ಡಾನ್‌ ಆಗುವ ಕನಸು, ರಿವಾಲ್ವರ್ ಮೇಲಿನ ಪ್ರೀತಿ ಜೈಲು ಸೇರಿಸಿತು!

By Suvarna NewsFirst Published Jul 19, 2021, 4:02 PM IST
Highlights

* ಡಾನ್ ಆಗಲು ಹೋದಾತನ ಹುಚ್ಚು ಬಿಡಿಸಿದ ಪೊಲೀಸರು

* ರಿವಾಲ್ವರ್ ಮೇಲಿನ ಪ್ರೀತಿಯಿಂದ ಪೊಲೀಸರ ಕೈಗೆ ಬಿದ್ದ 'ಡಾನ್'

* ವಾರ್ನಿಂಗ್ ಕೊಟ್ಟ ಒಳ್ಳೆಯವನಾಗೆಂದ ಪೊಲೀಸರು

ಲಕ್ನೋ(ಜು.19): ಇದು ಸಿನಿಮಾ ಪರಿಣಾಮವೋ ಅಥವಾ ಮನುಷ್ಯನ ಹುಚ್ಚೋ ಆದರೆ ಕೆಲವರಿಗೆ ತಾನು ಡಾನ್ ಆಗಬೇಕೆಂಬ ಹುಚ್ಚು ಕನಸಿರುತ್ತದೆ. ಅಪರಾಧದ ಪ್ರಪಂಚದಲ್ಲಿ ಕಿಂಗ್ಪಿನ್ ಎಂದು ಕರೆಸಿಕೊಂಡರೆ ಅದೊಂದು ಹೆಮ್ಮೆಯ ವಿಷಯ. ಇದೇ ಕಾರಣಕ್ಕೆ ಅನೇಕ ಬಾರಿ ಅಂತಹ ಜನರು ರಸ್ತೆಯಲ್ಲಿ ಗೂಂಡಾಗಿರಿ ಮಾಡುವ ಮೂಲಕ ಸಾಮಾನ್ಯ ಜನರಿಗೆ ಕಿರುಕುಳ ನೀಡುತ್ತಾರೆ. ಸದ್ಯ ಇದೇ ರೀತಿ ಡಾನ್ ಆಗಬೇಕೆಂಬ ಕನಸು ಕಂಡಿದ್ದ ವ್ಯಕ್ತಿಯೊಬ್ಬನಿಗೆ ಪೊಲೀಸರು ಬುದ್ಧಿ ಕಲಿಸಿದ್ದಾರೆ.

ಗಾಜಿಯಾಬಾದ್ ಗ್ರಾಮೀಣ ಎಸ್ಪಿ ಇರಾಜ್ ರಾಜಾ ಎಂಬವರು ಈ ಬಾರಿ ತಮಾಷೆಯ ಒಂದು ಫೋಟೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ನಲ್ಲಿ ಒಬ್ಬ ವ್ಯಕ್ತಿ ತನ್ನ ಕೈಯಲ್ಲಿ ಪಿಸ್ತೂಲ್ ಹಿಡಿದಿದ್ದಾನೆ. ಅಲ್ಲದೇ ಮೊದಲ ಫೋಟೋಗೆ ಶೀರ್ಷಿಕೆಯಾಗಿ 'ಮೊದಲು ನಾನು ಪಶ್ಚಿಮ ಯುಪಿಯ ಡಾನ್ ಆಗಬೇಕೆಂದು ಬಯಸಿದ್ದೆ' ಎಂದು ಬರೆಯಲಾಗಿದೆ. ಇದೇ ಚಿತ್ರದ ಎರಡನೇ ಭಾಗದಲ್ಲಿ, ಅದೇ ವ್ಯಕ್ತಿಯು ನೆಲದ ಮೇಲೆ ಕುಳಿತಿದ್ದಾನೆ ಮತ್ತು ಚಿತ್ರದಲ್ಲಿ 'ನಾನು ಡಾನ್ ಆಗಲು ಬಯಸುವುದಿಲ್ಲ. ನಾನು ಸಾಮಾನ್ಯ ಜೀವನವನ್ನು ಬಯಸುತ್ತೇನೆ. ತಪ್ಪಾಯ್ತು' ಎಂದು ಬರೆಯಲಾಗಿದೆ.

राहों में उनसे मुलाकात हो गई 🚔🚔 जिससे डरते थे वही बात हो गयी । एक और महापुरुष तमंचे के प्रेम में पहुँच गये जेल । खैर ग़लती मान ली यही बड़ी बात है । आने वाले भविष्य के लिये शुभकामनायें । 😆😆 pic.twitter.com/liyOokUbU4

— Dr. Iraj Raja IPS (@drIRAJRAJA)

ಈ ಚಿತ್ರದೊಂದಿಗೆ, ಎಸ್ಪಿ ಇರಾಜ್ ವಿವರಣೆ ಬರೆಯುತ್ತಾ 'ನಾನು ಅವನನ್ನು ದಾರಿಯಲ್ಲಿ ಭೇಟಿಯಾಗಿದ್ದೆ, ಯಾವುದಕ್ಕೆ ಆತ ಭಯ ಪಡುತ್ತಿದ್ದೆನೋ ಅದೇ ನಡೆದಿದೆ. 'ಮಹಾನ್' ವ್ಯಕ್ತಿ ಬಂದೂಕಿನ ಮೇಲಿನ ಪ್ರೀತಿಯಿಂದ ಜೈಲು ಸೇರಿದ್ದಾನೆ. ಅದನ್ನು ಒಪ್ಪಿಕೊಂಡದ್ದು ದೊಡ್ಡ ವಿಷಯ. ಮುಂದಿನ ಭವಿಷ್ಯಕ್ಕಾಗಿ ಶುಭ ಕೋರುತ್ತೇನೆ ಎಂದು ಬರೆದಿದ್ದಾರೆ

ಸಿನಿಮಾಗಳನ್ನು ನೋಡಿ ಅಪತರಾಧ ಜಗತ್ತಿನ ಬಗ್ಗೆ ವ್ಯಾಮೋಹ ಬೆಳೆಸಿಕೊಳ್ಳುವವರ ಸಂಖ್ಯೆ ನಮ್ಮ ಸಮಾಜದಲ್ಲಿ ಕಡಿಮೆ ಇಲ್ಲ. ಅಪರಾಧ ಪ್ರಪಂಚದಲ್ಲಿ ತಾವು ಪೇಮಸ್ ಆಗಬೇಕೆಂದು ಪರವಾನಗಿ ಇಲ್ಲದೆ ಪಡೆದ ಶಸ್ತ್ರಾಸ್ತ್ರಗಳೊಂದಿಗೆ ಕ್ಲಿಕ್ ಮಾಡಿಸಿಕೊಂಡ ಫೋಟೋಗಳನ್ನು ಸೇರ್ ಮಾಡುತ್ತಿರುತ್ತಾರೆ. ಆದರೆ ಇದು ಅಪರಾಧ. ಅಂತಹ ಜನರ ಮೇಲೂ ಯುಪಿ ಪೊಲೀಸರು ಕಣ್ಣಿಟ್ಟಿದ್ದಾರೆ. ಆದರೀಗ ಈ ರಿವಾಲ್ವರ್ ಪ್ರೇಮಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ, ಹೀಗಾಗಿ ಪೊಲೀಸರಉ ಆತನಿಗೆ ವಾರ್ನಿಂಗ್ ಕೊಟ್ಟು ಸುಮ್ಮನಾಗಿದ್ದಾರೆ. 

click me!