ಕಾಶ್ಮೀರಿ ಉಗ್ರರ ಆಯಸ್ಸು ಭಾರೀ ಕಮ್ಮಿ!

By Suvarna News  |  First Published Jul 4, 2022, 7:08 AM IST

* ಉಗ್ರವಾದಕ್ಕೆ ಸೇರಿದ 1 ವರ್ಷದಲ್ಲಿ ಶೇ.64 ಜನರ ಹತ್ಯೆ

* ದಕ್ಷಿಣ ಕಾಶ್ಮೀರದ 4 ಜಿಲ್ಲೇಲಿ ಹೆಚ್ಚು ಉಗ್ರ ಕೃತ್ಯ ದಾಖಲು

* ಕಾಶ್ಮೀರಿ ಉಗ್ರರ ಆಯಸ್ಸು ಭಾರೀ ಕಮ್ಮಿ!


ಶ್ರೀನಗರ(ಜು,04): ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನಾ ಕೃತ್ಯಗಳಿಗೆ ಸೇರ್ಪಡೆಯಾಗುವ ಯುವಕರ ಆಯಸ್ಸು ತೀರಾ ಕಡಿಮೆ. ಕಾರಣ ಹೀಗೆ ಸೇರಿದವರ ಪೈಕಿ ಶೇ.64ರಷ್ಟುಜನರು ಒಂದೇ ವರ್ಷದಲ್ಲಿ ಸೇನೆಯ ಗುಂಡಿಗೆ ಬಲಿಯಾಗುತ್ತಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2022ರ ಜ.2- ಮೇ 31ರೊಳಗೆ ರಾಜ್ಯದಲ್ಲಿ ಭಯೋತ್ಪಾದನೆಗೆ ಸೇರ್ಪಡೆಯಾದ 70-75 ಯುವಕರು ಮತ್ತು ಈ ಪೈಕಿ ಸಾವನ್ನಪ್ಪಿದವರ ಸಂಖ್ಯೆ ಆಧರಿಸಿ ಮಾಹಿತಿ ನೀಡಿರುವ ಸೇನೆಯ ಅಧಿಕಾರಿಗಳು, ಶೇ.64.1ರಷ್ಟು1 ವರ್ಷದಲ್ಲಿ ಸಾವನ್ನಪ್ಪುತ್ತಾರೆ. ಶೇ.26.6ರಷ್ಟುಜನರು ಮಾತ್ರ ಒಂದು ವರ್ಷಕ್ಕಿಂತ ಹೆಚ್ಚಿನ ಅವಧಿಗೆ ಜೀವಂತವಾಗಿರುತ್ತಾರೆ. ಶೇ.9.3ರಷ್ಟುಯುವ ಉಗ್ರರ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ.

Tap to resize

Latest Videos

ದಕ್ಷಿಣ ಕಾಶ್ಮೀರಿಗಳೇ ಹೆಚ್ಚು:

ಇನ್ನು ಉಗ್ರವಾದಕ್ಕೆ ಸೇರಿ ಹತರಾದವರಲ್ಲಿ 59 ಜನರು ದಕ್ಷಿಣ ಕಾಶ್ಮೀರಕ್ಕೆ ಸೇರಿದವರು. ಈ ವರ್ಷ ಕಣಿವೆಯಲ್ಲಿ ಹತರಾದ 90 ಉಗ್ರರ ಪೈಕಿ 26 ಜನರು ಪಾಕಿಸ್ತಾನ ಪ್ರಜೆಗಳು. ಇದು ಕಳೆದ ಇಡೀ ವರ್ಷದಲ್ಲಿ ಹತರಾದ ವಿದೇಶಿ ಉಗ್ರರ (20) ಪ್ರಮಾಣಕ್ಕಿಂತ ಹೆಚ್ಚು.

ಹತ ಉಗ್ರರಲ್ಲಿ 52 ಜನರು ಲಷ್ಕರ್‌, 20 ಜನರು ಜೈಷ್‌ ಎ ಮೊಹಮ್ಮದ್‌, 11 ಜನರು ಹಿಜ್ಬುಲ್‌ ಮುಜಾಹಿದೀನ್‌, ನಾಲ್ವರು ಅಲ್‌ ಬದ್‌್ರ ಸಂಘಟನೆಗೆ ಸೇರಿದವರು. ದಕ್ಷಿಣ ಕಾಶ್ಮೀರದ ಪುಲ್ವಾಮಾ (27), ಅನಂತ್‌ನಾಗ್‌ (12), ಕುಲ್ಗಾಂ (11)ಮತ್ತು ಶೋಪಿಯಾನ್‌ನಲ್ಲೇ (9) 59 ಉಗ್ರರನ್ನು ಹತ್ಯೆಗೈಯಲಾಗಿದೆ.

ಉಗ್ರರು- ಆಯಸ್ಸು

ಶೇ.64.1- 1 ವರ್ಷ

ಶೇ.26.6- ವರ್ಷಕ್ಕಿಂತ ಹೆಚ್ಚು

ಶೇ.9.3- ಮಾಹಿತಿ ಇಲ್ಲ

click me!