ದೆಹಲಿ(ಜೂ.27): ಅನ್‌ಲಾಕ್ ಮಧ್ಯೆ ಜೂನ್ 19 ರಿಂದ 26 ರವರೆಗೆ ದೆಹಲಿಯ ಸಾರ್ವಜನಿಕ ಸ್ಥಳಗಳಲ್ಲಿ ಫೇಸ್ ಮಾಸ್ಕ್ ಧರಿಸದಿದ್ದಕ್ಕಾಗಿ 1.3 ಲಕ್ಷ ಜನರಿಗೆ ದಂಡ ವಿಧಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
COVID-19 ಮಾನದಂಡಗಳನ್ನು ಉಲ್ಲಂಘಿಸಿದ್ದಕ್ಕಾಗಿ ಕಳೆದ ವಾರ 1.53 ಲಕ್ಷಕ್ಕೂ ಹೆಚ್ಚಿನ ಚಲನ್‌ಗಳನ್ನು ನೀಡಲಾಗಿದೆ. ಕೆಲವನ್ನು ಐಪಿಸಿ ಮತ್ತು ಸಾಂಕ್ರಾಮಿಕ ರೋಗಗಳ ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ದಾಖಲಿಸಲಾಗಿದೆ ಎಂದು ದೆಹಲಿ ಪೊಲೀಸ್ ಹೆಚ್ಚುವರಿ ಪಿಆರ್ ಅನಿಲ್ ಮಿತ್ತಲ್ ಹೇಳಿದ್ದಾರೆ.
undefined
ಶಿರಸಿ: ಮನೆಯವರು ಆತಂಕಗೊಂಡ್ರೂ ಹೆದರದ ಅಜ್ಜಿ, ಕೋವಿಡ್ ಗೆದ್ದ 96 ವರ್ಷದ ವೃದ್ಧೆ..!...
ದೇಶದಲ್ಲಿ ಕೊರೋನಾ ಎರಡನೇ ಅಲೆ ಇಳಿಮುಖವಾಗಿದ್ದರೂ ಡೆಲ್ಟಾ + ಮತ್ತಷ್ಟು ಆತಂಕ ಸೃಷ್ಟಿ ಮಾಡಿದೆ. ಒಂದು ಕಡೆ ವೈರಸ್ ವಿರುದ್ಧ ಹೋರಾಡುವಾಗ ಲಸಿಕೆ ಅಭಿಯಾನದತ್ತವೂ ಸರ್ಕಾರ ಗಮನ ಹರಿಸುತ್ತಿದೆ.
ಕಳೆದೊಂದು ವಾರದಿಂದ ಲಸಿಕೆ ಅಭಿಯಾನ ವೇಗ ಪಡೆದುಕೊಂಡಿದ್ದು, ತ್ವರಿತವಾಗಿ ವ್ಯಾಕ್ಸಿನೇಷನ್ ನಡೆಸಲಾಗುತ್ತಿದೆ. ಈ ನಡುವೆ ಕೇರಳ, ರಾಜಸ್ಥಾನ, ತಮಿಳುನಾಡು, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಡೆಲ್ಟಾ+ ವೈರಸ್ ಕಾಣಿಸಿಕೊಂಡಿದೆ.