
ಹೈದರಾಬಾದ್(ಜು.04): ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ನೀತಿಯನ್ವಯ ‘ಗರೀಬ್ ಕಲ್ಯಾಣ’ (ಬಡವರ ಕಲ್ಯಾಣ)ಕ್ಕೆ ಒತ್ತು ನೀಡುವ ನಿರ್ಣಯವೊಂದನ್ನು ಬಿಜೆಪಿ ಕಾರ‍್ಯಕಾರಿಣಿ ಸಭೆ ಗೊತ್ತುವಳಿ ಅಂಗೀಕರಿಸಿದೆ. ಇದೇ ವೇಳೆ ತೆಲಂಗಾಣದಲ್ಲಿನ ಜನವಿರೋಧಿ ಸರ್ಕಾರಕ್ಕೆ ಅಂತ್ಯ ಹಾಡಿ ಜನಪರ ಸರ್ಕಾರ ರಚಿಸಲು ಪಣ ತೊಡುವ ರಾಜಕೀಯ ಗೊತ್ತುವಳಿಗೂ ಅದು ಅಂಗೀಕಾರ ನೀಡಿದೆ.
ಆರ್ಥಿಕ ಗೊತ್ತುವಳಿ:
- ಗರೀಬ್ ಕಲ್ಯಾಣ ಯೋಜನೆ ಮೂಲಕ ಬಡವರಿಗೆ ಆಹಾರ ಧಾನ್ಯ ಒದಗಿಸುವುದು
- ಸಾಮಾಜಿಕ ಭದ್ರತಾ ಯೋಜನೆಗಳ ಮೂಲಕ ಬಡವರಿಗೆ ಆರ್ಥಿಕ ಭದ್ರತೆ ನೀಡುವುದು
- ಜನಧನ ಯೋಜನೆಯಂಥವುಗಳ ಮೂಲಕ ಆರ್ಥಿಕ ಒಳಗೊಳ್ಳುವಿಕೆಗೆ ಒತ್ತು
- ಪ್ರಧಾನಮಂತ್ರಿ ಸ್ವನಿಧಿ ಯೋಜನೆಯ ಮೂಲಕ ಸ್ವಯಂ ಉದ್ಯೋಗಕ್ಕೆ ನೆರವು
- ಜಲಜೀವನ ಮಿಷನ್ ಮೂಲಕ ಎಲ್ಲರಿಗೂ ಕುಡಿಯುವ ನೀರು
- ಸಣ್ಣ ಹಾಗೂ ಬೃಹತ್ ಉದ್ದಿಮೆಗಳಿಗೆ ನೆರವು ನೀಡಿ ಆತ್ಮನಿರ್ಭರ ಭಾರತ ನಿರ್ಮಾಣ
ರಾಜಕೀಯ ಗೊತ್ತುವಳಿ
- ತೆಲಂಗಾಣದಲ್ಲಿನ ಆರ್ಥಿಕ, ಸಾಮಾಜಿಕ ಪರಿಸ್ಥಿತಿ ಕಳವಳಕಾರಿ
- ತೆಲಂಗಾಣದ ಇಂದಿನ ದುಃಸ್ಥಿತಿಗೆ ಪರಿವಾರವಾದಿ ಸರ್ಕಾರವೇ ಕಾರಣ
- ಎಲ್ಲರನ್ನೂ ಒಳಗೊಂಡ ಸದೃಢ ತೆಲಂಗಾಣ ನಿರ್ಮಿಸುವುದು
- ತೆಲಂಗಾಣದಲ್ಲಿ ಯುವಕರಿಗೆ ಉದ್ಯೋಗ ಸೃಷ್ಟಿಗೆ ಆದ್ಯತೆ
- ತೆಲಂಗಾಣದಲ್ಲಿ ಹಿಂದೆ ಮುಚ್ಚಿರುವ ಕಾರ್ಖಾನೆಗಳ ಪುನಾರಂಭಕ್ಕೆ ಆದ್ಯತೆ
- ಈಗಿನ ಕೆಸಿಆರ್ ಸರ್ಕಾರಕ್ಕೆ ಬಿಜೆಪಿಯೊಂದೇ ಪರ್ಯಾಯ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ