
ನವದೆಹಲಿ(ಏ.26): ಭಾನುವಾರ ಬೆಳಗ್ಗೆ 11 ಗಂಟೆಗೆ ಮನ್ ಕೀ ಬಾತ್‌ನಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೊರೋನಾ ವಿರುದ್ಧದ ಸಮರದಲ್ಲಿ ಸರ್ಕಾರದ ಜೊತೆಗೆ ಇಡೀ ದೇಶವೇ ಒಂದಾಗಿ ಹೋರಾಡುತ್ತಿದೆ. ಈ ಸಮರದಲ್ಲಿ ದೇಶದ ಪ್ರತಿಯೊಬ್ಬನೂ ಯೋಧನೇ ಎಂದು ಶ್ಲಾಘಿಸಿದ್ದಾರೆ.
"
ಮನ್ ಕೀ ಬಾತ್‌ನಲ್ಲಿ ಮೋದಿ ಉಲ್ಲೇಖಿಸಿದ ಪ್ರಮುಖ ಅಂಶಗಳು
* ದೇಶದ ಪ್ರತಿಯೊಬ್ಬ ನಾಗರಿಕ ಈ ಮಸರದಲ್ಲಿ ಸೈನಿಕರಾಗಿದ್ದಾರೆ. ಇದು ನಮ್ಮ ಭಾಗ್ಯ. ನೀವು ಎಲ್ಲೇ ನೋಡಿದ್ರೂ ಇದು ಕೊರೋನಾ ವಿರುದ್ಧ ಜನರ ಸಮರ ಎಂದು ತಿಳಿಯುತ್ತದೆ. ಇಡೀ ವಿಶ್ವವೇ ಈ ಮಹಾಮಾರಿ ವಿರುದ್ಧ ಹೋರಾಡುತ್ತಿದೆ. ಹೀಗಿರುವಾಗ ಭವಿಷ್ಯದಲ್ಲಿ ಈ ಕುರಿತು ಉಲ್ಲೇಖವಾದಾಗೆಲ್ಲಾ ಭಾರತದ ಜನರ ಹೋರಾಟ ತಪ್ಪದೇ ನೆನಪಿಸಿಕೊಳ್ಳಲಾಗುತ್ತದೆ ಎಂದಿದ್ದಾರೆ.
ದೇಶದ ಜನಕ್ಕೆ ತುಸು ನೆಮ್ಮದಿ: ಲಾಕ್‌ಡೌನ್‌ನಿಂದ ತಪ್ಪಿದ ಭಾರೀ ಅಪಾಯ!
* ಮನ್ ಕೀ ಬಾತ್ ಕಾರ್ಯಕ್ರಮದ 64 ನೇ ಸಂಚಿಕೆಯಲ್ಲಿ ಮಾತನಾಡಿದ ನರೇಂದ್ರ ಮೋದಿ ಲಾಕ್ಡೌನ್ ಸಮಯದಲ್ಲಿ ಚಪ್ಪಾಳೆ ತಟ್ಟುವಂತೆ, ದೀಪ ಬೆಳಗುವಂತೆ ಹೇಳಿದ್ದೆ. ಜನರು ಇದನ್ನು ಶಿಸ್ತಿನಿಂದ ಪಾಲಿಸಿದ್ದರು. ಈಈ ರೀತಿಯ ಆಂದೋಲನಗಳು ಪ್ರತಿಯೊಬ್ಬರಲ್ಲೂ ಸ್ಫೂರ್ತಿ ತುಂಬಿವೆ ಎಂದಿದ್ದಾರೆ.
* ಈ ಹೋರಾಟದಲ್ಲಿ ಎಲ್ಲರೂ ಪರಸ್ಪರ ಸಹಾಯ ಮಾಡಿ ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಕೆಲವರು ತಮ್ಮ ವೇತನ ಈ ಸಮರಕ್ಕೆ ದಾನ ಮಾಡಿದರೆ, ಕೆಲವರು ಮಾಸ್ಕ್ ತಯಾರಿಸುತ್ತಿದ್ದಾರೆ. ಇನ್ನು ಕೆಲವರು ತಾವು ಬೆಳೆದ ತರಕಾರಿಯನ್ನು ಬಡವರಿಗೆ ನಿಡುತ್ತಿದ್ದಾರೆ. ಇನ್ನು ಕೆಲ ಕಾರ್ಮಿಕರು ಕ್ವಾರಂಟೈನ್ ಮಾಡಲಾದ ಶಾಲೆಯನ್ನು ದುರಸ್ಥಿ ಮಾಡುತ್ತಿದ್ದಾರೆ. ಇದೇ ಕೊರೊನಾ ವಿರುದ್ಧದ ಹೋರಾಟಕ್ಕೆ ಮತ್ತಷ್ಟು ಬಲ ತುಂಬುತ್ತದೆ.
* ನಮ್ಮ ಸಮಾಜ ಬದಲಾಗಿದೆ. ಹೊಸ ಹೊಸ ವಿಚಾರಗಳನ್ನು ನಾವು ತಿಳಿದುಕೊಳ್ಳುತ್ತಿದ್ದೇವೆ. ನಮಗೆ ಸಹಾಯ ಮಾಡುತ್ತಿರುವವರಿಗೆ ಧನ್ಯವಾದ ಹೇಳಲು ಹೊಸ ಹೊಸ ಮಾರ್ಗಗಳನ್ನು ಕಂಡು ಹಿಡಿದಿದ್ದೇವೆ. ಕೊರೋನಾ ವಾರಿರ್ಯಸ್ ಬಗ್ಗೆ ಅನೇಕು ಸಾಮಾಜಿಕ ಜಾಲತಾಣದಲ್ಲಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಪೊಲೀಸರ ಬಗ್ಗೆ ನಮಗೆ ಇದ್ದ ಅಭಿಪ್ರಾಯ ಕೂಡ ಬದಲಾಗಿದೆ. ಈ ಬದಲಾವಣೆ ಮುಂದಿನ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರಭಾವ ಬೀರಲಿದೆ
ಬಿಜೆಪಿಯ ಹಿರಿಯ ನಾಯಕ ಮಲ್ಪೆ ಸೋಮಶೇಖರ್ ಭಟ್‌ಗೆ ಮೋದಿ ಕರೆ
* ನಾನು ದೇಶದ 130 ಕೋಟಿ ಜನರಿಗೂ ಆಭಾರಿಯಾಗಿದ್ದೇನೆ. ಪ್ರತಿಯೊಬ್ಬ ವ್ಯಕ್ತಿಯೂ ಕೊರೋನಾ ವಿರುದ್ಧ ಹೋರಾಡುತ್ತಿದ್ದಾರೆ. ರೈಲ್ವೆ, ವಿಮಾನ ಸಂಸ್ಥೆಗಳು ಔಷಧಗಳನ್ನು ದೇಶದ ಮೂಲೆ ಮೂಲೆಗೆ ತಲುಪಿಸುವ ಕೆಲಸ ಮಾಡುತ್ತಿವೆ
* ಭಾರತದ ಆಯುರ್ವೇದವನ್ನೂ ಜನರು ಇಂದು ಗೌರವದಿಂದ ಹಾಗೂ ವಿಶಿಷ್ಟ ಭಾವದಿಂದ ಕಾಣುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ