ಜೀವಿತಾವಧಿಗೆ ರಕ್ಷಣೆ ನೀಡಲಿದೆ ಆಸ್ಟ್ರಾಜೆನೆಕಾ ಲಸಿಕೆ; ಅಧ್ಯಯನ ವರದಿ ಬಹಿರಂಗ!

By Suvarna NewsFirst Published Jul 19, 2021, 4:05 PM IST
Highlights
  • ಅಸ್ಟ್ರಾಜೆನೆಕಾ ಲಸಿಕೆ ಕೋವಿಡ್ ವಿರುದ್ಧ ನಿರಂತರ ಹೋರಾಟ
  • ಈ ಲಸಿಕೆಯಿಂದ ಜೀವಿತಾವಧಿವರೆಗೂ ರಣಕ್ಷೆ ನೀಡಲಿದೆ ಎಂದ ವರದಿ
  • ಆಕ್ಸ್‌ಫರ್ಡ್ ಅಸ್ಟ್ರಾಜೆನೆಕಾ ಭಾರತದಲ್ಲಿ ಕೋವಿಶೀಲ್ಡ್ ಮೂಲಕ ಮಾರುಕಟ್ಟೆಗೆ

ಲಂಡನ್(ಜು.19): ಕೊರೋನಾ ವೈರಸ್ ವಿರುದ್ಧ ಹಲವು ಲಸಿಕೆಗಳು ಮಾರುಕಟ್ಟೆಯಲ್ಲಿವೆ. ಇದರಲ್ಲಿ ಆಕ್ಸ್‌ಫರ್ಡ್ ಅಸ್ಟ್ರಾಜೆನೆಕಾ ಲಸಿಕೆ ಜೀವಿತಾವಧಿವರೆಗೆ ರಕ್ಷಣೆ ನೀಡಲಿದೆ ಎಂದು ಅಧ್ಯಯನ ವರದಿಯೊಂದು ಬಹಿರಂಗ ಪಡಿಸಿದೆ. ಯೆಕೆನ ದಿ ಸನ್ ಈ ಕುರಿತ ಅಧ್ಯಯನ ವರದಿಯನ್ನು ಪ್ರಕಟಿಸಿದೆ.

ಹೊಸ ಮೈಲಿಗಲ್ಲು; 40 ಕೋಟಿ ಗಡಿ ದಾಟಿದ ಭಾರತದ ಲಸಿಕಾ ಅಭಿಯಾನ!

ವೈರಸ್ ವಿರುದ್ಧ ಹೋರಾಡಬಲ್ಲ ಪ್ರತಿಕಾಯಗಳನ್ನು ನಿರಂತರವಾಗಿ ಸೃಷ್ಟಿಸುತ್ತದೆ. ಕೊರೋನಾ ವೈರಸ್ ವಿರುದ್ಧ ಅತ್ಯಂತ ಪರಿಣಾಮಕಾರಿಯಾಗಿ ಹೋರಾಡಬಲ್ಲ ಶಕ್ತಿ ಆಸ್ಟ್ರಾಜೆನೆಕಾ ಲಸಿಕೆಗೆ ಇದೆ. ಇದು ಭಾರತೀಯರಿಗೂ ಸಮಾಧಾನ ತಂದಿದೆ. ಕಾರಣ ಇದೆ ಆಸ್ಟ್ರಾಜೆನಾಕ ಲಸಿಕೆ ಭಾರತದಲ್ಲಿ ಕೋವಿಶೀಲ್ಡ್ ಲಸಿಕೆಯಾಗಿ ಮಾರುಕಟ್ಟೆಯಲ್ಲಿದೆ.

ಅಧ್ಯಯನ ವರದಿ ಪ್ರಕಾರ, ಸೆಲ್ಯುಲಾರ್ ತರಬೇತಿ ಶಿಬಿರಗಳಿಂದ ಬರುವ ಟಿ-ಕೋಶಗಳು ದೇಹದಲ್ಲಿ ಅತ್ಯುನ್ನತ ಮಟ್ಟದ 'ಫಿಟ್‌ನೆಸ್ ನೀಡಲಿದೆ ಎಂದು ಸ್ವಿಟ್ಜರ್‌ಲ್ಯಾಂಡ್‌ನ ಕ್ಯಾಂಟೋನಲ್ ಆಸ್ಪತ್ರೆಯ ಸಂಶೋಧಕ ಬುರ್ಖಾರ್ಡ್ ಲುಡ್ವಿ ಹೇಳಿದ್ದಾರೆ. ಅಡೆನೊವೈರಸ್‌ಗಳು ದೀರ್ಘಕಾಲೀನ ಅಂಗಾಂಶ ಕೋಶಗಳಿಗೆ ಪ್ರವೇಶಿಸಲು ಸಮರ್ಥವಾಗಿವೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಇದನ್ನು ಫೈಬ್ರೊಬ್ಲಾಸ್ಟಿಕ್ ರೆಟಿಕ್ಯುಲರ್ ಕೋಶಗಳು ಎಂದು ಕರೆಯಲಾಗುತ್ತದೆ ಎಂದು ಸಂಶೋಧರು ಹೇಳಿದ್ದಾರೆ.

click me!