ದಿವ್ಯಾಂಗ ಮಗುವಿಗೆ ಪ್ರವೇಶ ನಿರಾಕರಿಸಿದ ಇಂಡಿಗೋ ಏರ್‌ಲೈನ್ಸ್

By Anusha Kb  |  First Published May 9, 2022, 11:26 AM IST
  • ಇತರ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ ಎಂದು ಪ್ರವೇಶ ನಿರಾಕರಣೆ
  • ದಿವ್ಯಾಂಗ ಮಗುವಿಗೆ ಪ್ರವೇಶ ನಿರಾಕರಿಸಿದ ಇಂಡಿಗೋ ಏರ್‌ಲೈನ್ಸ್ 
  • ಪ್ರಯಾಣಿಕರು ಅಭ್ಯಂತರವಿಲ್ಲವೆಂದ ನಂತರ ಅನುಮತಿ ನೀಡದ ಇಂಡಿಗೋ

ರಾಂಚಿ: ಇಂಡಿಗೋ ಏರ್‌ಲೈನ್ಸ್ (IndiGo airlines) ವಿಶೇಷ ಚೇತನ ಮಗುವಿಗೆ ಬೋರ್ಡಿಂಗ್ ನಿರಾಕರಿಸಿದ ಘಟನೆ ಜಾರ್ಖಂಡ್ ರಾಜಧಾನಿ ರಾಂಚಿಯ ಏರ್‌ಪೋರ್ಟ್‌ನಲ್ಲಿ  ಶನಿವಾರ (ಏ.7) ನಡೆದಿದ್ದು, ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಏರ್‌ಪೋರ್ಟ್‌ನ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ರಾಂಚಿಯಿಂದ ಹೈದರಾಬಾದ್‌ಗೆ ಹೋಗುವ ವಿಮಾನದಲ್ಲಿ ವಿಶೇಷ ಸಾಮರ್ಥ್ಯ ಹೊಂದಿರುವ ಮಗುವಿಗೆ (specially abled child) ಹತ್ತಲು ನಿರಾಕರಿಸಿದ ಘಟನೆ ನಡೆದಿದೆ. ಸಹ ಪ್ರಯಾಣಿಕರಾದ ಮನಿಶಾ ಗುಪ್ತಾ (Manisha Gupta) ಫೇಸ್‌ಬುಕ್‌ನಲ್ಲಿ ಈ ಘಟನೆಯನ್ನು ವಿವರಿಸಿದ ನಂತರ ಘಟನೆ ಬೆಳಕಿಗೆ ಬಂದಿದೆ. ಮಗುವು ಆರಂಭದಲ್ಲಿ ಗಲಾಟೆ ಮಾಡುತ್ತಿತ್ತು. ಎಂದು ಅವರು ಬರೆದಿದ್ದಾರೆ ಮತ್ತು ಪೋಷಕರು ಅವನನ್ನು ಹೇಗೆ ಶಾಂತಗೊಳಿಸಬೇಕೆಂದು ತಿಳಿದಿದ್ದರು ಮತ್ತು ಆತನನ್ನು ಶಾಂತಗೊಳಿಸಿದರು. ಇದರ ಹೊರತಾಗಿಯೂ ವಿಮಾನಯಾನ ಸಿಬ್ಬಂದಿ ಅವರನ್ನು ವಿಮಾನ ಏರಲು ಬಿಡಲು ನಿರಾಕರಿಸಿದರು.

Tap to resize

Latest Videos

ಇಂಡಿಗೋ ಸಿಬ್ಬಂದಿ ಮಗುವಿಗೆ ವಿಮಾನ ಏರಲು ಅನುಮತಿ ನೀಡುವುದಿಲ್ಲ ಎಂದು ಘೋಷಿಸಿದರು. ಏಕೆಂದರೆ ಈ ಮಗುವಿನಿಂದ ಇತರ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ ಎಂದು ಅವರು ಹೇಳಿದರು. ಆದರೆ ಇತರ ಸಹ ಪ್ರಯಾಣಿಕರು ಮಗು ಮತ್ತು  ಪೋಷಕರ ಬೆಂಬಲಕ್ಕೆ ಬಂದರು ಮತ್ತು ಮಗು ಮತ್ತು ಅವನ ಹೆತ್ತವರು ವಿಮಾನವನ್ನು ಹತ್ತಲು ನಮಗೆ ಯಾವುದೇ ಅಭ್ಯಂತರವಿಲ್ಲ ಎಂದು ಸಿಬ್ಬಂದಿಗೆ ಭರವಸೆ ನೀಡಿದರು. ಪ್ರಯಾಣಿಕರಲ್ಲಿ ವೈದ್ಯರ ನಿಯೋಗವು ಮಗುವಿಗೆ ಪ್ರಯಾಣಿಸಲು ಅವಕಾಶ ನೀಡುವಂತೆ ಅಧಿಕಾರಿಗೆ ಮನವಿ ಮಾಡಿದೆ. ಆದರೆ, ಎಲ್ಲರ ವಿನಂತಿಗಳು ಮತ್ತು ಮನವಿಗಳ ನಂತರವೂ ಇಂಡಿಗೋ ವಿಮಾನವು ಮಗು ಮತ್ತು ಅವನ ಪೋಷಕರು ಸೇರಿದಂತೆ ಮೂವರು ಪ್ರಯಾಣಿಕರನ್ನು ಬಿಟ್ಟು ರಾಂಚಿಯಿಂದ ಹೈದರಾಬಾದ್‌ಗೆ (Hyderabad) ಹಾರಿತು.

There is zero tolerance towards such behaviour. No human being should have to go through this! Investigating the matter by myself, post which appropriate action will be taken. https://t.co/GJkeQcQ9iW

— Jyotiraditya M. Scindia (@JM_Scindia)

ಈ ವಿಚಾರ ಚರ್ಚೆಗೀಡಾಗುತ್ತಿದ್ದಂತೆ ಇಂಡಿಗೋ ವಿಮಾನಯಾನ ಸಂಸ್ಥೆಯು ತನ್ನ ಹೇಳಿಕೆ ಬಿಡುಗಡೆ ಮಾಡಿದೆ. ಇತರ ಪ್ರಯಾಣಿಕರು ಸುರಕ್ಷತೆಯ ದೃಷ್ಟಿಯಿಂದ ವಿಶೇಷ ಸಾಮರ್ಥ್ಯವುಳ್ಳ ಮಗುವನ್ನು ತನ್ನ ಕುಟುಂಬದೊಂದಿಗೆ ಮೇ 7 ರಂದು ವಿಮಾನದಲ್ಲಿ ಸಾಗಲು ಬಿಡಲಿಲ್ಲ. ವಿಮಾನ ಸಿಬ್ಬಂದಿ ಕೊನೆಯ ಕ್ಷಣದವರೆಗೂ ಆ ಮಗು ಶಾಂತವಾಗಲು ಕಾಯುತ್ತಿದ್ದರು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಇಂಡಿಗೋ ತನ್ನ ಹೇಳಿಕೆಯಲ್ಲಿ ತಿಳಿಸಿದೆ. 

ಇದಾದ ಬಳಿಕ ವಿಮಾನಯಾನ ಸಂಸ್ಥೆಯು ಆ ಕುಟುಂಬಕ್ಕೆ ಹೋಟೆಲ್ ವಾಸ್ತವ್ಯವನ್ನು ಒದಗಿಸಿದೆ. ಈ ಕುಟುಂಬವು ಇಂದು ಬೆಳಗ್ಗೆ ತಾವು ಹೋಗಬೇಕಾದಲ್ಲಿಗೆ ತೆರಳಿದ್ದಾರೆ. ಇಂಡಿಗೋ ತನ್ನ ಉದ್ಯೋಗಿಗಳಿಗಾಗಲಿ ಅಥವಾ ಗ್ರಾಹಕರಿಗಾಗಲಿ ಎಲ್ಲರನ್ನು ಒಳಗೊಳ್ಳುವ ಸಂಸ್ಥೆ ಎಂದು ಹೆಮ್ಮೆಪಡುತ್ತದೆ. ಮತ್ತು ಪ್ರತಿ ತಿಂಗಳು 75 ಸಾವಿರಕ್ಕೂ ವಿಶೇಷ ಸಾಮರ್ಥ್ಯವುಳ್ಳ ಪ್ರಯಾಣಿಕರು ಇಂಡಿಗೋ ಮೂಲಕ ಹಾರಾಟ ನಡೆಸುತ್ತಾರೆ ಎಂದು ಇಂಡಿಗೋ ಸಂಸ್ಥೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ. 

IndiGo Airlines Flight : ಇಂಡಿಗೋ ವಿಮಾನದಲ್ಲಿ ತುಳು ಅನೌನ್ಸ್‌ಮೆಂಟ್‌!

ಘಟನೆಗೆ ಸಂಬಂಧಿಸಿದಂತೆ ಕೇಂದ್ರ ನಾಗರಿಕ ವಿಮಾನಯಾನ ಸಚಿವ (Union Civil Aviation Minister) ಜ್ಯೋತಿರಾದಿತ್ಯ ಸಿಂಧಿಯಾ (Jyotiraditya Scindia) ಪ್ರತಿಕ್ರಿಯಿಸಿದ್ದು, ಈ ಬಗ್ಗೆ ಸ್ವತಃ ತನಿಖೆ ನಡೆಸುವುದಾಗಿ ಹೇಳಿದ್ದಾರೆ. ಅಂತಹ ನಡವಳಿಕೆಯ ಬಗ್ಗೆ ಯಾವುದೇ ಸಹನೆ ಇಲ್ಲ. ಯಾವ ಮನುಷ್ಯನೂ ಈ ರೀತಿ ಆಡಬಾರದು. ಈ ಬಗ್ಗೆ ನಾನೇ ತನಿಖೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಈ ಬಗ್ಗೆ ವಿಮಾನಯಾನ ನಿಯಂತ್ರಕರು ಇಂಡಿಗೋದಿಂದ ವರದಿ ಕೇಳಿದ್ದಾರೆ ಎಂದು ಡಿಜಿಸಿಎ ಮುಖ್ಯಸ್ಥ ಅರುಣ್ ಕುಮಾರ್ (Arun Kumar) ಪಿಟಿಐಗೆ ತಿಳಿಸಿದ್ದಾರೆ. ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) (General of Civil Aviation) ಈ ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಅವರು ಹೇಳಿದರು.

ಮಾನವ ಕಳ್ಳ ಸಾಗಣೆಗೆ ಸಹಕಾರ: ಇಂಡಿಗೋ ಏರ್‌ಲೈನ್ಸ್‌ ಸಿಬ್ಬಂದಿ ಸೆರೆ

click me!