂ ಕದ್ದ ಯುವತಿಯರಿಗೆ 2.5 ಕೋಟಿ ವರದಕ್ಷಿಣೆ ತಗೊಂಡ ವರ ಕೊಟ್ಟ ಹಣವೆಷ್ಟು?

ಸಾರಾಂಶ

2.5 ಕೋಟಿ ರೂಪಾಯಿ ವರದಕ್ಷಿಣೆ ಪಡೆದ ವರನೊಬ್ಬ ಶೂ ಕದ್ದವರಿಗೆ ಹಣ ನೀಡಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸೂಟ್‌ಕೇಸ್‌ನಲ್ಲಿ ತುಂಬಿಕೊಂಡು ವರನಿಗೆ ವರದಕ್ಷಿಣೆ ನೀಡಲಾಗಿದೆ.

ಲಕ್ನೋ: ಮದುವೆ ವಿವಿಧ ಆಚರಣೆಗಳನ್ನು ಒಳಗೊಂಡಿರುತ್ತವೆ. ಸಂಪ್ರದಾಯ ಆಚರಣೆ ಸಂದರ್ಭದಲ್ಲಿ ವರ-ವಧುವಿನ ಪೋಷಕರ ನಡುವೆ ವಾದಗಳು ನಡೆಯುತ್ತಿರುತ್ತವೆ.  ಒಂದೇ ಸಮುದಾಯದವರ ಮದುವೆಯಾಗಿದ್ರೆ ಇಂತಹ ಅಡಚಣೆಗಲು ಉಂಟಾಗಲ್ಲ. ಆದ್ರೆ ಪ್ರೇಮ ವಿವಾಹವಾಗಿದ್ರೆ  ಇಂತಹ ಸಮಸ್ಯೆಗಳು  ಉಂಟಾಗುತ್ತಿರುತ್ತವೆ. ವರನ ಶೂ ಕಳ್ಳತನ ಮಾಡುವ ಸಂಪ್ರದಾಯ ಉತ್ತರ ಭಾರತದ ಎಲ್ಲಾ ಮದುವೆಗಳಲ್ಲಿಯೂ ಕಂಡು ಬರುತ್ತದೆ. ಇದೀಗ ಇಂತಹವುದೇ ಒಂದು ವಿಡಿಯೋ ವೈರಲ್ ಆಗಿದ್ದ, ವರನ ಶೂ ಕದ್ದ ಯುವತಿಯರಿಗೆ ಸಿಕ್ಕ ಹಣ ನೋಡಿ ನೆಟ್ಟಿಗರು ಆಶ್ವರ್ಯ ವ್ಯಕ್ತಪಡಿಸಿದ್ದಾರೆ.

ಇಂದು ಮದುವೆಯ ಪ್ರತಿಯೊಂದು ಕ್ಷಣವನ್ನು ರೆಕಾರ್ಡ್ ಮಾಡಿಕೊಳ್ಳಲು ಎಲ್ಲರೂ ಬಯಸುತ್ತಾರೆ.  ಎಲ್ಲಾ ಮದುವೆಗಳಲ್ಲಿ ಮೂರ್ನಾಲ್ಕು ಜನರು ಕ್ಯಾಮೆರಾ ಹಿಡಿದುಕೊಂಡು ಓಡಾಡುತ್ತಿರೋರದನ್ನು ನೀವು ಗಮನಿಸಿರಬಹುದು.  ಮದುವೆ ವಿಡಿಯೋಗಳು ಸಹ ಸೋಶಿಯಲ್ ಮೀಡಿಯಾದ ಕಡಿಮೆ ಸಮಯದಲ್ಲಿಯೇ ವೈರಲ್ ಆಗುತ್ತವೆ. ಕಳೆದ ಕೆಲವು ದಿನಗಳಿಂದ ಮದುವೆಯಲ್ಲಿ ವರನೊಬ್ಬ ಕಂತೆ ಕಂತೆ ಹಣ ಪಡೆದುಕೊಳ್ಳುವ ವಿಡಿಯೋ ಹರಿದಾಡುತ್ತಿದೆ. 2.5 ಕೋಟಿ ರೂಪಾಯಿ ವರದಕ್ಷಿಣೆ ಪಡೆದ ವರ ಶೂ ಕದ್ದವರಿಗೆ ಭಾರೀ ಮೊತ್ತದ ಹಣವನ್ನು ನೀಡಿದ್ದಾನೆ. 

ಈ ವಿಡಿಯೋ ಮೀರತ್-ದೆಹಲಿ-ಡೆಹ್ರಾಡೂನ್ ಹೆದ್ದಾರಿಯಲ್ಲಿರುವ ರೆಸಾರ್ಟ್‌ನಲ್ಲಿ ನಡೆದಿದ್ದು ಎನ್ನಲಾಗಿದೆ. ವಿಡಿಯೋ ಪ್ರಕಾರ, ವರನಿಗೆ  2 ಕೋಟಿ 56 ಲಕ್ಷ ರೂಪಾಯಿ ನಗದು ಹಣವನ್ನು ವರದಕ್ಷಿಣೆಯಾಗಿ ನೀಡಲಾಗಿದೆ. ಈ ವಿಡಿಯೋ ನೋಡಿದ ಎಲ್ಲರೂ ಸಹ ತಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ವ್ಯಕ್ತಪಡಿಸಿದ್ದಾರೆ. ವಿಡಿಯೋಗೆ ಸಾವಿರಾರು ಕಮೆಂಟ್‌ಗಳು ಬಂದಿವೆ. 

ಇದನ್ನೂ ಓದಿ: ಓ ದೇವ್ರೇ, ಇಂಥಾ ಕಷ್ಟ ಯಾರಿಗೂ ಬೇಡ; ಪಾನಿಪುರಿ ವ್ಯಾಪಾರಿ ಕಷ್ಟಕ್ಕೆ ಮರುಗಿದ ಜನರು

ಮದುವೆಯಲ್ಲಿ ವರನ ಶೂ ಕದಿಯೋದು ವಧುವಿನ  ಸಂಬಂಧಿಕರಿಗೆ ದೊಡ್ಡ ಸವಾಲು. ಶೂ ರಕ್ಷಣೆಗಾಗಿಯೇ ವರನ ಪಕ್ಕದಲ್ಲಿ ಆತನ ಆಪ್ತರು ನಿಂತಿರುತ್ತಾರೆ. ಆದ್ರೂ ಬಹುತೇಕ ಎಲ್ಲಾ ಮದುವೆಗಳಲ್ಲಿ ವರನ ಶೂ ಕಳ್ಳತನ ಮಾಡಲಾಗುತ್ತದೆ.  ಶೂ ಹಿಂದಿರುಗಿಸಲು ವಧುವಿನ ಕಡೆಯವರು ಹಣಕ್ಕೆ ಡಿಮ್ಯಾಂಡ್ ಮಾಡುತ್ತಾರೆ. ಎಷ್ಟು ಹಣ ನೀಡಬೇಕು ಎಂಬುದರ ಬಗ್ಗೆ ಎರಡೂ ಕಡೆಯವರ ನಡುವೆ ಸ್ನೇಹಪೂರ್ವಕ ಚರ್ಚೆಗಳು ನಡೆಯುತ್ತವೆ. ಅಂತಿಮವಾಗಿ ಎಲ್ಲರೂ ಒಂದು ಮೊತ್ತಕ್ಕೆ ಒಮ್ಮತ ವ್ಯಕ್ತಪಡಿಸಿ, ಹಣ ಪಡೆದು ಶೂ ಹಿಂದಿರುಗಿಸುತ್ತಾರೆ. ಆದ್ರೆ  ಈ ಮದುವೆಯಲ್ಲಿ ಅಷ್ಟೊಂದು ಹಣ ಸಿಗುತ್ತೆ ಅಂತ ವಧುವಿನ ಸಂಬಂಧಿಕರು ಊಹೆ ಮಾಡಿರಲಿಲ್ಲ. 

ಹೌದು, ಮದುವೆಯಲ್ಲಿ ತನ್ನ ಶೂ ಮುಚ್ಚಿಟ್ಟಿದ್ದವರಿಗೆ ವರ ಬರೋಬ್ಬರಿ 11 ಲಕ್ಷ ರೂಪಾಯಿ ನೀಡಿದ್ದಾನೆ ಎಂದು ವರದಿಯಾಗಿದೆ. ಇನ್ನಿತರ ಕಾರ್ಯಕ್ರಮಗಳಲ್ಲಿ ದಕ್ಷಿಣೆ ರೂಪದಲ್ಲಿ ಹಣಕ್ಕಾಗಿ ವರ 8 ಲಕ್ಷ ರೂಪಾಯಿ ಖರ್ಚು ಮಾಡಿದ್ದಾನೆ. ಈ ವಿಷಯ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಇದು ಅವರ ವೈಯಕ್ತಿಕ ವಿಷಯವಾಗಿದ್ದು,  ಈ ಬಗ್ಗೆ ಪರ-ವಿರೋಧದ ಚರ್ಚೆ ಮಾಡೋದು ಅನಾವಶ್ಯಕ ಎಂದು ಬಹುತೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಸೈಕಲ್‌ ಮೇಲೆ ಬಂದ ಫುಡ್ ಡೆಲಿವರಿ ಬಾಯ್ ಅದೃಷ್ಟ ಖುಲಾಯಿಸಿದ್ದೇಗೆ? ವಿಡಿಯೋ ನೋಡಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಯೋಧ್ಯೆಯ ರಾಮಲಲ್ಲಾ ಪ್ರತ್ಯಕ್ಷನಾಗಿ ಆಶೀರ್ವದಿಸಿದರೆ ಹೇಗಿರತ್ತೆ? ರೋಮಾಂಚಕಾರಿ ವಿಡಿಯೋ ವೈರಲ್​
ಮೆಹೆಂದಿಯಾಗಿತ್ತು, ಆದರೆ ಮದುವೆಯಾಗಲ್ಲ: ಕೊನೆಗೂ Palash Muchhal ಜೊತೆಗಿನ ಸಂಬಂಧಕ್ಕೆ ತೆರೆ ಎಳೆದ Smriti Mandhana